Facebook ಬಳಕೆದಾರರು ದ್ವೇಷಭಾಷಣಗಳ ವೀಕ್ಷಣೆಯಲ್ಲಿ ಹೆಚ್ಚು ಆಸಕ್ತರು: ಫೇಸ್‌ಬುಕ್‌

ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಫೇಸ್‌ಬುಕ್‌, ರಾಜಕೀಯವಾಗಿ ತಾರತಮ್ಯ ನೀತಿ ಅನುಸರಿಸುತ್ತಿದೆ. ಜಾಗತಿಕವಾಗಿ ಮತ್ತು ಭಾರತದಲ್ಲಿ (ಬಿಜೆಪಿ) ಬಲಪಂಥೀಯ ಧೋರಣೆಗಳ ಪ್ರಸಾರಕ್ಕೆ ಫೇಸ್‌ಬುಕ್‌ ನೆರವಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಅಂತೆಯೇ ಫೇಸ್‌ಬುಕ್‌ ಕೂಡ ತನ್ನ ಬಲಪಂಥೀಯ ಒಲವನ್ನು ಸಾಬೀತು ಪಡಿಸುವ ರೀತಿಯಲ್ಲಿ ವರ್ತಿಸುತ್ತಿದೆ. ಈ ನಡುವೆ ಫೇಸ್‌ಬುಕ್‌ ದ್ವೇಷ ಭಾಷಣಗಳ ಕುರಿತಂತೆ ಮಾಹಿತಿ ನೀಡಿದ್ದು, ಜಾಗವಾಗಿ ಬಳಕೆದಾರರು ದ್ವೇಷಭಾಷಣಗಳ ವೀಕ್ಷಣೆಯಲ್ಲಿ ಹೆಚ್ಚು ಅಸಕ್ತಿ ಹೊಂದಿದ್ದಾರೆ ಎಂದು ಹೇಳಿದೆ.

ಫೇಸ್‌ಬುಕ್‌ ಬಳಸುತ್ತಿರುವ ಬಳಕೆದಾರರ ಪೈಕಿ, ಜಾಗತಿಕವಾಗಿ ಪ್ರತಿ 10,000 ಕ್ಕೆ 10 ರಿಂದ 11 ಬಳಕೆದಾರರು ದ್ವೇಷ ಭಾಷಣದ ಫೋಸ್ಟ್‌ಗಳಲ್ಲಿ ಹೆಚ್ಚು ಒಲವು ಹೊಂದಿದ್ದಾರೆ. ಅವರು ಅಂತಹ ಪೋಸ್ಟ್‌ಗಳನ್ನು ಇಷ್ಟಪಡುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂದು ಮಾಹಿತಿ ನೀಡಿದೆ.

ಫೇಸ್‌ಬುಕ್ ಜಾಗತಿಕ ಮಟ್ಟದಲ್ಲಿ‌ 180 ಕೋಟಿ ಬಳಕೆದಾರರನ್ನು ಹೊಂದಿದ್ದು, ಭಾರತವು ಫೇಸ್‌ಬುಕ್‌ ಸಂಸ್ಥೆಗೆ ಅತಿ ದೊಡ್ಡ ಮಾರುಕಟ್ಟೆಯಾಗಿದೆ ಎಂದು ಹೇಳಿದೆ.

ಇದನ್ನೂ ಓದಿ: ಬಿಜೆಪಿ ಒಲವು ಹೊಂದಿದ್ದ ಫೇಸ್‌ಬುಕ್‌ ಕಾರ್ಯನಿರ್ವಾಹಕಿ ಅಂಕಿದಾಸ್‌ ರಾಜೀನಾಮೆ!

ಜಾಗತಿಕವಾಗಿ ಪ್ರತಿ 10 ಸಾವಿರ ವೀಕ್ಷಣೆಯಲ್ಲಿ 10 ರಿಂದ 11 ಬಳಕೆದಾರರು ದ್ವೇಷ ಭಾಷಣದ ಕಂಟೆಂಟ್‌ಗಳನ್ನು ವೀಕ್ಷಿಸಿರುತ್ತಾರೆ. ಜುಲೈನಿಂದ ಸೆಪ್ಟೆಂಬರ್‌ ಅವಧಿಯಲ್ಲಿ 2.21 ಕೋಟಿ ದ್ವೇಷ ಭಾಷಣದ ಕಂಟೆಂಟ್‌ ತೆಗೆದುಹಾಕುವಲ್ಲಿ ಫೇಸ್‌ಬುಕ್‌ ಯಶಸ್ವಿಯಾಗಿದೆ. ಇದರಲ್ಲಿ 1.24 ಕೋಟಿ ಕಂಟೆಂಟ್‌ಗಳು ಮಕ್ಕಳ ಅಶ್ಲೀಲತೆ ಮತ್ತು ಲೈಂಗಿಕ ಶೋಷಣೆಗೆ ಸಂಬಂಧಿಸಿದ್ದು, 35 ಲಕ್ಷ ಪೋಸ್ಟ್‌ಗಳು ಕಿರುಕುಳಕ್ಕೆ ಸಂಬಂಧಿಸಿದವುಗಳು ಎಂದು ಹೇಳಿದೆ.

ಫೇಸ್‌ಬುಕ್‌, ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌) ಕುರಿತ ತಂತ್ರಜ್ಞಾನದ ಅಭಿವೃದ್ಧಿಗೆ ಹೆಚ್ಚಿನ ಹೂಡಿಕೆ ಮಾಡುತ್ತಿದೆ. ಇದರ ಫಲವಾಗಿ ದ್ವೇಷ ಭಾಷಣದ ಪೋಸ್ಟ್‌ ಹಾಗೂ ವಿಡಿಯೊ ಕಂಟೆಂಟ್‌ಗಳ ಮೇಲೆ ಇತ್ತೀಚಿನ ವರ್ಷಗಳಲ್ಲಿ ನಿಯಂತ್ರಣ ಸಾಧಿಸಿದೆ ಇದರಿಂದಾಗಿ ಶೀಘ್ರವಾಗಿ ದ್ವೇಷ ಭಾಷಣದ ಕಂಟೆಂಟ್‌ಗಳ ಮೇಲೆ ನಿಯಂತ್ರಣ ಸಾಧ್ಯವಾಗುತ್ತಿದೆ ಎಂದು ಹೇಳಿದೆ.

ಸರ್ಕಾರಗಳು ಜನವರಿಯಿಂದ ಜೂನ್‌ ಅವಧಿಯಲ್ಲಿ ಫೇಸ್‌ಬುಕ್‌ ಬಳಕೆದಾರರ ಮಾಹಿತಿ ಕೇಳುವ ಪ್ರಮಾಣವು ಶೇ.23ರಷ್ಟು ಹೆಚ್ಚಾಗಿದೆ. ಮಾಹಿತಿ ಕೇಳುವ ದೇಶಗಳ ಸಾಲಿನಲ್ಲಿ ಭಾರತವು ಎರಡನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿಅಮೆರಿಕವಿದೆ. ಭಾರತವು ಒಟ್ಟು 35,560 ಕೋರಿಕೆಗಳನ್ನು ಈ ಅವಧಿಯಲ್ಲಿ ಸಲ್ಲಿಸಿದೆ. ಶೇ.50ರಷ್ಟು ಪ್ರಕರಣಗಳಲ್ಲಿ ಫೇಸ್‌ಬುಕ್‌ ತನ್ನ ಬಳಕೆದಾರರಿಗೆ ಸಂಬಂಧಿಸಿದ ಒಂದಲ್ಲ ಒಂದು ವಿವರವನ್ನು ಸರಕಾರಕ್ಕೆ ನೀಡಿದೆ. 2020ರಲ್ಲಿ ಜಾಗತಿಕವಾಗಿ ದೇಶಗಳು ಫೇಸ್‌ಬುಕ್‌ ಬಳಕೆದಾರರ ಮಾಹಿತಿ ಕೋರಿರುವ ಪ್ರಮಾಣ 1.40 ಲಕ್ಷದಿಂದ 1.73 ಲಕ್ಷಕ್ಕೆ ಹೆಚ್ಚಳವಾಗಿದೆ ಎಂದು ಫೇಸ್‌ಬುಕ್‌ ಹೇಳಿದೆ.


ಇದನ್ನೂ ಓದಿ: ಒಂದೂ ಸ್ಥಾನ ಗೆಲ್ಲದ ತಮಿಳುನಾಡಿನಲ್ಲಿ ಖಾತೆ ತೆರೆಯಲು ಹಪಾಹಪಿಸುತ್ತಿದೆ ಬಿಜೆಪಿ !

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights