ಬಿಜೆಪಿ ಒಲವು ಹೊಂದಿದ್ದ ಫೇಸ್‌ಬುಕ್‌ ಕಾರ್ಯನಿರ್ವಾಹಕಿ ಅಂಕಿದಾಸ್‌ ರಾಜೀನಾಮೆ!

ಆಡಳಿತಾರೂಢ ಬಿಜೆಪಿ ಪಕ್ಷದ ಪರವಾದ ಒಲವು ಹೊಂದಿರುವ ಫೇಸ್‌ಬುಕ್‌ ಮುಖ್ಯಸ್ಥೆ ಅಂಖಿದಾಸ್‌ ಅವರು ದೇಶದ ದೇಶದ ಕಂಪನೀಸ್ ಕಂಟೆಂಟ್ ಮಾಡರೇಶನ್ ನೀತಿಯಲ್ಲಿ ಹಸ್ತಕ್ಷೇಪ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಫೇಸ್‌ಬುಕ್‌ನ ತಮ್ಮ ಹುದ್ದೆಗೆ ಅಂಖಿದಾಸ್‌ ರಾಜೀನಾಮೆ ನೀಡಿದ್ದಾರೆ.

ಫೇಸ್‌ಬುಕ್ ಇಂಡಿಯಾ, ದಕ್ಷಿಣ ಮತ್ತು ಮಧ್ಯ ಏಷ್ಯಾದ ಸಾರ್ವಜನಿಕ ನೀತಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದ ಅಂಕಿ ದಾಸ್, ಸಾರ್ವಜನಿಕ ಸೇವೆಯಲ್ಲಿ ತಮ್ಮನ್ನು ಮತ್ತಷ್ಟು ತೊಡಗಿಸಿಕೊಳ್ಳುವ ಉದ್ದೇಶದಿಂದ ಕಂಪನಿಯನ್ನು ತೊರೆಯುತ್ತಿದ್ದೇನೆ ಎಂದು ಹೇಳಿದ್ದಾರೆ.

“2011 ರಲ್ಲಿ ಕಂಪನಿಗೆ ಸೇರಿದ ಸಮಯದಲ್ಲಿ ನಾವು ಒಂದು ಸಣ್ಣ ಅನ್ ಲಿಸ್ಟೆಡ್ ಸ್ಟಾರ್ಟಪ್ ಆಗಿದ್ದೆವು,, ಆಗ ನಮ್ಮ ಮಿಷನ್ ಮತ್ತು ಭಾರತದಲ್ಲಿ ಜನರನ್ನು ಸಂಪರ್ಕಿಸುವ ಉದ್ದೇಶವನ್ನಷ್ಟೇ ಹೊಂದಿತ್ತು. . ಒಂಬತ್ತು ದೀರ್ಘ ವರ್ಷಗಳ ನಂತರ, ಮಿಷನ್ ದೊಡ್ಡ ಮಟ್ಟದಲ್ಲಿ ಗುರಿ ಹೊಂದಿದೆ. ಕಂಪನಿಯ ನಂಬಲಾಗದಷ್ಟು ಸ್ಮಾರ್ಟ್ ಮತ್ತು ಪ್ರತಿಭಾವಂತ ಜನರಿಂದ, ವಿಶೇಷವಾಗಿಪಾಲಿಸಿ ಟೀಂ ಜನರಿಂದ ನಾನು ಕಲಿತದ್ದು ಅಗಾಧ. ಇದು ವಿಶೇಷ ಕಂಪನಿ ಮತ್ತು ವಿಶೇಷ ಜನರ ಗುಂಪು. ನಾನು ನಿಮಗೆ ಮತ್ತು ಕಂಪನಿಗೆ ಉತ್ತಮ ಸೇವೆ ಸಲ್ಲಿಸಿದ್ದೇನೆ ನಾನು ಫೇಸ್‌ಬುಕ್‌ನಲ್ಲಿ ಸಂಪರ್ಕದಲ್ಲಿರುತ್ತೇನೆ” ಎಂದು ಸಹೋದ್ಯೋಗಿಗಳಿಗೆ ಪತ್ರ ಬರೆದಿದ್ದಾರೆ.

“ಅಂಖಿ ದಾಸ್‌ ತಮ್ಮ ಭಾರತದ ಆರಂಭಿಕ ಉದ್ಯೋಗಿಗಳಲ್ಲಿ ಒಬ್ಬರಾಗಿದ್ದರು ಮತ್ತು ಕಳೆದ 9 ವರ್ಷಗಳಲ್ಲಿ ಕಂಪನಿಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ಕಳೆದ 2 ವರ್ಷಗಳಿಂದ ನನ್ನ ನಾಯಕತ್ವದ ತಂಡದ ಭಾಗವಾಗಿದ್ದಾರೆ, ಇದರಲ್ಲಿ ಅವರು ಅಪಾರ ಕೊಡುಗೆಗಳನ್ನು ನೀಡಿದ್ದಾರೆ. ಅವರ ಸೇವೆಗಾಗಿ ನಾವು ಕೃತಜ್ಞರಾಗಿರುತ್ತೇವೆ ಮತ್ತು ಅವರ ಉತ್ತಮ ಭವಿಷ್ಯಕ್ಕಾ ಶುಭ ಹಾರೈಸುತ್ತೇವೆ ” ಎಂದು ಫೇಸ್‌ಬುಕ್ ಇಂಡಿಯಾದ ಮುಖ್ಯಸ್ಥ ಅಜಿತ್ ಮೋಹನ್ ಹೇಳಿದ್ದಾರೆ.


ಇದನ್ನೂ ಓದಿ: ದ್ವೇಷದ ಪ್ರಚೋದನೆಯಿಂದ ಲಾಭ ಗಳಿಸುತ್ತಿದೆ ಫೇಸ್‌ಬುಕ್‌; ಉದ್ಯೋಗ ತೊರೆದ ಭಾರತ ಮೂಲದ ಇಂಜಿನಿಯರ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights