ಸಿಡಿ ಬಿಡುಗಡೆ ಮಾಡದಿರಲು ಸಾಹುಕಾರ ಕೊಟ್ಟಿದ್ರಂತೆ ಕೋಟಿ ಕೋಟಿ ಹಣ!

ರಮೇಶ್ ರಾಸಲೀಲೆ ಸಿಡಿ ವಿಚಾರ ದಿನದಿಂದ ದಿನಕ್ಕೆ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಸಿಡಿ ಬಿಡುಗಡೆ ಮಾಡುವುದಿಲ್ಲ ಎಂದು ಸಿಡಿ ಗ್ಯಾಂಗ್ ಸಾಹುಕಾರನ ಬಳಿ ಕಪ್ಪ ವಸೂಲಿ ಮಾಡಿದ್ರು ಎನ್ನುವ ಮಾಹಿತಿ ಹೊರ ಬಿದ್ದಿದೆ.

ಸಿಡಿ ವಿಚಾರದ ತನಿಖೆ ಎಸ್ಐಟಿಗೆ ವಹಿಸಲಾಗಿದ್ದು, ಆರಂಭದಿಂದಲೂ ಸಾಕಷ್ಟು ಮಾಹಿತಿ ಎಸ್ಐಟಿ ಪಡೆಯುತ್ತಿದೆ. ಸದ್ಯ ರೋಚಕ ಎಂಬಂತೆ ರಮೇಶ್ ಜಾರಕಿಹೊಳಿ ಬಳಿ ಸಿಡಿ ಗ್ಯಾಂಗ್ ಭಾರಿ ಮೊತ್ತದ ಹಣ ಡಿಮ್ಯಾಂಡ್ ಮಾಡಿತ್ತಂತೆ. ಈಗಾಗಲೇ 5 ಕೋಟಿ ಹಣವನ್ನು ಈ ಸಿಡಿ ಗ್ಯಾಂಗ್ ಜಾರಕಿಹೊಳಿ ಹತ್ತಿರ ಪೀಕಿತ್ತು ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

ಸಿಡಿ ಬಿಡುಗಡೆ ಮಾಡುವುದಾಗಿ ಹೆದರಿಸಿದ್ದ ಸಿಡಿ ಗ್ಯಾಂಗ್ ರಮೇಶ್ ಬಳಿ 5 ಕೋಟಿ ಕಪ್ಪ ಪಡೆದುಕೊಂಡಿತ್ತು. ಆದರೆ ಸಚಿವ ಸ್ಥಾನ ಸ್ವೀಕರಿಸಿದ ಬಳಿಕ ರಮೇಶ್ ಬಳಿ ನೂರು ಕೋಟಿಗೆ ಡಿಮ್ಯಾಂಡ್ ಮಾಡಿತ್ತು ಎನ್ನಲಾಗುತ್ತಿದೆ. ಆದರೆ ಕೊನೆ ಬಾರಿಗೆ ಸಿಡಿ ಗ್ಯಾಂಗ್ ಡಿಮ್ಯಾಂಡ್ ದೊಡ್ಡ ಪ್ರಮಾಣದಲ್ಲಿ ಇತ್ತು. ಹೀಗಾಗಿ ಹಣ ಕೊಟ್ಟು ಕೊಟ್ಟು ಸಾಕಾಗಿ ಅಷ್ಟು ಹಣ ಕೊಡಲಾಗುವುದಿಲ್ಲ ಬೇಕಾದ್ ಮಾಡಿಕೊಳ್ಳಿ ಎಂದಿದ್ರಂತೆ ಸಾಹುಕಾರ್. ಇದಾದ ಬಳಿಕ ಸಿಡಿ ಬಿಡುಗಡೆಗೆ ಪ್ಲಾನ್ ಮಾಡಲಾಗಿತಂತೆ.

ಇದಕ್ಕೆ ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ಯನ್ನು ಮುಂದೆ ಇಟ್ಟುಕೊಂಡ ಗ್ಯಾಂಗ್, ಸಿಡಿ ವಿಚಾರ ಬಹಿರಂಗಗೊಳಿಸಲು ಆಸೆ ಹುಟ್ಟಿಸಿತ್ತು. ಅವರಿಗೆ ಸ್ವಲ್ಪ ಹಣ ಕೊಟ್ಟ ಗ್ಯಾಂಗ್ ಪ್ಲ್ಯಾನ್ ನಂತೆ ಮಾರ್ಚ್ 2ಕ್ಕೆ ಸಿಡಿ ಬಿಡುಗಡೆ ಮಾಡಿಸಿತ್ತು ಎಂಬ ವಿಚಾರ ತನಿಖೆಯಿಂದ ಬಯಲಾಗಿದೆ.

ಸಿಡಿ ಬಿಡುಗಡೆ ಆದರೆ ನಿಮ್ಮ ಹೆಸರು ಬೆಳಿಯುತ್ತಾ ಹೋಗುತ್ತದೆ ಎಂದು ಕಲ್ಲಹಳ್ಳಿಗೆ ಆಸೆ ಹುಟ್ಟಿಸಿದ ಗ್ಯಾಂಗ್ ಸಿಡಿ ಬಿಡುಗಡೆ ಮಾಡಿಸಿತ್ತು. ಇಷ್ಟೆಲ್ಲಾ ಆದ್ರೂ ಕೂಡ ರಮೇಶ್ ಏನೂ ಗೊತ್ತಿಲ್ಲ ಎಂದು ಹೇಳಿದ್ರು. ನಿಜಕ್ಕೂ ಈ ವಿಚಾರ ಗೊತ್ತಿದ್ದು ಎಲ್ಲವೂ ಗೊತ್ತಿಲ್ಲ ಎಂದು ಸಿಡಿ ಗ್ಯಾಂಗ್ ವಿರುದ್ಧ ತಿರುಗಿ ಬಿದ್ದಿದ್ದರು.

ಇಲ್ಲಿವರೆಗೂ ಸಿಡಿಯನ್ನು ಫೇಕ್ ಎಂದು ಹೇಳುತ್ತಿದ್ದ ಸಾಹುಕಾರ ಷಡ್ಯಂತರ ಮಾಡಿದ್ದಾರೆಂದು ದೂರು ಕೊಟ್ಟಿದ್ದರು. ದೂರಿನ ಬಳಿಕ ಎಸ್ಐಟಿ ತಂಡ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕುತ್ತಿದೆ. ತನಿಖೆ ಬಳಿಕ ಸಾಹುಕಾರನ ಒಂದೊಂದು ವಿಚಾರಗಳು ಬಯಲಾಗುತ್ತಿವೆ.

ರಮೇಶ್ ಈ ಹಿಂದೆ ಹೇಳಿದಂತೆ ಸಿಡಿ ಗ್ಯಾಂಗ್ ಗೆ 5 ಕೋಟಿ ಕೊಡಲಾಗಿತ್ತು ಅನ್ನೋ ವಿಚಾರ ಸತ್ಯಕ್ಕೆ ಹತ್ತಿರವಾದಂತೆ ಕಾಣುತ್ತಿದೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights