ಜೊಮಾಟೊ ಡೆಲಿವರಿ ಮ್ಯಾನ್ ಹಲ್ಲೆ ಪ್ರಕರಣ : ಮಹಿಳೆ ವಿರುದ್ಧ ದೂರು!

ಜೊಮಾಟೊ ಡೆಲಿವರಿ ಮ್ಯಾನ್ ಬೆಂಗಳೂರು ಮಹಿಳೆಯ ಮೇಲೆ ಹಲ್ಲೆ ಆರೋಪ ಮತ್ತು ದೂರು ವಿರುದ್ಧ ಪ್ರತಿದೂರು ದಾಖಲಿಸಿದ್ದಾರೆ. ಕೆಲವು ದಿನಗಳ ಹಿಂದೆ ಮಹಿಳೆ ದೂರು ನೀಡಿದ್ದ ಪೊಲೀಸ್ ಠಾಣೆಯಲ್ಲೇ ಆತ ದೂರು ದಾಖಲಿಸಿದ್ದಾನೆ.

ಮಹಿಳೆ ಹಿತೇಶಾ ಚಂದ್ರನೀ ತಾನು ಫುಡ್ ಕ್ಯಾನ್ಸಲ್ ಮಾಡಿದ್ದರಿಂದ ಡೆಲಿವರಿ ಮ್ಯಾನ್ ತನ್ನ ಮೇಲೆ ಹಲ್ಲೆ ಮಾಡಿದ್ದಾರೆಂದು ದೂರಿದ್ದರು. ಹಲ್ಲೆಯಿಂದಾಗಿ ಮೂಗಿನಿಂದ ರಕ್ತಸ್ರಾವವಾಗಿದೆ ಎಂದು ಆರೋಪಿಸಿದ್ದರು. ಜೊತೆಗೆ ದೂರು ಕೂಡ ದಾಖಲಿಸಿದ್ದರು. ಈ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದರು.

ಆದರೆ ಜಾಮೀನಿನ ಮೇಲೆ ಹೊರಬಂದ ಡೆಲಿವರಿ ಮ್ಯಾನ್ ಮಹಿಳೆ ಆರೋಪವನ್ನು ಅಲ್ಲಗೆಳೆದು “ತಾವು ಮಹಿಳೆ ಮೇಲೆ ಹಲ್ಲೆ ಮಾಡಿಲ್ಲ. ನನ್ನ ಮೇಲೆ ಮಹಿಳೆ ಶೂ, ಚಪ್ಪಲಿಗಳಿಂದ ಹಲ್ಲೆ ಮಾಡಿದ್ದಾಳೆ. ಇದರಿಂದ ನಾನು ತಪ್ಪುಸಿಕೊಳ್ಳಲು ಆಕೆಯ ಕೈ ತಳ್ಳಿದೆ. ಕೈ ಆಕೆ ಮೂಗಿಗೆ ತಾಗಿ ಗಾಯವಾಗಿದೆ. ನಾನು ನಿಜವಾಗಲೂ ಹಲ್ಲೆಗೊಳಗಾದವನು” ಎಂದು ಡೆಲಿವರಿ ವ್ಯಕ್ತಿ ಆರೋಪಿಸಿ ದೂರು ದಾಖಲಿಸಿದ್ದಾರೆ.

ವಿತರಣಾ ಏಜೆಂಟರ ದೂರಿನ ನಂತರ, ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಮಹಿಳೆಯ ವಿರುದ್ಧ 341 (ತಪ್ಪಾದ ಸಂಯಮ), 355 (ವ್ಯಕ್ತಿಯನ್ನು ಅವಮಾನಿಸುವ ಉದ್ದೇಶದಿಂದ ಹಲ್ಲೆ ಅಥವಾ ಕ್ರಿಮಿನಲ್ ಫೋರ್ಸ್) ಮತ್ತು 504 (ಉದ್ದೇಶಪೂರ್ವಕ ಅವಮಾನ ಶಾಂತಿಯ ಉಲ್ಲಂಘನೆಯನ್ನು ಪ್ರಚೋದಿಸಿ) ರ ಅಡಿ ದೂರು ದಾಖಲಾಗಿದೆ.

ಜೊಮಾಟೊ ಇದು ಎರಡೂ ಆವೃತ್ತಿಗಳನ್ನು ಬೆಂಬಲಿಸುತ್ತಿದೆ. ಜೊತೆಗೆ ತನಿಖೆಗಳು ಬಾಕಿ ಉಳಿದಿವೆ ಮತ್ತು “ಕಥೆಯ ಎರಡೂ ಬದಿಗಳು ಬೆಳಕಿಗೆ ಬರಬೇಕೆಂದು” ಬಯಸಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights