ಜಲಿಯನ್ ವಾಲಾಬಾಗ್: ಮೋದಿ ಹುತಾತ್ಮತೆಯ ಅರ್ಥ ತಿಳಿಯದ ವ್ಯಕ್ತಿ; ಹುತಾತ್ಮರಿಗೆ ಅವಮಾನ ಮಾಡಿದ್ದಾರೆ: ರಾಹುಲ್ಗಾಂಧಿ ಆಕ್ರೋಶ
ಜಲಿಯನ್ ವಾಲಾಬಾಗ್ ಸ್ಮಾರಕವನ್ನು ಕೇಂದ್ರ ಸರ್ಕಾರ ನವೀಕರಣಗೊಳಿಸಿದೆ. ಇದು ಹುತಾತ್ಮರಿಗೆ ಮಾಡಿದ ಅವಮಾನ. ಹುತಾತ್ಮತೆಯ ಅರ್ಥ ತಿಳಿಯದ ವ್ಯಕ್ತಿ ಮಾತ್ರ ಇಂತಹ ಅಪಮಾನವನ್ನು ಎಸಗಲು ಸಾಧ್ಯ ಎಂದು ಕಾಂಗ್ರೆಸ್ ನಾಯಕ ರಾಹುಲ್ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶನಿವಾರ ವಿಡಿಯೋ ಕಾನ್ಫರೆನ್ಸ್ನಲ್ಲಿ, ಪ್ರಧಾನಿ ಮೋದಿ ಅವರು ಜಲಿಯನ್ ವಾಲಾಬಾಗ್ನಲ್ಲಿ ನವೀಕೃತ ಸ್ಮಾರಕವನ್ನು ದೇಶಕ್ಕೆ ಸಮರ್ಪಿಸಿದ್ಧಾರೆ. ಈ ಸಂದರ್ಭದಲ್ಲಿ, ಮೋದಿ ಅವರು ಸ್ಮಾರಕದಲ್ಲಿ ಮ್ಯೂಸಿಯಂ ಗ್ಯಾಲರಿಗಳನ್ನು ಉದ್ಘಾಟಿಸಿದ್ದಾರೆ.
ಈ ಬಳಿಕ ಪ್ರಧಾನಿ ಮತ್ತು ಕೇಂದ್ರದ ವಿರುದ್ದ ಕಿಡಿಕಾರಿರುವ ರಾಹುಲ್ಗಾಂಧಿ, “ಹುತಾತ್ಮತೆಯ ಅರ್ಥ ತಿಳಿಯದ ವ್ಯಕ್ತಿ ಮಾತ್ರ ಜಲಿಯನ್ ವಾಲಾಬಾಗ್ ಹುತಾತ್ಮರಿಗೆ ಇಂತಹ ಅವಮಾನವನ್ನು ಮಾಡಲು ಸಾಧ್ಯ. “ನಾನು ಹುತಾತ್ಮರ ಮಗ – ಹುತಾತ್ಮರಿಗೆ ಮಾಡುವ ಅವಮಾನವನ್ನು ನಾನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ.
“ನಾವು ಈ ಅಸಭ್ಯ ಕ್ರೌರ್ಯವನ್ನು ವಿರೋಧಿಸುತ್ತೇವೆ. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡದವರು ಹೋರಾಟ ಮಾಡಿದವರನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ” ಎಂದು ರಾಹುಲ್ ಮತ್ತೊಂದು ಟ್ವೀಟ್ ನಲ್ಲಿ ಹೇಳಿದ್ದಾರೆ.
शहीदों का अपमान वही कर सकता है, जिन्हें शहादत का मतलब बिल्कुल भी नहीं पता। नवीनीकरण के नाम पर देश की भावनाओं के साथ खेलने वालों को कभी माफ नहीं किया जा सकता है।#BJPInsultsMartyrs pic.twitter.com/PlgyAMvDNg
— Congress (@INCIndia) August 31, 2021
1919ರ ಏಪ್ರಿಲ್ 13 ರಂದು ರೌಲತ್ ಕಾಯಿದೆಯ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗಳು ನಡೆದವು. ಈ ವೇಳೆ, ಜಲಿಯನ್ ವಾಲಾಬಾಗ್ ನಲ್ಲಿ ಸಭೆ ಸೇರಿದ್ದ ಸಾವಿರಾರು ಜನರ ಮೇಲೆ ಬ್ರಿಟಿಷ್ ಪಡೆಗಳು ಮನಬಂದಂತೆ ಗುಂಡು ಹಾರಿಸಿದ್ದವು. ಬ್ರಿಟಿಷರ ದಾಳಿಗೆ 1,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು.
ಇದನ್ನೂ ಓದಿ: ಕೊಡಗು: ಕಣ್ಣೆದುರೇ ಮನೆ ಕೆಳದುಕೊಂಡ ಎಂಟು ಸದಸ್ಯರುಳ್ಳ ಕುಟುಂಬ; ನ್ಯಾಯಕ್ಕಾಗಿ ಹೋರಾಡುತ್ತಿದೆ!

