ಈ ಮುದ್ದಾದ ಪ್ರಾಣಿ ಜಾಕ್ವೆಲಿನ್ ಫರ್ನಾಂಡೀಸ್ ವರ್ಕೌಟ್ ಪಾರ್ಟ್ನರ್…!

ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ತುಂಡುಡುಗೆಯಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸುವ ಮನಮೋಹಕ ತಾರೆ. ಪ್ರಸ್ತುತ ಲಾಕ್‌ಡೌನ್‌ನ ಮಧ್ಯೆ ಮನೆಯಲ್ಲಿ ಕೆಲಸ ಮಾಡುವ ಫೋಟೋಗಳನ್ನು ಹಂಚಿಕೊಳ್ಳುತ್ತಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುತ್ತಾರೆ. ಇತ್ತೀಚೆಗೆ ಜಾಕ್ವೆಲಿನ್ ವಿಡಿಯೋವೊಂದನ್ನ ಹಂಚಿಕೊಮಡಿದ್ದು, ಅದರಲ್ಲ ತಮ್ಮ ವರ್ಕೌಟ್ ಪಾರ್ಟ್ನರ್ ನ್ನು ಪರಿಚಯಿಸಿದ್ದಾರೆ.

ಜಾಕ್ವೆಲಿನ್ ಫರ್ನಾಂಡೀಸ್ ಅವರಿಗೆ ಸಾಕು ಪ್ರಾಣಿಗಳೆಂದರೆ ತುಂಬಾನೇ ಇಷ್ಟ. ಸದ್ಯ ಲಾಕ್‌ಡೌನ್‌ನ ಮಧ್ಯೆ ಆಕೆ ತನ್ನ ಸಾಕು ಬೆಕ್ಕುಗಳ ಜೊತೆ ಕಾಲ ಕಳೆಯುತ್ತಿರುವ ಫೋಟೋಗಳನ್ನು ಶೇರ್ ಮಾಡಿದ್ದಾಳೆ. ಮಾತ್ರವಲ್ಲದೇ ಅವಳ ಬೆಕ್ಕುಗಳೊಂದಿಗೆ ವರ್ಕೌಟ್ ಪೋಸ್ಟ್ ಹಂಚಿಕೊಂಡಿದ್ದಾಳೆ.

Priyanka Chopra's pet Diana

ಜಾಕ್ವೆಲಿನ್ ಫರ್ನಾಂಡೀಸ್ ನಾಲ್ಕು ಪರ್ಷಿಯನ್ ಬೆಕ್ಕುಗಳನ್ನು ತಾಯಿಯಂತೆ ನೋಡಿಕೊಳ್ಳುತ್ತಾರೆ. ಅವುಗಳಿಗೆ ಯೊಡಾ, ಲೋಕಿ, ಮಿಯಮಿಯು ಮತ್ತು ಕ್ಸಿಜಾ ಎಂದು ಹೆಸರಿಟ್ಟಿದ್ದಾರೆ. ಅವರು ವಿವಿಧ ಚಟುವಟಿಕೆಗಳನ್ನು ಮಾಡುತ್ತಾ ಅವುಗಳೊಂದಿಗೆ ತಮ್ಮ ದಿನವನ್ನು ಕಳೆಯುತ್ತಾರೆ. ಅಂತಹ ಚಟುವಟಿಕೆಗಳಲ್ಲಿ ಒಂದು ವರ್ಕೌಟ್ ಆಗಿದೆ.

Watch: Jacqueline Fernandez shows what doing Yoga with cats looks like | Hindustan Times

ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಹ್ಯಾಂಡಲ್ ನಲ್ಲಿ ನಟಿ ವೀಡಿಯೊ ಕ್ಲಿಪ್ ಅನ್ನು ಹಂಚಿಕೊಂಡಿದ್ದಾಳೆ. ಅದರಲ್ಲಿ ಅವಳು ತನ್ನ ಬೆಕ್ಕುಗಳೊಂದಿಗೆ ವರ್ಕೌಟ್ ಮಾಡುತ್ತಿರುವುದನ್ನು ಕಾಣಬಹುದು. ಬೆಕ್ಕುಗಳಿಗೆ ನಟಿ “ಅತ್ಯುತ್ತಮ ರೀತಿಯ ವರ್ಕೌಟ್ ಪಾರ್ಟ್ನರ್ಸ್” ಎಂದು ಕರೆದಿದ್ದಾರೆ.

Jacqueline Fernandez's quirky new post is all about 'cat yoga'

ಜಾಕ್ವೆಲಿನ್ ಫರ್ನಾಂಡೀಸ್ ತನ್ನ ಇನ್ಸ್ಟಾಗ್ರಾಮ್ ನಲ್ಲಿ ಮತ್ತೊಂದು ಕ್ಲಿಪ್ ಅನ್ನು ಅಪ್ಲೋಡ್ ಮಾಡಿದ್ದಾರೆ. ಅದಕ್ಕೆ “ವರ್ಕೌಟ್ ಎಂಟರ್ಟೇನ್ಮೆಂಟ್” ಎಂದು ಶೀರ್ಷಿಕೆ ಮಾಡಿದ್ದಾರೆ.

ಜಾಕ್ವೆಲಿನ್ ಫರ್ನಾಂಡೀಸ್ ಶೀಘ್ರದಲ್ಲೇ ಬಚ್ಚನ್ ಪಾಂಡೆ, ಅಟ್ಯಾಕ್, ಸಿರ್ಕಸ್, ಮತ್ತು ರಾಮ್ ಸೇತು ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights