ಮಿಜೋರಾಂ ಭೂಕುಸಿತ: ಮನೆ ಗೋಡೆ ಬಿದ್ದು ನಾಲ್ಕು ಮಕ್ಕಳು ಜೀವಂತ ಸಮಾಧಿ!

ಧಾರಕಾರ ಮಳೆ ಸುರಿದ ಹಿನ್ನೆಲೆಯಲ್ಲಿ ಭೂಕುಸಿತದಿಂದಾಗಿ ಮನೆಯೊಂದರ ಗೋಡೆ ಕುಸಿದು ಮನೆಯಲ್ಲಿದ್ದ ನಾಲ್ವರು ಮಕ್ಕಳು ಜೀವಂತ ಸಮಾಧಿಯಾಗಿರುವ ಘಟನೆ ಮಿಜೋರಾಂ ರಾಜ್ಯದಲ್ಲಿ ನಡೆದಿದೆ.

ರಾಜ್ಯ ರಾಜಧಾನಿ ಐಜಾವ್ಲ್‌ನ ಥುಮುಪೈನಲ್ಲಿ ಶುಕ್ರವಾರ ರಾತ್ರಿ ಧಾರಾಕಾರ ಮಳೆ ಸುರಿದಿದ್ದು, ಈ ವೇಳೆ ಮನೆಯ ಮೇಲೆ ಭೂಕುಸಿತವಾಗಿದ್ದು, ಈ ಘಟನೆ ಸಂಭವಿಸಿದೆ.

ಏಳು ಸದಸ್ಯರಿರುವ ಕುಟುಂಬದಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಕುಟುಂಬದ ಮುಖ್ಯಸ್ಥ ಲಾಲ್ಬಿಯಾಕ್ಜುವಾಲಾ (75) ಬಿದ್ದ ಗೋಡೆಯಿಂದ ದೂರ ಇದ್ದಿದ್ದರಿಂದ ಅವರು ದುರಂತದಿಂದ ಪಾರಾಗಿದ್ದಾರೆ.

ಮೂರರಿಂದ 16 ವರ್ಷದ ಮಕ್ಕಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶವಗಳನ್ನು ಪೊಲೀಸರು ಮತ್ತು ಸ್ಥಳೀಯರು ವಶಪಡಿಸಿಕೊಂಡಿದ್ದಾರೆ.

ಈ ಪ್ರದೇಶವು ಮುಖ್ಯಮಂತ್ರಿ ಝೋರಮ್‌ಥಂಗಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಕುಟುಂಬಕ್ಕೆ ಪರಿಹಾರ ಒದಗಿಸುವುದಾಗಿ ಮತ್ತು ಪುನರ್ವಸತಿ ಕಲ್ಪಿಸುವುದಾಗಿ ಸಿಎಂ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಲಕ್ಷದ್ವೀಪ: ನಟಿ, ನಿರ್ಮಾಪಕಿ ವಿರುದ್ದ ದೇಶದ್ರೋಹ ಕೇಸ್‌; ಬಿಜೆಪಿ ತೊರೆದ 15 ನಾಯಕರು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights