ಪತಿಗೆ ಚಾಲೆಂಜ್ ಹಾಕಿದ ಅನುಷ್ಕಾ : ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಯ್ತು ವಿರುಷ್ಕಾ ಸವಾಲ್!
ಸದಾ ಕಾಲ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ವಿರುಷ್ಕಾ ಮತ್ತೊಂದು ಹೊಸ ವಿಡಿಯೋವನ್ನು ಅಪ್ಲೋಡ್ ಮಾಡುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಈ ಜೋಡಿ ಅಭಿಮಾನಿಗಳಿಗೆ ಟಾಸ್ಕ್ವೊಂದನ್ನು ನೀಡಿದ್ದು ಕೌಶಲ್ಯವನ್ನು ಪ್ರದರ್ಶಿಸುವಂತೆ ಕೇಳಿದ್ದಾರೆ.
ಹೌದು… ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಹಬ್ಬಿ ವಿರಾಟ್ ಕೊಹ್ಲಿ ಅವರೊಂದಿಗೆ ಬ್ಯಾಟ್ ಬ್ಯಾಲೆನ್ಸ್ ಚಾಲೆಂಜ್ ಹಾಕಿದ್ದಾರೆ. ಇವರಿಬ್ಬರಲ್ಲಿ ಯಾರು ಗೆಲ್ಲುತ್ತಾರೆ ಎನ್ನುವುದೇ ಮೋಜಿನ ಸಂಗತಿ. ಇನ್ಸ್ಟಾಗ್ರಾಮ್ ನಲ್ಲಿ ಅನುಷ್ಕಾ ಈ ಬ್ಯಾಟ್ ಬ್ಯಾಲೆನ್ಸ್ ಚಾಲೆಂಜ್ ಮಾಡುವ ಹೊಸ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.
ಅಭಿಮಾನಿಗಳು ನಟಿಯ ಬ್ಯಾಟ್ ಬ್ಯಾಲೆನ್ಸ್ ಚಾಲೆಂಜ್ ಅನ್ನು ಮೆಚ್ಚಿಕೊಂಡಿದ್ದಾರೆ. ಹಾಗಾದರೆ ಇಬ್ಬರ ನಡುವೆ ಯಾರು ಸವಾಲನ್ನು ಗೆಲ್ಲುತ್ತಾರೆ ಎಂದು ಕೆಳಗಿನ ವೀಡಿಯೊವನ್ನು ನೋಡಿ.
https://www.youtube.com/watch?v=VlaEeQTAmHg
ವಿಡಿಯೋ ಶೇರ್ ಮಾಡುವ ಮೂಲಕ “ವಿರಾಟ್ ಕೊಹ್ಲಿಯೊಂದಿಗೆ ಟಕಾಟಾಕ್ ಬ್ಯಾಟ್ಬ್ಯಾಲೆನ್ಸ್ ಚಾಲೆಂಜ್ ಮಾಡುವುದನ್ನು ನಾನು ಆನಂದಿಸಿದೆ! ನೀವೂ ಸಹ ಬ್ಯಾಟ್ಬ್ಯಾಲೆನ್ಸ್ ಚಾಲೆಂಜ್ನಲ್ಲಿ ಭಾಗವಹಿಸುವ ಮೂಲಕ ನಿಮ್ಮ ಕೌಶಲ್ಯಗಳನ್ನು ನಮಗೆ ತೋರಿಸಿ” ಎಂದು ಅನುಷ್ಕಾ ಬರೆದಿದ್ದಾರೆ.

