ಟೋಕಿಯೊ ಒಲಿಂಪಿಕ್ಸ್: ಕರ್ನಾಟಕದಿಂದ ಮೂವರಿಗೆ ಅವಕಾಶ!

ಗುರುವಾರದಿಂದ ಟೋಕಿಯೋದಲ್ಲಿ 2020ರ ಒಲಿಂಪಿಕ್ಸ್‌ ಕ್ರೀಡಾಕೂಟ ನಡೆಯುತ್ತಿದೆ. ಈ ಬಾರಿಯೂ ಹಲವು ಭಾರತೀಯರು ಕ್ರೀಡಾಕೂಟದಲ್ಲಿ ಭಾಗಿಯಾಗಲಿದ್ದಾರೆ. ಈ ಪೈಕಿ ಮೂವರು ಕನ್ನಡಿಗರಿಗೆ ಅವಕಾಶ ದೊರೆದಿದೆ. ಅವರ ಪರಿಚಯ ಹೀಗಿದೆ..

ಅದಿತಿ:

ಅದಿತಿ ಭರವಸೆಯ ಗಾಲ್ಫ್ ಆಟಗಾರ್ತಿ. ಅವರು 2016 ರ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದರು. ಅಲ್ಲದೆ, ಅವರು ಲೇಡೀಸ್ ಯುರೋಪಿಯನ್ ಟೂರ್ನಿ ಮತ್ತು ಎಲ್‌ಪಿಜಿಎ ಟೂರ್ನಿಯಲ್ಲಿ ಭಾಗವಹಿಸಿ ಗೆಲುವು ಸಾಧಿಸಿದ್ದಾರೆ.

ಅದಿತಿ ಏಷ್ಯನ್ ಯೂತ್ ಗೇಮ್ಸ್ (2013), ಯೂತ್ ಒಲಿಂಪಿಕ್ ಗೇಮ್ಸ್ (2014), ಏಷ್ಯನ್ ಗೇಮ್ಸ್ (2014) ಮತ್ತು ಒಲಿಂಪಿಕ್ ಗೇಮ್ಸ್ (2016) ಆಡಿದ ಮೊದಲ ಮತ್ತು ಏಕೈಕ ಭಾರತೀಯ ಗಾಲ್ಫ್ ಆಟಗಾರ್ತಿ. ಅವರು 3-ಅಂಡರ್-ಪಾರ್ 213 ಅಂಕಗಳೊಂದಿಗೆ 2016 ರ ಹೀರೋ ವುಮೆನ್ಸ್ ಇಂಡಿಯನ್ ಓಪನ್ ಗೆದಿದ್ದಾರೆ. ಅವರು, ಲೇಡೀಸ್ ಯುರೋಪಿಯನ್ ಟೂರ್ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಫೌಡ್ ಮಿರ್ಜಾ: 

2018ರ ಏಷ್ಯನ್ ಕ್ರೀಡಾಕೂಟದಲ್ಲಿ ಕುದುರೆ ಸವಾರಿ ಸ್ಪರ್ಧೆಯಲ್ಲಿ ವೈಯಕ್ತಿಕ ಮತ್ತು ತಂಡದ ಸ್ಪರ್ಧೆಗಳಲ್ಲಿ ಆಡಿ ಬೆಳ್ಳಿ ಪದಕಗಳನ್ನು ಗೆದ್ದಿದ್ದಾರೆ ಮಿರ್ಜಾ. 1982 ರಿಂದೀಚೆಗೆ ಏಷ್ಯನ್ ಕ್ರೀಡಾಕೂಟದಲ್ಲಿ ಕ್ರೀಡೆಯಲ್ಲಿ ವೈಯಕ್ತಿಕ ಸ್ಪರ್ಧೆಯಲ್ಲಿ ಎರಡು ಬೆಳ್ಳಿ ಪದಕ ಗೆದ್ದಿರುವ ಇವರು, ಏಷ್ಯನ್ ಟೂರ್ನಿ ಗೆದ್ದ ಮೊದಲ ಭಾರತೀಯ ಎನ್ನಿಸಿಕೊಂಡಿದ್ದಾರೆ. ಟೋಕಿಯೊ ಒಲಿಂಪಿಕ್ಸ್‌ಗೆ ಕುದುರೆ ರೈಡಿಂಗ್‌ನಲ್ಲಿ ಅರ್ಹತೆ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಮಿರ್ಜಾ ಅಧಿಕೃತವಾಗಿ ಪಾತ್ರರಾಗಿದ್ದಾರೆ.

ಶ್ರೀಹರಿ ನಟರಾಜ್:

ಶ್ರೀಹರಿ ಈಜುಗಾರರಾಗಿದ್ದು, ಗ್ವಾಂಗ್ಜುವಿನಲ್ಲಿ ನಡೆದ 2019 ರ ವಿಶ್ವ ಅಕ್ವಾಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಪುರುಷರ ವಿಭಾಗದ 100 ಮೀ ಬ್ಯಾಕ್‌ಸ್ಟ್ರೋಕ್‌ನಲ್ಲಿ ಅವರು ಟೋಕಿಯೊ ಬೇಸಿಗೆ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದರು.

2017 ರಲ್ಲಿ, ತುರ್ಕಮೆನಿಸ್ತಾನದ ಅಶ್ಗಾಬತ್‌ನಲ್ಲಿ ನಡೆದ 2017 ರ ಏಷ್ಯನ್ ಒಳಾಂಗಣ ಮತ್ತು ಮಾರ್ಷಲ್ ಆರ್ಟ್ಸ್ ಕ್ರೀಡಾಕೂಟದಲ್ಲಿ ಅವರು ಶಾರ್ಟ್ ಕೋರ್ಸ್ ಈಜು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

2018 ರಲ್ಲಿ ಅವರು ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ನಂತರ, ಅವರು 2018 ರ ಏಷ್ಯನ್ ಕ್ರೀಡಾಕೂಟದಲ್ಲಿ ಸ್ಪರ್ಧಿಸಿದರು. ಅದೇ ವರ್ಷ, ಅವರು ಬ್ಯೂನಸ್ ಐರಿಸ್‌ನಲ್ಲಿ ನಡೆದ 2018 ರ ಬೇಸಿಗೆ ಯುವ ಒಲಿಂಪಿಕ್ಸ್‌ನಲ್ಲಿ ಬಾಲಕರ 50 ಮೀಟರ್ ಬ್ಯಾಕ್‌ಸ್ಟ್ರೋಕ್, ಬಾಲಕರ 100 ಮೀಟರ್ ಬ್ಯಾಕ್‌ಸ್ಟ್ರೋಕ್ ಮತ್ತು ಬಾಲಕರ 200 ಮೀಟರ್ ಬ್ಯಾಕ್‌ಸ್ಟ್ರೋಕ್ ಸ್ಪರ್ಧೆಗಳಲ್ಲಿ ಸ್ಪರ್ಧಿಸಿದ್ದರು.

ಇದನ್ನೂ ಓದಿ: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ ನೌಕಾಪಡೆಯ ಜಾಬಿರ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights