ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ ನೌಕಾಪಡೆಯ ಜಾಬಿರ್‌!

ಭಾರತೀಯ ನೌಕಾಪಡೆಯ ಸಿಬ್ಬಂದಿ ಎಂಪಿ ಜಾಬಿರ್‌ ಅವರು ಟೋಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ ಎಂದು ವರದಿಯಾಗಿದೆ.

ಅಥ್ಲೀಟ್‌ ಆಗಿರುವ ಎಂಪಿ ಜಾಬಿರ್‌ ಅವರು ಟೋಕಿಯೋ ಒಲಿಂಪಿಕ್ಸ್‌ನ ಪುರುಷರ ವಿಭಾಗದ 400 ಮೀ. ಹರ್ಡಲ್ಸ್‌ ಗೇಮ್‌ಗೆ ಆಯ್ಕೆಯಾಗಿದ್ದಾರೆ.

ಇತ್ತೀಚೆಗೆ ಪಟಿಯಾಲದಲ್ಲಿ ನಡೆದ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್‌ ಚಾಂಪಿಯನ್‌ ಶಿಪ್‌ ನಲ್ಲಿ ಭಾಗವಹಿಸಿದ್ದ ಜಾಬಿರ್‌ ಅವರು 49.78 ಸೆಂಕೆಂಡ್‌ ಗಳಲ್ಲಿ ಗುರಿ ತಲುಪಿದ್ದರು ಎಂದು ಭದ್ರತಾ ವಕ್ತಾರರಿ ತಿಳಿಸಿರುವುದಾಗಿ ವರದಿಯಾಗಿದೆ.

ಇದನ್ನೂ ಓದಿ: ಅರ್ಚರಿ ವಿಶ್ವಕಪ್‌: ಒಂದೇ ದಿನ 3 ಚಿನ್ನದ ಪದಕ ಗೆದ್ದ ದೀಪಿಕಾ ಕುಮಾರಿ!

ವಿಶ್ವ ರ್ಯಾಂಕಿಂಗ್‌ ಕೋಟಾದಲ್ಲಿ ಒಟ್ಟು 14 ಸ್ಥಾನಗಳಿದ್ದು, ಇದರನ್ವಯ ಜಾಬಿರ್‌ ಆಯ್ಕೆಯಾಗಿದ್ದಾರೆ. ಒಟ್ಟು 40 ಮಂದಿ ಅಥ್ಲೀಟ್‌ ಗಳು ಆಯ್ಕೆಯಾಗಿದ್ದು, ಜಾಬಿರ್‌ ಈಗಾಗಲೇ ವಿಶ್ವ ಮಟ್ಟದಲ್ಲಿ 34ನೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಮೂಲತಃ ಕೇರಳದ ಮಲಪ್ಪುರಂ ಜಿಲ್ಲೆಯವರಾದ ಜಾಬಿರ್‌ ಭಾರತೀಯ ನೌಕಾ ದಳದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಟೋಕಿಯೋ ಒಲಿಂಪಿಕ್ಸ್‌ ಅನ್ನು ಪೂರ್ತಿಗೊಳಿಸಿದರೆ 400ಮೀ. ಹರ್ಡಲ್ಸ್‌ ವಿಭಾಗದಲ್ಲಿ ಒಲಿಂಪಿಕ್ಸ್‌ ನಲ್ಲಿ ಭಾಗವಹಿಸಿದ ಪ್ರಥಮ ಪುರುಷ ಕ್ರೀಡಾಪಟು ಎಂಬ ದಾಖಲೆಯನ್ನು ಜಾಬಿರ್‌ ತಮ್ಮ ಹೆಸರಿನಲ್ಲಿ ಬರೆಯಲಿದ್ದಾರೆ. ಈ ಹಿಂದೆ ಕೇರಳ ಮೂಲದವರೇ ಆಗಿದ್ದ ಪಿಟಿ ಉಷಾ ಹರ್ಡಲ್ಸ್‌ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಈ ಹಿಂದೆಯೂ ಜಾಬಿರ್‌ ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ಸ್‌ ನಲ್ಲಿ ಭಾಗವಹಿಸಿ ಪ್ರಶಸ್ತಿ ಗಳಿಸಿದ್ದರು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಉತ್ತರಾಖಂಡ BJPಯಲ್ಲೂ ಬಂಡಾಯ ಸ್ಪೋಟ; ಅಲುಗಾಡುತ್ತಿದೆ ತಿರತ್ ಸಿಂಗ್ ಸಿಎಂ ಖುರ್ಚಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights