ದೀನರ ಸಂಕಷ್ಟಕ್ಕೆ ಮರುಗಿದ ಕ್ರಿಕೆಟಿಗ : ಬಡ ಕುಟುಂಬಗಳಿಗೆ ಆಹಾರ ವಿತರಿಸಿದ ರಘುರಾಮ್ ಭಟ್

ದೀನರ ಸಂಕಷ್ಟಕ್ಕೆ ಮರುಗಿದ ಟೀಂ ಇಂಡಿಯಾ ಮಾಜಿ ಆಟಗಾರ ರಘುರಾಮ್ ಭಟ್ ಬೆಂಗಳೂರಿನ ಸಂಜಯ್ ನಗರದಲ್ಲಿ ಸೋಮವಾರ ಸುಮಾರು 150  ಬಡ ಕುಟುಂಬಗಳಿಗೆ ಆಹಾರಾ ವಿತರಿಸಿದ್ದಾರೆ.

ಹೌದು…  ಎರಡು ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾವನ್ನು ಪ್ರತಿನಿಧಿಸಿದ್ದ ಭಟ್ ಅಗತ್ಯವಿರುವ ಸಮಯದಲ್ಲಿ ಸಹಾಯ ಮಾಡಿದ್ತದು,ರಕಾರಿಗಳು, ಉಪ್ಪು, ಸಕ್ಕರೆ, ಅಕ್ಕಿ ಮತ್ತು ಬೆಳೆ ಸೇರಿದಂತೆ ಇತರ ಅಗತ್ಯ ಆಹಾರ ಉತ್ಪನ್ನಗಳನ್ನು ಬಡವರಿಗೆ ನೀಡಿದ್ದಾರೆ.  ಅವರ ವೃತ್ತಿಜೀವನದ ದಿನಗಳೊಂದಿಗೆ ಹೋಲಿಕೆ ಮಾಡಿದ ಭಟ್ “ನನಗೆ ತುಂಬಾ ಸಂತೋಷವಾಗಿದೆ. ನೀವು ನನ್ನನ್ನು ನಂಬದೇ ಇರಬಹುದು, ಆದರೆ ಬಡವರಿಗೆ ಸಹಾಯ ಮಾಡುವುದರಿಂದ ನಾನು ಭಾರತಕ್ಕಾ ಆಟವಾಡಿದ್ದಾಗ  ಅನುಭವಿಸಿದ್ದಕ್ಕಿಂತ ಹೆಚ್ಚು ಸಂತೋಷ  ಅನುಭವಿಸಿದೆ. ಸಣ್ಣ ಗುಡಿಸಲುಗಳಲ್ಲಿ ವಾಸಿಸುವ ಆಹಾರ ಮತ್ತು ಹಣವಿಲ್ಲದ ಬಡವರಿಗೆ ಸಹಾಯ ಮಾಡುವ ಸಮಯವಿದು. ಕೆಲವರಿಗಂತೂ ದಿನಕ್ಕೆ ಒಪ್ಪೊತ್ತಿನ ಊಟ ಪಡೆಯುವುದು ಸಹ ಕಷ್ಟಕರವಾಗುತ್ತಿದೆ. ಅಂತಹ ಕುಟುಂಬಗಳಿಗೆ ಸಹಾಯ ಮಾಡುತ್ತಿದ್ದ ತನ್ನ ಆಪ್ತ ಸ್ನೇಹಿತ ಚಂದ್ರು ನನಗೆ ಪ್ರೇರಣೆಯಾಗಿದ್ದಾರೆ’ ಎಂದಿದ್ದಾರೆ.

ಒಂದೊಮ್ಮೆ ಕೋವಿಡ್ ಇರದಿದ್ದಲ್ಲಿ ಭಟ್  ಕೆಎಸ್ಸಿಎ ನ  ಮುಖ್ಯ ಆಯ್ಕೆಗಾರ ಕೆಲಸದಲ್ಲಿ ನಿರತವಾಗಿರುತ್ತಿದ್ದರು.ಅವರು ಕರ್ನಾಟಕದ ವಿಶೇಷ ಪ್ರತಿಭೆಗಳ ಮೇಲೆ ಕಣ್ಣಿಟ್ಟಿರುತ್ತಾರೆ ಮತ್ತು ಅವರ ಬಗ್ಗೆ ಒಂದು  ನೋಟ್ಸ್ ತೆಗೆದುಕೊಳ್ಳುತ್ತಾರೆ. ಆದರೆ ಇಂದು ಕ್ರಿಕೆಟ್ ಅವರನ್ನು ಅಷ್ತಾಗಿ ಗಮನ ಸೆಳೆಯುತ್ತಿಲ್ಲ  “ನಾವು ಬೇರೆ ಪರಿಸ್ಥಿತಿಯಲ್ಲಿದ್ದೇವೆ. ಅಗತ್ಯಕ್ಕೆ ತಕ್ಕಂತೆ ಮ್ಮನ್ನು ನಾವು ಬದಲಾಯಿಸಿಕೊಳ್ಳಬೇಕು. ಕ್ರೀಡೆ ಈಗ್ ಹಿಂದೆ ಸರಿದಿದೆ.ಸಾಂಕ್ರಾಮಿಕ ರೋಗ ಗುಣವಾದ ನಂತರ ರ, ನಾವು ಮತ್ತೆ ಕ್ರಿಕೆಟ್ ಮತ್ತು ಕ್ರೀಡೆಯತ್ತ  ಗಮನಿಸುತ್ತೇವೆ. ಆದರೆ ಕ್ರಿಕೆಟ್ ಗೆ ಗಮನಿಸುವಾಗಲೂ ಸಹ ನಾವು ಬಡವರಿಗೆ ಸಹಾಯ ಮಾಡುವ ಗ್ಣ ಉಳಿಸಿಕೊಳ್ಳಬೇಕು” ಭಟ್ ಹೇಳಿದ್ದಾರೆ.
ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights