ಸ್ಕ್ರೀನ್‌ನಲ್ಲಿ ಮತ್ತೆ ಒಂದಾಗುತ್ತಾ ಶಾರುಖ್ ಖಾನ್ ಮತ್ತು ಕಾಜಲ್ ಜೋಡಿ..?

ಬಾಲಿವುಡ್ ನ ದಿಲ್ವಾಲೆ ದುಲ್ಹಾನಿಯಾ ಲೆ ಜಯಂಗೆ ಚಿತ್ರದ ಮೂಲಕ ಫೇಮಸ್ ಆದ ಶಾರುಖ್ ಖಾನ್ ಮತ್ತು ಕಾಜಲ್ ಜೋಡಿ ಮತ್ತೆ ಸ್ಕ್ರೀನ್ ಹಂಚಿಕೊಳ್ಳುವ ಸಾಧ್ಯತೆ ಇದ್ದು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಕೆರಳಿಸಿದೆ.

ರಾಜ್‌ಕುಮಾರ್ ಹಿರಾನಿಯ ಹೊಸ ಚಿತ್ರದಲ್ಲಿ ಶಾರುಖ್ ಖಾನ್ ಮತ್ತು ಕಾಜಲ್ ಮತ್ತೆ ಒಂದಾಗಬಹುದು ಎನ್ನಲಾಗುತ್ತಿದೆ. ಚಿತ್ರದಲ್ಲಿ ವಿದ್ಯಾ ಬಾಲನ್, ತಾಪ್ಸೀ ಪನ್ನು, ಮನೋಜ್ ಬಾಜಪೇಯಿ ಮತ್ತು ಬೊಮನ್ ಇರಾನಿ ನಟಿಸಲಿದ್ದಾರೆ.

ಕಳೆದ ವರ್ಷ ದಿಲ್ವಾಲೆ ದುಲ್ಹಾನಿಯಾ ಲೆ ಜಯಂಗೆ ಚಿತ್ರದ 25 ನೇ ವಾರ್ಷಿಕೋತ್ಸವವನ್ನು ಆಚರಿಸಿದ ಶಾರುಖ್ ಖಾನ್ ಮತ್ತು ಕಾಜಲ್ ಹೊಸ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರಂತೆ. ರಾಜ್‌ಕುಮಾರ್ ಹಿರಾನಿ ಅವರ ಮುಂಬರುವ ಚಿತ್ರ ಭಾರತ ಮತ್ತು ಕೆನಡಾ ಎಂಬ ಎರಡು ದೇಶಗಳಲ್ಲಿ ಒಬ್ಬ ಮನುಷ್ಯ ಮತ್ತು ಅವನ ಕುಟುಂಬದ ಪ್ರಯಾಣವನ್ನು ಆಧರಿಸಿದೆ.

ಈ ಚಿತ್ರದಲ್ಲಿ ಶಾರುಖ್ ಅವರ ಹೆಂಡತಿಯಾಗಿ ನಟಿಸಲು ಕಾಜಲ್ ಸೈನ್ ಅಪ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಕಥೆಯಲ್ಲಿ ವರದಿಗಾರನ ಪಾತ್ರವನ್ನು ತಾಪ್ಸೀ ಪನ್ನುಗೆ ನೀಡಲಾಗಿದೆ. ಜೊತೆಗೆ ವಿದ್ಯಾ ಬಾಲನ್ ಪಾತ್ರವನ್ನು ನಿರ್ವಹಿಸಲು ಸಂಪರ್ಕಿಸಲಾಗಿದೆ. ವಿದ್ಯಾ ಅವರು ಶಾರುಖ್ ಅವರ ಪ್ರಯಾಣದಲ್ಲಿ ಸಹಾಯ ಮಾಡುತ್ತಾರೆ. ಮನೋಜ್ ಬಾಜಪೇಯಿ ಮತ್ತು ಬೊಮನ್ ಇರಾನಿ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುವ ನಿರೀಕ್ಷೆಯಿದೆ.

ಇನ್ನೂ ಚಿತ್ರದ ಸಂಗೀತವನ್ನು ಶಾಂತನು ಮೊಯಿತ್ರಾ ಸಂಯೋಜಿಸಲಿದ್ದು, ಸಾಹಿತ್ಯವನ್ನು ಸ್ವಾಂದ್ ಕಿರ್ಕೈರ್ ಗೆ ನೀಡುವ ನಿರೀಕ್ಷೆ ಇದೆ. ರಾಜ್‌ಕುಮಾರ್ ಹಿರಾನಿ ಮತ್ತು ಶಾರುಖ್ ಖಾನ್ ಅವರ ಪ್ರೊಡಕ್ಷನ್ ಹೌಸ್, ರೆಡ್ ಚಿಲ್ಲಿ ಎಂಟರ್‌ಟೈನ್‌ಮೆಂಟ್ ನಿರ್ಮಿಸಿದ ಈ ಚಿತ್ರದ ಚಿತ್ರೀಕರಣವು 2022 ರ ಏಪ್ರಿಲ್‌ನಲ್ಲಿ ಪ್ರಾರಂಭವಾಗಬಹುದು ಎನ್ನಲಾಗುತ್ತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights