ಗೋಹತ್ಯೆ ನಿಲ್ಲಿಸಲು ಒತ್ತಾಯ: ಯುವಕನ ಕತ್ತು ಸೀಳಿದ ಸ್ನೇಹಿತರು!

ಹಸುಗಳನ್ನು ಕೊಲುವುದನ್ನು ಬಿಡಬೇಕು ಎಂದು ಒತ್ತಾಯಿಸಿ ಯವಕನನ್ನು ಆತನ ಸ್ನೇಹಿತರೇ ಹತ್ಯೆ ಮಾಡಿರುವ ಘಟನೆ ಜಾರ್ಖಂಡ್‌ನ ಗಢ್ವಾದಲ್ಲಿ ನಡೆದಿದೆ.

ಇಂದು ಬೆಳಿಗ್ಗೆ, ಅಲ್ಲಿನ ಸ್ಥಳೀಯ ಶಾಸಕ ಮತ್ತು ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವ ಮಿಥಲೇಶ್ ಠಾಕೂರ್ ಗಢ್ವಾದಲ್ಲಿನ ಸಾಸರ್ ಆಸ್ಪತ್ರೆಗೆ ಭೇಟಿ ನೀಡಿದ ನಂತರ ಈ ಘಟನೆ ಬೆಳಕಿಗೆ ಬಂದಿದ್ದು, ಅಲ್ಲಿ ಮೃತನ ತಾಯಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಇಡೀ ಕಥೆಯನ್ನು ವಿವರಿಸಿದ್ದಾರೆ.

ಗಢ್ವಾದ ಸದರ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದ್ದು, ಮೃತನ ತಾಯಿ ಆಯೆಷಾ ಖತೂನ್ ಸಲ್ಲಿಸಿದ ದೂರಿನ ಪ್ರಕಾರ, ತನ್ನ ಮಗ ಮೊಹಮ್ಮದ್ ಅರ್ಜೂ (18) ಎಂಬಾತನನ್ನು ನನ್ನ ಮಗನ ಸ್ನೇಹಿತ ಕೈಲ್ ಖುರೇಶಿ ಸೇರಿದಂತೆ ಮೂರು ಮಂದಿ ಒಟ್ಟಾಗಿ ಹಸುವಿನ ಹತ್ಯೆಯನ್ನು ಬಿಡಬೇಕೆಂದು ಒತ್ತಾಯಿಸಿ ಕೊರಳು ಕೊಯ್ದು ಕೊಂದಿದ್ದಾರೆ” ಎಂದು ದಾಖಲಿಸಿದ್ದಾರೆ.

“ಮೃತ ಯುವಕನ ತಾಯಿ, ತನ್ನ ಮಗನನ್ನು ಮೂರು ಜನರು ಕೊಂದಿದ್ದಾರೆ ಎಂದು ಆರೋಪಿಸಿದ್ದಾರೆ. ಹಸುಗಳನ್ನು ವಧಿಸುವುದನ್ನು ಬಿಟ್ಟುಬಿಡಬೇಕೆಂದು ಆರೋಪಿಗಳು ಒತ್ತಾಯಿಸುತ್ತಿದ್ದರು. ಇದು ಆ ಪ್ರದೇಶದಲ್ಲಿ ಅನಗತ್ಯ ಗಲಭೆಯನ್ನು ಸೃಷ್ಟಿಸಿತು. ಎಫ್‌ಐಆರ್‌ನಲ್ಲಿ, ಕೈಲ್ ಖುರೇಶಿ, ಮುನ್ನು ಖುರೇಶಿ ಮತ್ತು ಖಾಲಿದ್ ಖುರೇಶಿ ಎಂಬ ಮೂವರನ್ನು ಹೆಸರಿಸಲಾಗಿದೆ” ಎಂದು ಇನ್ಸ್‌ಪೆಕ್ಟರ್ ರಾಜೇಶ್ ಕುಮಾರ್ ಹೇಳಿದರು.

ಪ್ರಧಾನ ಆರೋಪಿ ಕೈಲ್ ಖುರೇಶಿ ಪ್ರಾಣಿಗಳನ್ನು ವಧಿಸಲು ಬಳಸುವ ತೀಕ್ಷ್ಣವಾದ ಆಯುಧಗಳಿಂದ ಜನರ ಮೇಲೆ ಹಲ್ಲೆ ನಡೆಸುತ್ತಿದ್ದ ಕುಖ್ಯಾತ. ಈ ಹಿಂದೆ ಆತ ತಮ್ಮ ಕುಟುಂಬ ಸದಸ್ಯರ ಮೇಲೆಯೇ ಹಲವಾರು ಬಾರಿ ಹಲ್ಲೆ ಮಾಡಿದ್ದ. ಈ ಪ್ರಕರಣದಲ್ಲಿ ಯಾವುದೇ ತೀರ್ಮಾನಕ್ಕೆ ಬರುವ ಮೊದಲು ಎಲ್ಲಾ ಅಂಶಗಳನ್ನು ಪರಿಗಣಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.


ಇದನ್ನೂ ಓದಿ: ಕೇಂದ್ರದ ಕೃಷಿ ಮಸೂದೆಗೆ ವಿರೋಧ: 3 ಪರ್ಯಾಯ ಮಸೂದೆಗಳನ್ನು ಮಂಡಿಸಿದ ಪಂಜಾಬ್‌ ಸಿಎಂ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights