ಪಿಟ್ಸ್ ಬರ್ಗ್ ವಿಶ್ವವಿದ್ಯಾಲಯದಲ್ಲಿ ಕೊರೊನ ಲಸಿಕೆಯ ಬಗ್ಗೆ ಭರವಸೆಯ ಪ್ರಯೋಗ

ಪಿಟ್ಸ್ ಬರ್ಗ್ ವೈದ್ಯಕೀಯ ವಿಶ್ವವಿದ್ಯಾಲಯದ ಸಂಶೋಧಕರು ಇಲಿಗಳ ಮೇಲೆ ಪರೀಕ್ಷೆ ಮಾಡಿರುವ ಕೋವಿಡ್-19 ಲಸಿಕೆ, ವೈರಸ್ ವಿರುದ್ಧ ಹೋರಾಡುವ ರೋಗನಿರೋಧಕಗಳನ್ನು ಉತ್ಪಾದಿಸುವುದನ್ನು ಯಶಸ್ವಿಯಾಗಿ ದಾಖಲಿಸಿದೆ. ಲಸಿಕೆ ಹಾಕಿದ ಎರಡು ವಾರಗಳಲ್ಲಿ ಈ ರೋಗನಿರೋಧಕ ಶಕ್ತಿ ಉತ್ಪಾದಿಸುವ ಶಕ್ತಿ ಹೊಂದಿದೆ.

ಈ ಅಧ್ಯಯನದ ಸಂಶೋಧಕರು ಈಗ ಯು ಎಸ್ ಆಹಾರ ಮತ್ತು ಔಷಧ ಆಡಳಿತಕ್ಕೆ ಪರವಾನಗಿಗಾಗಿ ಕೇಳಿದ್ದು ಕೆಲವು ತಿಂಗಳುಗಳಲ್ಲಿ ಮನುಷ್ಯನ ಮೇಲೆ ಪರೀಕ್ಷೆ ನಡೆಸಲು ಸಿದ್ಧವಾಗಿದೆ.

ಇಲ್ಲಿಯವರೆಗೂ ಜಗತ್ತಿನಾದ್ಯಂತ ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ಜನಕ್ಕೆ ಸೋಂಕು ತಗಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿರುವ ಈ ಸಾಂಕ್ರಾಮಿಕಕ್ಕೆ ಲಸಿಕೆ ಕಂಡು ಹಿಡಿಯಲು ಜಗತ್ತಿನ ಹಲವು ದೇಶಗಳು ಶ್ರಮಿಸುತ್ತಿವೆ.

ಈಗಾಗಲೇ ಹಿಂದಿನ ಸಾರ್ಸ್ ಮತ್ತು ಮೆರ್ಸ್ ಸಾಂಕ್ರಾಮಿಕಗಳ ಮೇಲೆ ಸಂಶೋಧನೆ ನಡೆಸುತ್ತಿದ್ದರಿಂದ ತ್ವರಿತವಾಗಿ ಕೊವಿಡ್-19 ರ ಲಸಿಕೆ ಸಂಶೋಧನೆ ನಡೆಸಲು ಸಾಧ್ಯವಾಯಿತು ಎಂದು ವಿಶ್ವವಿದ್ಯಾಲಯದ ಸಂಶೋಧಕರು ಹೇಳಿದ್ದಾರೆ.

PittCoVacc ಎಂದು ಕರೆಯಲಾಗಿರುವ ಈ ಲಸಿಕೆ ಬೆರಳು ತುದಿಯ ಗಾತ್ರದ ಸಣ್ಣ ಸಣ್ಣ 400 ಸೂಜಿಗಳಲ್ಲಿ ಲಭ್ಯವಾಗಲಿದ್ದು, ಇದು ಸ್ಪೈಕ್ ಪ್ರೋಟೀನ್ ನನ್ನು ಚರ್ಮಕ್ಕೆ ಸೇರಿಸುವ ಶಕ್ತಿ ಇದೆ. ಸಕ್ಕರೆಯಿಂದ ಮಾಡಿರುವವ ಈ ಸೂಜಿಗಳು ಚರ್ಮದಲ್ಲಿ ಕರಗಿಹೋಗಲಿದೆ ಎಂದಿದ್ದಾರೆ ಸಂಶೋಧಕರು

ಮನುಷ್ಯರ ಮೇಲೆ ಪ್ರಯೋಗ ನಡೆಸಲು ಇದು ಒಂದ ವರ್ಷಕ್ಕೂ ಹೆಚ್ಚು ಕಾಲ ಹಿಡಿಯಬಹುದು ಎಂದು ಅಂದಾಜಿಸಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights