ಸಂಜಯ್ ದತ್ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಶುಭ ಹಾರೈಸಿದ ಕೆಜಿಎಫ್-2 ತಂಡ..!

ಬಾಲಿವುಡ್ ಖ್ಯಾತ ನಟ ಸಂಜಯ್ ದತ್ ಅವರಿಗೆ ಇಂದು 62 ನೇ ಹುಟ್ಟುಹಬ್ಬದ ಸಂಭ್ರಮ. ಟ್ರೈಲರ್ ಮೂಲಕ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ ಕೆಜಿಎಫ್-2 ತಂಡ ಸಂಜಯ್ ದತ್ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಶುಭ ಹಾರೈಸಿದೆ.

ನಟ ಸಂಜಯ್ ದತ್ ಅವರಿಗೆ ಇಂದು (ಜುಲೈ 29) 62 ವರ್ಷ ತುಂಬಿದೆ. ಇವರ ಹುಟ್ಟುಹಬ್ಬಕ್ಕೆ ಸ್ಟಾರ್ ನಟರು ಶುಭ ಹಾರೈಸುತ್ತಿದ್ದಾರೆ. ಕೆಜಿಎಫ್-2 ನಿರ್ಮಾಪಕರು ಚಿತ್ರದ ನಟನ ಪಾತ್ರದ ಹೊಸ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ವಿಶ್ ಮಾಡಿದ್ದಾರೆ.

ಯಶ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಚಿತ್ರದಲ್ಲಿ ಸಂಜಯ್ ದತ್ ಎದುರಾಳಿಯಾಗಿ ನಟಿಸಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ಬಹುಭಾಷಾ ಚಿತ್ರ ‘ಕೆಜಿಎಫ್: ಅಧ್ಯಾಯ 2’ ಡಿಸೆಂಬರ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಆದರೆ ಚಿತ್ರ ಬಿಡುಗಡೆಯ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಬಂದಿಲ್ಲ.

‘ಕೆಜಿಎಫ್: ಅಧ್ಯಾಯ 2’ ನ ನಿರ್ಮಾಪಕರು ಬಿಡುಗಡೆ ಮಾಡಿದ ಹೊಸ ಪೋಸ್ಟರ್ ಸಂಜಯ್ ದತ್ ಅವರ ಪಾತ್ರ ಅಧೀರಾ ಅವರ ಎಲ್ಲಾ ವೈಭವವನ್ನು ಶೈಲಿಯನ್ನು ತೋರಿಸುತ್ತದೆ. ಕೈಯಲ್ಲಿ ಕತ್ತಿಯನ್ನು ಹಿಡಿದು ಅದನ್ನು ಅವರ ಹೆಗಲ ಮೇಲೆ ಇಟ್ಟುಕೊಂಡಿರುವ ಪೋಸ್ಟರ್ ಅಭಿಮಾನಿಗಳಲ್ಲಿ ಸಿನಿಮಾ ಬಗ್ಗೆ ಭಾರೀ ನಿರೀಕ್ಷೆ ಮೂಡಿಸಿದೆ. ನಟ ಸಂಜಯ್ ದತ್ ಈ ಪೋಸ್ಟರ್ ಅನ್ನು ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹುಟ್ಟುಹಬ್ಬದ ಶುಭಾಶಯಗಳಿಗಾಗಿ ಕೆಜಿಎಫ್ ತಂಡ ಮತ್ತು ಅವರ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

ಕೆಜಿಎಫ್: ಅಧ್ಯಾಯ 2ರಲ್ಲಿ ಯಶ್, ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ, ಪ್ರಕಾಶ್ ರಾಜ್, ಮಾಳವಿಕಾ ಅವಿನಾಶ್ ಮತ್ತು ಅಚ್ಯುತ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights