ಪಿಎಂಎವೈ ಹಗರಣ: ಸರ್ಕಾರಿ ಕಚೇರಿಗೆ ನುಗ್ಗಿ ಬಿಜೆಪಿ ಕಾರ್ಯಕರ್ತರ ದಾಂದಲೆ!

ಒಡಿಶಾದ ಭದ್ರಕ್ ಜಿಲ್ಲೆಯ ಕುಬೇರ ಪಂಚಾಯತ್‌ನಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಫಲಾನುಭವಿಗಳ ಆಯ್ಕೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಸೋಮವಾರ ತಿಹಿಡಿ ಬ್ಲಾಕ್ ಅಭಿವೃದ್ಧಿ ಕಚೇರಿಗೆ ನುಗ್ಗಿ ಪ್ರತಿಭಟನೆ ನಡೆಸಿದ್ದಾರೆ.

ಸರ್ಕಾರಿ ಆಸ್ತಿ-ಪಾಸ್ತಿಯನ್ನು ಹಾನಿಗೊಳಿಸಿದ ನಂತರ ಮಧ್ಯಾಹ್ನದ ವೇಳೆಗೆ ಕಚೇರಿಗೆ ನುಗ್ಗಿದ ಪಕ್ಷದ ಕಾರ್ಯಕರ್ತರು, ಯೋಜನೆಯಡಿಯಲ್ಲಿ ಶ್ರೀಮಂತ ವ್ಯಕ್ತಿಗಳಿಗೆ ಮನೆಗಳನ್ನು ಮಂಜೂರು ಮಾಡಲಾಗಿದೆ, ಮನೆಯಿಲ್ಲದವರಿಗೆ ಯೋಜನೆಯ ಫಲಾನುಭವ ಸಿಕ್ಕಿಲ್ಲ. ಮನೆಗಳನ್ನು ಮಂಜೂರು ಮಾಡಿದ ಫಲಾನುಭವಿಗಳ ಹೆಸರನ್ನು ತಕ್ಷಣವೇ ರದ್ದುಗೊಳಿಸುವಂತೆ ಒತ್ತಾಯಿಸಿ ಧರಣಿ ನಡೆಸಿದ್ದಾರೆ.

ಇದೇ ರೀತಿಯ ಅಕ್ರಮಗಳನ್ನು ಬ್ಲಾಕ್‌ನ ಇತರ ಪಂಚಾಯತ್‌ಗಳಲ್ಲಿ ಸಂಬಂಧಿಸಿದ ಅಧಿಕಾರಿಗಳು ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

“ಮನವಿ ಪತ್ರವನ್ನು ನೀಡಲು ಬಂದ ಪಕ್ಷದ ಕಾರ್ಯಕರ್ತರು, ಕಚೇರಿಯ ಪೀಠೋಪಕರಣಗಳನ್ನು ದೋಚಲು ಪ್ರಾರಂಭಿಸಿದರು. ನಾನು ಶೀಘ್ರದಲ್ಲೇ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡುತ್ತೇನೆ” ಎಂದು ತಿಹಿದಿ ಬಿಡಿಒ ಬಸಂತ ಕುಮಾರ್ ಸಹಾನಿ ಹೇಳಿದ್ದಾರೆ.

ಇದನ್ನೂ ಓದಿ: ಪಂಜಾಬ್ ಚುನಾವಣಾ ವಸ್ತಿಲಿನಲ್ಲಿ ಐದು ಅಕಾಲಿ ನಾಯಕರು ಬಿಜೆಪಿಗೆ ಸೇರ್ಪಡೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights