ಸಚಿವ ಸ್ಥಾನ ಕೈತಪ್ಪಿದರೆ ಹಾವೇರಿಗೆ ನೋ ಎಂಟ್ರಿ: ಸಿಎಂಗೆ ಓಲೇಕಾರ್ ಬೆಂಬಲಿಗರಿಂದ ಎಚ್ಚರಿಕೆ..!

ಸಚಿವ ಸಂಪುಟ ರಚನೆಗೆ ಕೊನೆಗೂ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಸಚಿವಾಕಾಂಕ್ಷಿಗಳ ಕೊನೆ ಕ್ಷಣದ ಲಾಬಿ ಜೋರಾಗಿದೆ. ಇಂದು ಸಂಜೆ ಸಿಎಂ ಬೊಮ್ಮಾಯಿ ದೆಹಲಿಯಿಂದ ಸಚಿವರ ಪಟ್ಟಿಯೊಂದಿಗೆ ಆಗಮಿಸಲಿದ್ದು ಎಲ್ಲರ ಚಿತ್ತ ಸಚಿವರ ಪಟ್ಟಿಯಲ್ಲಿರುವ ಹೆಸರಿನತ್ತ ನೆಟ್ಟಿದೆ. ಈ ಮಧ್ಯೆ ಸಿಎಂ ಬೊಮ್ಮಾಯಿಗೆ ಓಲೇಕಾರ್ ಬೆಂಬಲಿಗರು ಎಚ್ಚರಿಕೆ ಕೊಟ್ಟಿದ್ದಾರೆ.

ಇನ್ನೇನು ಬೊಮ್ಮಾಯಿ ಬಳಗ ವಿಸ್ತರವಾಗಲಿದ್ದು, ನಾಳೆ ಸಂಪುಟ ರಚನೆಯಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಹೈಕಮಾಂಡ್ ನಿಂದ ಕೊನೆಗೂ ಸಚಿವ ಸಂಪುಟ ರಚನೆಗೆ ಒಪ್ಪಿಗೆ ಸಿಕ್ಕಿದ್ದು, ಇಂದು ಸಂಜೆ ವೇಳೆ ಯಾರಿಗೆ ಸಚಿವ ಸ್ಥಾನ ಸಿಗಲಿದೆ ಅನ್ನೋದು ತಿಳಿಯಲಿದೆ. ಮಂತ್ರಿಗಿರಿಗಾಗಿ ಸಚಿವಾಕಾಂಕ್ಷಿಗಳು  ಕೊನೆ ಕ್ಷಣದ ಕಸರತ್ತು ಮಾಡುತ್ತಿದ್ದು ಬಿಎಸ್ ಯಡಿಯೂರಪ್ಪ ಹಾಗೂ ಶಾಸಕರ ಬೆಂಬಲಿಗರಿಂದಲೂ ಒತ್ತಡ ಹೇರಲಾಗುತ್ತಿದೆ. ಈ ಮಧ್ಯೆ ಶಾಸಕ ನೆಹರು ಓಲೇಕಾರ್ ಅವರಿಗೆ ಸಚಿವ ಸ್ಥಾನ ನೀಡಲೇಬೇಕೆಂದು ಬೆಂಬಲಿಗರು ಪಟ್ಟು ಹಿಡಿದಿದ್ದಾರೆ.

ಒಂದು ವೇಳೆ ಸಚಿವ ಸ್ಥಾನ ನೀಡದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡುತ್ತೇವೆ ಎಂದು ಕಾವೇರಿ ನಿವಾಸದ ಮುಂದೆ ಓಲೇಕಾರ್ ಬೆಂಬಲಿಗರು ಎಚ್ಚರಿಕೆ ಕೊಟ್ಟಿದ್ದಾರೆ. ನಮ್ಮ ತಾಳ್ಮೆಯ ಕಟ್ಟೆ ಒಡೆದಿದೆ. ಪದೇ ಪದೇ ನಮ್ಗೆ ಅನ್ಯಾಯವಾಗಿದೆ. ಸಚಿವ ಸ್ಥಾನ ನೀಡದೇ ಹೋದರೆ ಹಾವೇರಿಗೆ ಸಿಎಂ ಆಗಮಿಸಲು ಬಿಡುವುದಿಲ್ಲ ಎಂದು ಶಾಸಕ ನೆಹರು ಓಲೇಕಾರ್ ಬೆಂಬಲಿಗರು ಎಚ್ಚರಿಸಿದ್ದಾರೆ.

ಸಚಿರ ಪಟ್ಟಿಯಲ್ಲಿ ಅರವಿಂದ್ ಬೆಲ್ಲದ್, ಬಿಸಿ ನಾಗೇಶ್, ಸತೀಶ್ ರೆಡ್ಡಿಯ ಹೆಸರಿರುವುದು ಪಕ್ಕ ಎನ್ನಲಾಗುತ್ತಿದ್ದು ಭಾರೀ ಕುತೂಹಲ ಮೂಡಿಸಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights