ಬಿಗ್ ಬಾಸ್ 8 ಗ್ರ್ಯಾಂಡ್ ಫಿನಾಲೆಗೆ ಕೆಲವೇ ದಿನ ಬಾಕಿ : ಯಾರ ಕೈ ಸೇರುತ್ತೆ ಟ್ರೋಫಿ?

ಬಿಗ್ ಬಾಸ್ ಮನೆಯಿಂದ ದಿವ್ಯ ಸುರೇಶ್ ರಾತ್ರೋರಾತ್ರಿ ಹೊರನಡೆದಿದ್ದು, ಇನ್ನೇನು ಗ್ರ್ಯಾಂಡ್ ಫಿನಾಲೆಗೆ ಮೂರೇ ದಿನಗಳು ಬಾಕಿ ಇವೆ.

ಬಿಗ್ ಬಾಸ್ ಸೀಸನ್ 8 ರಲ್ಲಿ ಗ್ರ್ಯಾಂಡ್ ಫಿನಾಲೆಗೆ ಪ್ರಶಾಂತ್ ಸಂಬರಗಿ, ದಿವ್ಯ ಉರುಡುಗ, ಮಂಜು ಪಾವಗಡ, ವೈಷ್ಣವಿ ಮತ್ತು ಅರವಿಂದ್ ಕೆಪಿ ಒಟ್ಟು ಐದು ಜನ ಸ್ಪರ್ಧಿಗಳು ಎಂಟ್ರಿ ಕೊಡಲಿದ್ದಾರೆ. ಇವರಲ್ಲಿ ಎಲ್ಲರೂ ಸ್ಟ್ರಾಂಗ್ ಕಂಟೆಸ್ಟೆಂಟ್ ಆಗಿದ್ದು, ಟ್ರೋಫಿ ಯಾರ ಕೈ ಸೇರಲಿದೆ ಅನ್ನೋ ಕುತೂಹಲ ಮೂಡಿದೆ.

ಪ್ರಶಾಂತ್ ಸಂಬರಗಿ ಹೋರಾಟದ ಮೂಲಕ ಮನೆಯ ಸ್ಪರ್ಧಿಗಳ ಸರಿ ತಪ್ಪುಗಳನ್ನು ಎತ್ತಿ ಹಿಡಿಯುತ್ತಾ ಜೊತೆಗೆ ತಮ್ಮ ತಪ್ಪುಗಳನ್ನು ತಿಂದಿಕೊಂಡು ಬಿಗ್ ಬಾಸ್ ಮನೆಯಲ್ಲಿ ಇಲ್ಲಿವರೆಗೂ ಸಾಗಿಕೊಂಡು ಬಂದವರು. ಇಲ್ಲಿವರೆಗೂ ಕೈಹಿಡಿದ ಅಭಿಮಾನಿಗಳು ಪ್ರಶಾಂತ್ ಅವರನ್ನು ಇನ್ನೂ ಮುಂದೆ ನಡೆಸುತ್ತಾರಾ ಅನ್ನೋ ಕುತೂಹಲವಿದೆ.

Prashanth Sambargi (Bigg Boss Kannada 8) Wiki, Age, Wife, Children, Family, Biography & More – WikiBio

ಅಗ್ನಿಸಾಕ್ಷಿ ಧಾರಾವಾಹಿಯ ಮೂಲಕ ಎಲ್ಲರ ಮನೆ ಮಾತಾಗಿದ್ದ ವೈಷ್ಣವಿ ಬಿಗ್ ಬಾಸ್ ಮನೆಯಲ್ಲೂ ತಾಳ್ಮೆ, ಸಹನೆಗೆ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಯಾರೊಬ್ಬರ ಮೇಲೆ ಅವಲಂಬಿತರಾಗದೇ, ಯಾರ ಸಹಕಾರವೂ ಇಲ್ಲದೇ ಮನೆಯ ಎಲ್ಲಾ ಸದಸ್ಯರೊಂದಿಗೆ ಏಕತೆ ಕಾಯ್ದುಕೊಂಡು ಬಂದಿರುವ ವೈಷ್ಣವಿ ಸಾಕಷ್ಟು ಅಭಿಮಾನಿಗಳ ಪ್ರೀತಿ ಗಳಿಸಿದ್ದಾರೆ.

ಕಿರುತೆರೆ ನಟಿ ಅಗ್ನಿಸಾಕ್ಷಿ 'ವೈಷ್ಣವಿ ಗೌಡ'ಸ್ಟೈಲ್ ಮೋಡಿ | udayavani

ಇನ್ನೂ ಬಿಗ್ ಬಾಸ್ ಮನೆಗೆ ಆಗಮಿಸಿದಾಗಿಂದಲೂ ಆಟದಲ್ಲಿ ಹೆಚ್ಚು ಗೆದ್ದು ಗುರುತಿಸಿಕೊಂಡಿದ್ದು ದಿವ್ಯಾ ಉರುಡುಗ. ಮನೆಯ ಎಲ್ಲಾ ಮಹಿಳಾ ಸ್ಪರ್ಧಿಗಳಿಗೆ ಹೋಲಿಕೆ ಮಾಡಿದರೆ ದಿವ್ಯ ಉರುಡುಗ ಹೆಚ್ಚು ಪೈಪೋಟಿಗಿಳಿಯುತ್ತಿದ್ದರು. ಅವರು ಯಾವುದೇ ಆಟವಾಡಲಿ ಗೆಲ್ಲುವ ಛಲವೇ ಅವರನ್ನು ಬಿಗ್ ಬಾಸ್ ಮನೆಯಲ್ಲಿ ಇಲ್ಲಿವರೆಗು ಉಳಿಸಿಕೊಂಡು ಬಂದಿದೆ.

theerthahalli: Why was Divya Uruduga worried during Huliraaya? | Kannada Movie News - Times of India

 

ಇನ್ನೂ ಅರವಿಂದ್ ಕೆಪಿ ಆಟದಲ್ಲಿ ಯಾವಾಗಲೂ ತಮ್ಮೊಂದಿಗೆ ಯಾರು ಹೆಚ್ಚು ಬಲವಾಗಿ ಸ್ಪರ್ಧಿಸುತ್ತಾರೋ ಅವರನ್ನೇ ಆಯ್ಕೆ ಮಾಡುಕೊಂಡು ಆಡುವ ಸ್ವಭಾವ ಉಳ್ಳವರು. ಮನೆಯ ಸದಸ್ಯರೊಂದಿಗೆ ಎಂಥದ್ದೇ ಮನಸ್ತಾಪವಿರಲಿ ಕ್ಷಮೆ ಕೇಳಿ ಅವರೊಂದಿಗೆ ಸ್ನೇಹವನ್ನು ಮುಂದುವರೆಸಿಕೊಂಡು ಹೋಗುವ ವ್ಯಕ್ತತ್ವ ಅರವಿಂದ್ ಕೆಪಿ ಅವರದ್ದು. ಅರವಿಂದ್ ಅವರ ಆಟ, ಮನೆಯ ಸದಸ್ಯರೊಂದಿಗಿನ ಸಂಬಂಧ ಹಾಗೂ ಕ್ಷಮಾಭಾವವನ್ನು ಜನ ಮೆಚ್ಚಿಕೊಂಡಿದ್ದಾರೆ. ಹೀಗಾಗಿ ಈ ಬಾರಿ ಟ್ರೋಫಿ ಕೆಪಿ ಅರವಿಂದ್ ಅವರದ್ದೇ ಎನ್ನಲಾಗುತ್ತಿದೆ.

TVS Racing announces Aravind KP to be a part of Dakar Rally 2017 - Auto News

 

ಮನುಷ್ಯನ ಆಯಸ್ಸು ವೃದ್ಧಿಯಾಗಬೇಕಾದರೆ ನಗುವುದು ತುಂಬಾನೇ ಮುಖ್ಯ. ಈ ನಗುವುದು ಮತ್ತು ನಗಿಸುವುದು ತುಂಬಾ ಕಷ್ಟದ ವಿಷಯ. ಆದರೆ ಬಿಗ್ ಬಾಸ್ ವೀಕ್ಷಕರನ್ನು ಹಾಗೂ ಸ್ಪರ್ಧಿಗಳನ್ನು ತುಂಬಾ ಸುಲಭವಾಗಿ ನಗಿಸಿದ್ದು ಮಂಜು ಪಾವಗಡ. ಮಂಜು ಪಾವಗಡ ಅಲ್ಲದೇ ಬಹುಶ: ಬಿಗ್ ಬಾಸ್ ಸೀಸನ್ 8 ರಲ್ಲಿ ಬೇರೆ ಯಾವ ಸ್ಪರ್ಧಿಗಳಿಂದಲೂ ಇಷ್ಟೊಂದು ನಗಿಸಲು ಸಾಧ್ಯವಾಗುತ್ತಿರಲಿಲ್ಲವೆನೋ. ಮಂಜು ಕೇವಲ ನಗಿಸುವುದರಲ್ಲಿ ಮಾತ್ರ ಮನೆಯ ನೆಚ್ಚಿನ ಸ್ಪರ್ಧಿಯಾಗಿಲ್ಲ. ಆಟ ಆಡುವುದರಲ್ಲಿ ಸ್ಟ್ರಾಂಗ್ ಕಂಟೆಸ್ಟೆಂಟ್. ಎದುರಾಳಿ ಯಾರೇ ಇರಲಿ ಕಠಿಣ ಪೈಪೋಟಿ ನೀಡಿದ್ದಾರೆ. ಮನೆಯ ಎಲ್ಲಾ ಸದಸ್ಯರಿಗಿಂತ ಹೆಚ್ಚು ಆಟಗಳಲ್ಲಿ ಜಯಗಳಿಸಿದ್ದಾರೆ. ಹೀಗೆ ಅಡುಗೆ, ಆಟ, ಕಾಮಿಡಿ ಎಲ್ಲದರ ಮೂಲಕ ಮಂಜು ಫೇಮಸ್. ಹೀಗಾಗಿ ಈ ಬಾರಿ ಮಂಜುಗೇ ಬಿಗ್ ಬಾಸ್ ಟ್ರೋಫಿ ಸಿಗಲಿದೆ ಎನ್ನಲಾಗುತ್ತಿದೆ.

Bigg Boss Kannada 8: Manju Pavagada Becomes Frontrunner For Top 5

ಒಟ್ಟಿನಲ್ಲಿ ವೈಷ್ಣವಿ, ಪ್ರಶಾಂತ್ ಸಂಬರಗಿ, ದಿವ್ಯ ಉರುಡುಗ, ಅರವಿಂದ್ ಹಾಗೂ ಮಂಜು ಗ್ರ್ಯಾಂಡ್ ಫಿನಾಲೆಗೆ ಎಂಟ್ರಿ ಕೊಡಲಿದ್ದಾರೆ. ಬಿಗ್ ಬಾಸ್ ಆರಂಭದ ದಿನಗಳಿಂದಲೂ ಲೆಕ್ಕಾಚಾರ ಹಾಕಿದರೆ ಕೆಲ ಮನಸ್ತಾಪಗಳಿಂದ ಪ್ರಶಾಂತ ಸಂಬರಗಿ, ಅರವಿಂದ್ ಅವರೊಂದಿಗಿನ ಹೆಚ್ಚು ಸಲಿಗೆ ವಿಚಾರದಲ್ಲಿ ದಿವ್ಯ ಉರುಡುಗ ಮತ್ತು ಆಟದಲ್ಲಿ ಹೆಚ್ಚಾಗಿ ಪ್ರಯತ್ನಿಸದ ವೈಷ್ಣವಿ, ದಿವ್ಯಾ ಉರುಡುಗ ಜೊತೆ ಹೆಚ್ಚು ಸಲುಗೆಯಿಂದಿರುವ ಅರವಿಂದ್ ಮತ್ತು ಪ್ರಶಾಂತ್ ಅವರ ಮೇಲಿನ ಮನಸ್ತಾಪ ಬಗೆಹರಿಸಿಕೊಳ್ಳದ ಮಂಜು ಹೀಗೆ ಒಂದೊಂದು ಕಾರಣಗಳಿಂದ ಮನೆಯ ಐದು ಸ್ಪರ್ಧಿಗಳಿಗೆ ಓಟ್ ಬ್ಯಾಂಕ್ ಕಡಿಮೆಯಾಗುವ ಸಾಧ್ಯತೆ ಇದೆ. ಆದರೆ ಎಲ್ಲವನ್ನೂ ತಾಳೆ ಹಾಕಿ ನೋಡಿದಾಗ ಈ ಐವರಲ್ಲಿ ಕೊನೆಗೆ ಮಂಜು ಹಾಗೂ ಅರವಿಂದ್ ಕೆಪಿ ಇಬ್ಬರಲ್ಲಿ ಒಬ್ಬರು ರನ್ನರ ಅಪ್ ಆಗಲಿದ್ದಾರೆ ಎನ್ನಲಾಗುತ್ತಿದೆ.

ಒಟ್ಟಿನಲ್ಲಿ ಟ್ರೋಫಿ ಯಾರ ಕೈ ಸೇರುತ್ತೆ ಅನ್ನೋದನ್ನ ಆಗಸ್ಟ್ 8ರವೆರೆಗೂ ಕಾದು ನೋಡಬೇಕಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights