ದ್ರಾಕ್ಷಿ ಮೇಲೆ ಉಗುಳಿದ ವ್ಯಾಪಾರಿ ಸುಳ್ಳು ಸುದ್ದಿ ಪ್ರಸಾರ: ಟಿವಿ5 ಮೇಲೆ ದೂರು

ಕೊರೊನ ಬಿಕ್ಕಟ್ಟಿನ ಸಮಯದಲ್ಲಿ ಕೆಲವು ಮಾಧ್ಯಮಗಳು ಕೋಮುಗಳ ನಡುವೆ ದ್ವೇಷ ಹುಟ್ಟಿಸುವ ಸುದ್ದಿಗಳನ್ನು ಬಿತ್ತರಿಸುತ್ತಿರುವುದು ದುರದೃಷ್ಟಕರ ಸಂಗತಿ.

ಬೀದಿ ವ್ಯಾಪಾರಿಯೊಬ್ಬರು ದ್ರಾಕ್ಷಿಯ ಮೇಲೆ ಉಗಿದು ಮಾರುತಿದ್ದಾರೆ ಎಂದು Tv5 ಟಿವಿ ವಾಹಿನಿಯಲ್ಲಿ ‘ನಮ್ಮ ಉತ್ತರ ಕರ್ನಾಟಕ’ ಫೇಸ್ಬುಕ್ ಪೇಜ್ ನವರು ಮಾಡಿರುವ ಒಂದು ವೀಡಿಯೋ ಆಧಾರದ ಮೇಲೆ ಸುದ್ದಿ ಒಂದು ಪ್ರಕಟಿಸಿದ್ದರು. ಆದರೆ ಅದನ್ನು ಕೂಲಂಕುಶವಾಗಿ ಪರಿಶೀಲಿಸಿದರೆ ಆ ವೀಡಿಯೋದಲ್ಲಿ, ಎಲ್ಲು‌ ಸಹ ಆ ಬೀದಿ ವ್ಯಾಪಾರಿ ದ್ರಾಕ್ಷಿಯ ಮೇಲೆ ಉಗಿದರು ಎಂದು ಹೇಳಿಲ್ಲ.‌ ಬದಲಿಗೆ ನೆಲದ‌ಮೇಲೆ ಉಗಿದರು ಎಂದು ಹೇಳಿದ್ದಾರೆ ಮತ್ತು ಗೊತ್ತಿಲ್ಲದೇ ಮಾಡಿದ ತಪ್ಪಿಗೆ ಕ್ಷಮೆಯನ್ನು ಕೇಳಿಕೊಂಡಿದ್ದಾರೆ. ಆದರೆ ಅದನ್ನು ತಿರುಚಿ ಈ ಮಾಧ್ಯಮಗಳು ದ್ರಾಕ್ಷಿ ಮೇಲೆ ಉಗಿದಿದ್ದಾರೆ ಎಂದು ಸುಳ್ಳು ಸುಳ್ಳೇ ಪ್ರಚಾರ ಮಾಡಿದ್ದಾರೆ.

“ನೆಲದ‌ಮೇಲೆ ಉಗಿಯುವುದು ತಪ್ಪು. ಅದರ ಮೇಲೆ ಕ್ರಮ‌ ತೆಗೆದುಕೊಳ್ಳಲಿ. ಆದರೆ ಬದಲಿಗೆ ಸುಳ್ಳುಸುದ್ದಿ ಹಬ್ಬಿಸಿ ಬಡ ಬೀದಿ ವ್ಯಾಪಾರಿಗಳ ಹೊಟ್ಟೆಪಾಡಿಗೆ ಹೊಡೆಯುತಿದ್ದಾರೆ. ಅಲ್ಲದೆ ಅದನ್ನು ಮುಸ್ಲಿಂ ದ್ವೇಷಕ್ಕೆ ಕೂಡ ತಿರುಗಿಸಲಾಗುತ್ತಿದೆ. ಇದರ ವಿರುದ್ಧ ಪೋಲಿಸರಿಗೆ ದೂರು ನೀಡಿಲಾಗಿದೆ” ಎಂದು ಬೆಂಗಳೂರು ಜಿಲ್ಲ ಬೀದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಸದಸ್ಯರಾದ ವಿನಯ್ ಹೇಳಿದ್ದಾರೆ.

ಈ ನಿಟ್ಟಿನಲ್ಲಿ ಜೆಪಿ ನಗರ ಪೋಲಿಸ್ ಠಾಣೆಯಲ್ಲಿ ಲಿಖಿತ ದೂರು ಸಲ್ಲಿಸಲಾಗಿದೆ. ಇದರ ಪ್ರಕಾರವಾಗಿ ಪೋಲಿ ಠಾಣೆಗೆ ಸಂಪರ್ಕಿಸಿ ವಿಚಾರಿಸಿದಾಗ ಆ ವ್ಯಾಪಾರಿ ದ್ರಾಕ್ಷಿಯ ಮೇಲೆ ಉಗಿದಿಲ್ಲ ಎಂದು ಪೊಲೀಸರು ಸ್ಪಷ್ಟಪದ್ಸಿರುವುದಾಗಿ ವಾರ್ತಾ ಭಾರತಿ ಪತ್ರಿಕೆ ವರದಿ ಮಾಡಿದೆ.

ದೇಶದಾದ್ಯಂತ ಇಂತಹ ಪ್ರಕರಣಗಳು ಆಗಿದ್ದು, ಏನ್ ಸುದ್ದಿ ಜಾಲತಾಣದಲ್ಲಿಯೇ ಇಂಥಹ ಸುಳ್ಳುಗಳನ್ನೂ ಪತ್ತೆ ಹಚ್ಚಿ ಬಯಲಿಗಿಲೆದಿರುವ ವರದಿಗಳನ್ನು ಈ ಹಿಂದೆ ಪ್ರಕಟಿಸಿದ್ದೆವು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights