ದೇಶದಲ್ಲಿ ಮುಂದುವರೆದ ಕೊರೊನಾ ಹಾವಳಿ : 24 ಗಂಟೆಗಳಲ್ಲಿ 44,643 ಕೇಸ್ ಪತ್ತೆ!

ದೇಶದಲ್ಲಿ ಕೊರೊನಾ ಹಾವಳಿ ಮುಂದುವರೆದಿದ್ದು 24 ಗಂಟೆಗಳಲ್ಲಿ 44,643 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದೆ. ಜೊತೆಗೆ 464 ಜನ ಮಹಾಮಾರಿಗೆ ಬಲಿಯಾಗಿದ್ದಾರೆ.

ಭಾರತದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಲೇ ಇವೆ. 24 ಗಂಟೆಗಳಲ್ಲಿ 44,500 ಕ್ಕೂ ಹೆಚ್ಚು ಸೋಂಕುಗಳು ದಾಖಲಾಗಿದ್ದು ಈವರೆಗೆ ದೇಶದ ೊಟ್ಟು ಕೊರೊನಾ ಸೋಂಕಿತರ ಸಂಖ್ಯೆ 31.86 ಮಿಲಿಯನ್ ದಾಟಿದೆ. ಒಂದೇ ದಿನದಲ್ಲಿ 41,096 ಜನ ಚೇತರಿಸಿಕೊಂಡಿದ್ದು ಈವರೆಗೆ ದೇಶದಲ್ಲಿ ಒಟ್ಟು 3,10,15,844 ಜನ ಚೇತರಿಸಿಕೊಂಡಿದ್ದಾರೆಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಇನ್ನೂ ದೇಶದ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ ಒಟ್ಟು 4,26,754ಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳು ಈಗ 4,14,159 ರಷ್ಟಿವೆ.

ದೇಶದಲ್ಲಿ ಒಟ್ಟು 49.5 ಕೋಟಿಗೂ ಹೆಚ್ಚು ಕೋವಿಡ್ -19 ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ.

https://twitter.com/MoHFW_INDIA/status/1423490621457592323?ref_src=twsrc%5Etfw%7Ctwcamp%5Etweetembed%7Ctwterm%5E1423490621457592323%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Findia%2Fstory%2Findia-covid-cases-rise-44-500-infections-24-hours-death-active-1837474-2021-08-06

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights