‘ಪುಷ್ಪ’ ಸಿನಿಮಾದ ಮೊದಲ ಹಾಡು ಔಟ್ : ‘ದಕ್ಕೋ ದಕ್ಕೋ ಮೆಕಾ’ ಸಾಂಗ್ ವೈರಲ್..!

ಜನಪ್ರಿಯ ನಟ ಅಲ್ಲು ಅರ್ಜುನ್ ಅವರು ಅಭಿನಯದ ಪುಷ್ಪ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದ್ದು, ‘ದಕ್ಕೋ ದಕ್ಕೋ ಮೇಕಾ’ ಹಾಡಿಗೆ ಅಲ್ಲು ಫ್ಯಾನ್ಸ್  ಫುಲ್ ಫಿದಾ ಆಗಿದ್ದಾರೆ. ಮಾತ್ರವಲ್ಲದೇ ಈ ಹಾಡು ಚಿತ್ರದ ಬಗ್ಗೆ ಭಾರೀ ಕುತೂಹಲ ಮೂಡಿಸಿದೆ.

ಹೌದು… ಕ್ರಿಸ್ಮಸ್ (ಡಿಸೆಂಬರ್ 25) ರಂದು ರಿಲೀಸ್ ಆಗಲಿರುವ ಪುಷ್ಟ ಸಿನಿಮಾದ ಮೊದಲ ಹಾಡು ಇಂದು (ಆಗಸ್ಟ್ 13) ಅನಾವರಣಗೊಳಿಸಲಾಗಿದೆ. 5 ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಈ ಹಾಡನ್ನು ತಮಿಳಿನಲ್ಲಿ ಓದು ಓದು, ತೆಲುಗಿನಲ್ಲಿ ದಕ್ಕೋ ದಕ್ಕೋ ಮೇಕಾ, ಮಲಯಾಳಂನಲ್ಲಿ ಓದು ಓದು, ಹಿಂದಿಯಲ್ಲಿ ಜಾಗೋ ಜಾಗೋ ಬಕ್ರೆ ಮತ್ತು ಕನ್ನಡದಲ್ಲಿ ಜೋಕೆ ಜೋಕೆ ಮೇಕೆ ಎಂದು ಹೆಸರಿಸಲಾಗಿದೆ. ದೇವಿಶ್ರೀ ಪ್ರಸಾದ್ ಈ ಹಾಡಿಗೆ ಸಂಗೀತ ಸಂಯೋಜಿಸಿದ್ದಾರೆ.

ಸುಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ಅಲ್ಲು ಅರ್ಜುನ್ ಮತ್ತು ಫಹದ್ ಫಾಸಿಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಪುಷ್ಪ ಚಿತ್ರ ಕ್ರಿಸ್ಮಸ್ (ಡಿಸೆಂಬರ್ 25) ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಮತ್ತು ಬಾಕ್ಸ್ ಆಫೀಸ್ ನಲ್ಲಿ ಅಮೀರ್ ಖಾನ್ ಅವರ ಲಾಲ್ ಸಿಂಗ್ ಚಡ್ಡಾ ಜೊತೆ ಸೆಣಸಲಿದೆ. ಅಲ್ಲು ಅರ್ಜುನ್ ಕೆಂಪು ಶ್ರೀಗಂಧದ ಕಳ್ಳಸಾಗಾಣಿಕೆದಾರ ಪುಷ್ಪ ರಾಜ್ ಪಾತ್ರದಲ್ಲಿ ಕಾಣಿಸಿಕೊಂಡರೆ, ಫಹದ್ ಈ ಚಿತ್ರದಲ್ಲಿ ವಿರೋಧಿ ಪಾತ್ರವನ್ನು ನಿರ್ವಹಿಸಿದ್ದಾರೆ. ಐಕಾನ್ ಸ್ಟಾರ್ ಅಲ್ಲು ಅರ್ಜುನ್ ರನ್ನು ಪುಷ್ಪ: ದಿ ರೈಸ್ ನಲ್ಲಿ ಹಳ್ಳಿಗಾಡಿನ ಲುಕ್ ನಲ್ಲಿ ನೋಡಲು ಅಭಿಮಾನಿಗಳು ಈಗಾಗಲೇ ಉತ್ಸುಕರಾಗಿದ್ದಾರೆ.

ಸೌತ್ ಸಿನಿರಂಗದಲ್ಲಿ ಸಖತ್ ಸೌಂಡ್ ಮಾಡುತ್ತಿರುವ ಪುಷ್ಪ ಚಿತ್ರದಲ್ಲಿ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಈ ಚಿತ್ರದಲ್ಲಿ ಲಾರಿ ಡ್ರೈವರ್ ಪಾತ್ರದಲ್ಲಿ ರಗಡ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಅಲ್ಲು ಅರ್ಜುನ್​ಗೆ ಸ್ಟೈಲಿಷ್ ಇಮೇಜ್​ ತಂದುಕೊಟ್ಟ ಆರ್ಯ, ಆರ್ಯ-2 ಚಿತ್ರದ ನಿರ್ದೇಶಕ ಸುಕುಮಾರ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿರುವುದು ಚಿತ್ರದ ಮೇಲಿನ ನಿರೀಕ್ಷೆಯನ್ನು ಡಬಲ್ ಮಾಡಿದೆ.

ಈ ಹಿಂದೆ ಪುಷ್ಪ ಚಿತ್ರದ ಕೆಲ ವಿಡಿಯೋಗಳು ಮತ್ತು ಹಾಡುಗಳ ತುಣುಕು ಲೀಕ್ ಆಗಿ್ದವು. ಚಿತ್ರತಂಡದಲ್ಲಿರುವ ಕೆಲವರೇ ಈ ದೃಶ್ಯಗಳನ್ನು ಸೋರಿಕೆ ಮಾಡಿದ್ದಾರೆ ಎನ್ನಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights