‘ಗಣೇಶೋತ್ಸವ ಮಾತ್ರವಲ್ಲ ಎಲ್ಲವೂ ಬ್ಯಾನ್ ಆಗಬೇಕು’ ಸಿಎಂಗೆ ಎಚ್ಚರಿಕೆ ಕೊಟ್ಟ ಯತ್ನಾಳ್..!

ಕೊರೊನಾ 3ನೇ ಅಲೆ ಹರಡುವುದನ್ನು ತಡೆಕಟ್ಟಲು ರಾಜ್ಯದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿರುವ ಸಿಎಂ ಬಸವರಾಜ್ ಬೊಮ್ಮಾಯಿ ಸಾರ್ವಜನಿಕ ಗಣೇಶೋತ್ಸವಕ್ಕೂ ನಿಷೇಧ ಹೇರಿದ್ದಾರೆ.ಇದಕ್ಕೆ ಕೆರಳಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಿಎಂ ಗೆ ಎಚ್ಚರಿಕೆ ಸಂದೇಶವೊಂದನ್ನು ಕೊಟ್ಟಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, “ಕೊರೊನಾ ಹಿನ್ನೆಲೆಯಲ್ಲಿ ಗಣೇಶ್ ಚರುರ್ಥಿ ಬ್ಯಾನ್ ಮಾಡಿದ್ದರೆ ಓಕೆ. ಆದರೆ ಈ ಬ್ಯಾನ ಕೇವಲ ಗಣೇಶ್ ಚತುರ್ಥಿಗೆ ಮಾತ್ರ ಸೀಮಿತವಾಗಿದ್ದರೆ ಸುಮ್ಮನಿರಲ್ಲ. ನಾನು ಅದಕ್ಕೆ ವಿರೋಧ ಮಾಡುತ್ಥೇನೆ” ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ಕೊರೊನಾ 3ನೇ ಅಲೆಯಿಂದ ತೊಂದರೆ ಪಕ್ಕಾ ಇದೆ ಎಂದು ತಜ್ಞರು ಹೇಳುತ್ತಾರೆ. ಹೀಗಾಗಿ ನಾವು ಜನರ ಜೀವನದ ಜೊತೆ ಚೆಲ್ಲಾಟವಾಡುವುದು ಬೇಡ. ಆದರೆ ಮುಂದೆ ಯಾವುದೇ ಮೊಹರಂ ಬರಲಿ, ಸುಡಗಾಡ ಇರಲಿ ಎಲ್ಲದಕ್ಕೂ ಇಂಹತ ಬ್ಯಾನ್ ಆಗಬೇಕು.

ಅವರಿಗೊಂದು ಕಾನೂನು ನಮಗೊಂದು ಕಾನೂನು ಬೊಮ್ಮಾಯಿ ಸರ್ಕಾರದಲ್ಲಿ ನಡೆಯುವುದಿಲ್ಲ. ಒಂದು ವೇಳೆ ವ್ಯತ್ಯಾಸ್ ಆದರೆ ಅದನ್ನು ಖಂಡಿಸುತ್ತೇನೆ. ಅದಕ್ಕೆ ನಾವು ಸಿದ್ದರಿದ್ದೇವೆ ಎಂದು ವಾರ್ನ್ ಮಾಡಿದ್ದಾರೆ.

ಮುಂಬರುವ ಮೊಹರಂ ಹಾಗೂ ಗಣೇಶೋತ್ಸವಕ್ಕೆ ಹೆಚ್ಚು ಜನ ಸೇರುವ ಸಾಧ್ಯತೆ ಇದ್ದು ಇದಕ್ಕೆ ಕಡಿವಾಣ ಹಾಕುವ ಮೂಲಕ ಕೊರೊನಾ ಹರಡುವುದನ್ನ ತಡೆಗಟ್ಟಲು ಯೋಚಿಸಲಾಗುತ್ತಿದೆ. ಈಗಾಗಲೇ ರಾಜ್ಯದಲ್ಲಿ ರಾತ್ರಿ 9ರಿಂದ ಬೆಳಿಗ್ಗೆ 6ರವರೆಗೆ ಕರ್ಫ್ಯೂ ಜಾರಿಗೊಳಿಸಲಾಗಿದೆ. ಒಂದು ವೇಳೆ ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾದರೆ ವೀಕೆಂಡ್ ಲಾಕ್ ಡೌನ್ ಹಾಗೂ ಸಂಪೂರ್ಣ ಲಾಕ್ ಡೌನ್ ಮಾಡಲು ಸರ್ಕಾರ ಚರ್ಚಿಸುತ್ತಿದೆ. ಒಂದು ವೇಳೆ ಕೊರೊನಾ ಹೆಚ್ಚಾದರೆ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೆ ತರುವುದು ಪಕ್ಕಾ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights