ಆಗಸ್ಟ್‌ 15ರಂದು ಗೋವಾದಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸುವುದಿಲ್ಲ; ಕಾರಣವೇನು ಗೊತ್ತೇ?

ಇಡೀ ದೇಶವೇ 75ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷ್ ಆಳ್ವಿಕೆಯ ವಿರುದ್ದ ಹೋರಾಡಿ ಮಡಿದ ಅನೇಕ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸಿಕೊಳ್ಳಲಾಗುತ್ತದೆ. ಅದರೆ, ಗೋವಾ ಮಾತ್ರ ಆಗಸ್ಟ್‌ 15ರಂದು ಸ್ವಾತಂತ್ರ್ಯ ದಿನವನ್ನು ಆಚರಿಸುವುದಿಲ್ಲ.

ಭಾರತ 1947ರಲ್ಲಿ ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆದರೂ ಕೂಡ ಗೋವಾ ಪೋರ್ಚುಗೀಸ್ ವಸಾಹತಿನ ಅಡಿಯಲ್ಲಿತ್ತು. ಪೋರ್ಚುಗೀಸರು ಗೋವಾದ ಸುಂದರವಾದ ಭೂಮಿ ಮತ್ತು ರಮಣೀಯ ಸೌಂದರ್ಯಕ್ಕಾಗಿ 450 ವರ್ಷಗಳಿಗೂ ಹೆಚ್ಚು ಕಾಲ ಆ ರಾಜ್ಯವನ್ನು ಆಳಿದ್ದಾರೆ. ಭಾರತವನ್ನು ಆಳದ ವಿದೇಶಿಗರಲ್ಲಿ ಪೋರ್ಚುಗೀಸರು ಮೊದಲ ವಸಾಹತುದಾರರು ಮತ್ತು ಕೊನೆಯದಾಗಿ ದೇಶವನ್ನು ತೊರೆದರು ಕೂಡ ಪೋರ್ಚುಗೀಸರು.

ಇದನ್ನೂ ಓದಿ: ಅಮೃತ ಮಹೋತ್ಸವ: ಹಲವು ಅಮೃತ ಯೋಜನೆಗಳನ್ನು ಘೋಷಿಸಿದ ಸಿಎಂ ಬೊಮ್ಮಾಯಿ!

1510ರಲ್ಲಿ ಪೋರ್ಚುಗೀಸರು ಗೋವಾವನ್ನು ಆಕ್ರಮಿಸಿದ್ದರು. ನಾಲ್ಕು ಶತಮಾನಗಳಿಗೂ ಹೆಚ್ಚು ಕಾಲ, ಗೋವಾದಲ್ಲಿ ಜನರು ಡಯಾಬಾಲಿಕ್ ಚಿತ್ರಹಿಂಸೆಗೆ ಒಳಗಾಗಿದ್ದರು. ಕೊಂಕಣಿ ಭಾಷೆಯನ್ನು ನಿಗ್ರಹಿಸುವುದು, ಹಿಂದೂಗಳು ಮತ್ತು ಗೋವಾ ಕ್ಯಾಥೊಲಿಕ್‌ಗಳ ಮೇಲೆ ಕಿರುಕುಳ ನೀಡುವುದರಿಂದ ಹಿಡಿದು ಹಿಂದೂ ದೇವಾಲಯಗಳ ನಾಶ ಮತ್ತು ಹಿಂದೂ ವಿವಾಹದ ಆಚರಣೆಗಳ ಮೇಲಿನ ನಿಷೇಧಗಳು ಗೋವಾದಲ್ಲಿದ್ದವು.

ಪೋರ್ಚುಗೀಸರ ಆಳ್ವಿಕೆಯ ಅಂತ್ಯ 18 ಜೂನ್, 1946 ರಂದು ಆರಂಭವಾಯಿತು. ಭಾರತದ ಉಳಿದ ಭಾಗಗಳು ಸ್ವಾತಂತ್ರ್ಯದತ್ತ ಸಾಗುತ್ತಿದ್ದಾಗ, ರಾಜಕೀಯ ನಾಯಕ ರಾಮ್ ಮನೋಹರ್ ಲೋಹಿಯಾ ಅವರು ಬರಹಗಾರ ಡಾ. ಜೂಲಿಯೊ ಮೆನೆಜೆಸ್ ಅವರೊಂದಿಗೆ ಗೋವಾಕ್ಕೆ ಭೇಟಿ ನೀಡಿದ್ದರು. ಗೋವಾ ಜನರ ಕಷ್ಟ ತಿಳಿದ ನಂತರ, ಲೋಹಿಯಾ ರಾಜ್ಯದಲ್ಲಿ ನಾಗರಿಕ ಅಸಹಕಾರ ಚಳುವಳಿಯನ್ನು ಆರಂಭಿಸಿದರು.

ಪ್ರಭಾಕರ ವಿಠ್ಠಲ್ ಸಿನಾರಿ ಮತ್ತು ಅವರ ಆಪ್ತರು ಕ್ರಾಂತಿಕಾರಿ ಸಂಘಟನೆಯನ್ನು ಆಜಾದ್ ಗೋಮಂತಕ್ ದಳ(Azad Gomantak Dal) ರಚಿಸಿ, ಪೋರ್ಚುಗೀಸರ ವಿರುದ್ಧ ಹೋರಾಡಲು ಸಜ್ಜಾಯಿತು. ಇದರೊಂದಿಗೆ ಅನೇಕ ಸಂಘಟನೆಗಳು ಸೇರಿ ಯುನೈಟೆಡ್ ಫ್ರಂಟ್ ಆಫ್ ಲಿಬರೇಶನ್ ಎಂಬ ದೊಡ್ಡ ಒಕ್ಕೂಟವನ್ನು ರಚಿಸಿದರು.

ಗೋವಾ ವಿಮೋಚನೆಗಾಗಿ 1946 ರಲ್ಲಿ ಆರಂಭವಾದ ಸುದೀರ್ಘ ಹೋರಾಟದ ಫಲವಾಗಿ ಗೋವಾ ಪೋರ್ಚುಗೀಸರ ಆಳ್ವಿಕೆಯಿಂದ ಡಿಸೆಂಬರ್ 19, 1961 ರಂದು ಬಿಡುಗಡೆಯಾಯಿತು. ಹೀಗಾಗಿ ಪ್ರತಿ ವರ್ಷ ಡಿಸೆಂಬರ್‌ 19ರಂದು ಗೋವಾ ವಿಮೋಚನೆ ದಿನವನ್ನು ಆಚರಿಸಲಾಗುತ್ತದೆ.

ಇದನ್ನೂ ಓದಿ: ಸ್ವಾತಂತ್ರ್ಯ ದಿನ: 2 ವರ್ಷ ಅಮೃತ ಮಹೋತ್ಸವ ಆಚರಣೆಗೆ ಮೋದಿ ಕರೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights