ತಾಲಿಬಾನ್ ಆಕ್ರಮಣ: 200ಕ್ಕೂ ಹೆಚ್ಚು ಭಾರತೀಯರು ಕಾಬೂಲ್ ರಾಯಭಾರ ಕಚೇರಿಯಲ್ಲಿ ಸಿಲುಕಿದ್ದಾರೆ!

ವಿದೇಶಿ ಸಚಿವಾಲಯದ ಸಿಬ್ಬಂದಿ ಮತ್ತು ಅರೆಸೇನಾ ಸೈನಿಕರು ಸೇರಿದಂತೆ 200 ಕ್ಕೂ ಹೆಚ್ಚು ಭಾರತೀಯರು ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿರುವ ರಾಯಭಾರಿ ಕಚೇರಿಯಲ್ಲಿದ್ದಾರೆ. ಅವರನ್ನು ಕಾಬೂಲ್‌ನಿಂದ ಸ್ಥಳಾಂತರಿಸಬೇಕಿದೆ ಎಂದು ಮೂಲಗಳು ತಿಳಿಸಿವೆ.

ಅಸ್ತವ್ಯಸ್ತವಾಗಿರುವ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಭಾರತೀಯ ವಿಮಾನವನ್ನು ನಿಲ್ಲಿಸಲಾಗಿದೆ. ತಾಲಿಬಾನ್ ನಗರದಲ್ಲಿ ಕರ್ಫ್ಯೂ ಜಾರಿ ಮಾಡಿದೆ. ಭಾರತೀಯ ಮಿಷನ್ ಕಾಂಪೌಂಡ್‌ನಿಂದ ಸಿಬ್ಬಂದಿಯನ್ನು ವಿಮಾನ ನಿಲ್ದಾಣಕ್ಕೆ ಹೇಗೆ ಸುರಕ್ಷಿತವಾಗಿ ಕರೆತರುವುದು ಎಂಬುದು ದೊಡ್ಡ ಸವಾಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕಾಬೂಲ್‌ನಲ್ಲಿ ಸಿಲುಕಿರುವ ಭಾರತೀಯರಲ್ಲಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಅಥವಾ ಐಟಿಬಿಪಿಯ ಸುಮಾರು 100 ಸಿಬ್ಬಂದಿಗಳು ಸೇರಿದ್ದಾರೆ. ಅವರು ಅಫ್ಘಾನಿಸ್ತಾನದಲ್ಲಿ ಭಾರತೀಯ ಮಿಷನ್ ಅನ್ನು ರಕ್ಷಿಸುವ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ: ತಾಲಿಬಾನ್ ಭಯೋತ್ಪಾದನೆ: ಲೈಂಗಿಕ ಗುಲಾಮಗಿರಿಯ ಅಪಾಯದಲ್ಲಿ ಆಫ್ಘಾನ್ ಮಹಿಳೆಯರು?

ಕಾಬೂಲ್‌ ಮೇಲೆ ತಾಲಿಬಾನ್‌ಗಳು ನಿಯಂತ್ರಣ ಸಾಧಿಸಿದ ನಂತರ, ಅಫ್ಘಾನಿಸ್ಥಾನ ಉದ್ವಿಗ್ನ ಸ್ಥಿತಿಯಲ್ಲಿದೆ. ಈಗಾಗಲೇ, ಆಫ್ಘಾನ್‌ ಅಧ್ಯಕ್ಷ  ಅಶ್ರಫ್ ಘನಿ ದೇಶ ತೊರೆತಿದ್ದಾರೆ. ಸಾವಿರಾರು ಹತಾಶ ಜನರು ದೇಶದಿಂದ ಹೊರಬರಲು ಹಾತೊರೆಯುತ್ತಿದ್ದಾರೆ.

ಕಳೆದ ಮೂರು-ನಾಲ್ಕು ದಿನಗಳಲ್ಲಿ ಆಫ್ಘಾನ್‌ ಪರಿಸ್ಥಿತಿ ವೇಗವಾಗಿ ಬದಲಾಗುತ್ತಿರುವಾಗ ಭಾರತೀಯ ಮಿಷನ್ ಸಿಬ್ಬಂದಿಯನ್ನು ಏಕೆ ಸ್ಥಳಾಂತರಿಸಲಿಲ್ಲ ಎಂಬ ಪ್ರಶ್ನೆಗಳನ್ನು ಎತ್ತಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಕ್ಯಾಬಿನೆಟ್ ಕಾರ್ಯದರ್ಶಿ ವಿದೇಶಾಂಗ ಸಚಿವಾಲಯದ ಅಧಿಕಾರಿಗಳನ್ನು ಭೇಟಿ ಮಾಡಿ ಸ್ಥಳಾಂತರಿಸುವ ಯೋಜನೆಯನ್ನು ರೂಪಿಸಿದ್ದಾರೆ. ಭಾರತೀಯರನ್ನು ಮರಳಿ ತರಲು ಪ್ರಯತ್ನಿಸಲಾಗುತ್ತಿದೆ ಎಂದು ಭಾರತ ಸರ್ಕಾರ ಹೇಳಿದೆ.

ಇದನ್ನೂ ಓದಿ: ಮಲೇಷ್ಯಾ ಸರ್ಕಾರ ಪತನ; ಪ್ರಧಾನಿ ಮುಹ್ಯಿದ್ದೀನ್ ಯಾಸಿನ್ ರಾಜೀನಾಮೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights