ತಾಲಿಬಾನಿ ಪರ ಕಿಡಿಗೇಡಿ ಕಾಮೆಂಟ್ : ‘ಐ ಲವ್ ಯೂ ತಾಲಿಬಾನ್’ ಎಂದವನ ಬಂಧನಕ್ಕೆ ಆಗ್ರಹ!

ಆಫ್ಘನ್ನರ ನೆಮ್ಮದಿ ಹಾಳು ಮಾಡಿ ಪೈಶಾಚಿಕ ಕೃತ್ಯ ಎಸೆಯುತ್ತಿರುವ ತಾಲಿಬಾನಿಗಳ ಪರ ಕಿಡಿಗೇಡಿಯೊಬ್ಬ ಕಾಮೆಂಟ್ ಮಾಡಿದ್ದಾನೆ. ವಿವಾದಾತ್ಮಕ ಕಾಮೆಂಟ್ ಮಾಡಿದ ಈತನನ್ನು ಬಂಧಿಸಬೇಕು ಎಂದು ಆಗ್ರಹಿಸಲಾಗುತ್ತಿದೆ.

ಹೌದು.. ಬಾಗಲಕೋಟೆಯ ಜಮಖಂಡಿ ಮೂಲದ ಆಸೀಫ್ ಎಂಬಾತ ವಿವಾದಾತ್ಮಕ ಕಾಮೆಂಟ್ ಮಾಡಿದ್ದಾನೆ. ಕಾಬೂಲ್ ನ ವೀಡಿಯೋಕ್ಕೆ ‘ಐ ಲವ್ ಯೂ ತಾಲಿಬಾನ್’ ಎಂದು ಕಾಮೆಂಟ್ ಮಾಡಿದ ಆಸೀಫ್ ನೆಟ್ಟಿಗರ ಕೆಂಗಣ್ಣಿಗೆ ಗುರುಯಾಗಿದ್ದಾನೆ.

ತಾಲಿಬಾನ್ ರಾಕ್ಷಸರ ಕೈಯಿಂದ ತಪ್ಪಿಸಿಕೊಳ್ಳಲು ಆಫ್ಘನ್ ಜನರ ಆಕ್ರಂದನ ಈತನಿಗೆ ಕೇಳಿಸಿಲ್ಲ. ತಾಲಿಬಾನ್ ಗುಂಡಿನ ಸದ್ದು, ರಣಕೇಕೆ, ನರಕಯಾತನೆ ಈತನಿಗೆ ಮೆಚ್ಚುಗೆಯಾಗಿದೆ. ಅಲ್ಲಿನ ಜನ ಪ್ರಾಣ ಉಳಿಸಿಕೊಳ್ಳು ಹರಸಾಹಸ ಪಡುತ್ತಿದ್ದಾರೆ. ಜನರನ್ನು ರಕ್ಷಿಸಲಾಗದೇ ಯುಎಸ್ ಸೈನ್ಯ ಅಸಾಹಯಕವಾಗಿ ಕುಳಿತಿದೆ. ಆಫ್ಘನ್ ನಲ್ಲಿ ನರಕವನ್ನೇ ಸೃಷ್ಟಿ ಮಾಡಿದ ತಾಲಿಬಾನಿಗಳ ಪರ ಕಾಮೆಂಟ್ ಮಾಡಿದವನ ವಿರುದ್ಧ ಜನ ಕೆರಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights