ಡ್ರಗ್ಸ್ ಕೇಸ್ : ವಚನ್ ಚಿನ್ನಪ್ಪ ಡಿಜೆ, ಮಾಡೆಲ್ ಸೋನಿಯಾ ಅಗರ್ವಾಲ್ ಪೊಲೀಸ್ ವಶ..!
ಸ್ಯಾಂಟಲ್ ವುಡ್ ಡ್ರಗ್ಸ್ ಕೇಸ್ ಗೆ ಸಂಬಂಧಿಸಿದಂತೆ ಇಂದು ಬೆಳ್ಳಂಬೆಳಿಗ್ಗೆ ಹಠಾತ್ ದಾಳಿಯಿಂದ ಸೆಲೆಬ್ರಿಟಿಗಳ ಮನೆಯಲ್ಲಿ ಗಾಂಜಾ ಪತ್ತೆಯಾಗಿದೆ. ಸೆಲೆಬ್ರಿಟಿಗಳ ಮನೆ ಮೇಲೆ ದಾಳಿ ವೇಳೆ ಸಿಕ್ಕಿಬಿದ್ದ ಗಾಂಜಾವನ್ನು ವಶಪಡಿಸಿಕೊಂಡ ಪೊಲೀಸರು ಮಾಡೆಲ್ ಸೋನಿಯಾ ಅಗರ್ವಾಲ್ , ಡಿಜೆ ವಚನ್ ಚಿನ್ನಪ್ಪ ಮತ್ತು ಉದ್ಯಮಿ ಭರತ್ ನನ್ನು ಬಂಧಿಸಿದ್ದಾರೆ.
ಬೆಂಗಳೂರಿನ ಗೋವಿಂದಪುರ ಠಾಣೆ ಪೊಲೀಸರು ಕೆ ಜಿ ಹಳ್ಳಿ ಪೊಲೀಸರ ನೆರವಿನೊಂದಿಗೆ ಈ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಕರೆದೊಯ್ದಿದ್ದಾರೆ. ಇಂದು ಬೆಳಗ್ಗೆಯೇ ಹಠಾತ್ ದಾಳಿ ನಡೆಸಿದ ವೇಳೆ ಡಿಜೆ ವಚನ್ ಮನೆಯಲ್ಲಿ 50 ಗ್ರಾಂ ಮಾದಕ ವಸ್ತು, ರಾಜಾಜಿನಗರದ ಸೋನಿಯಾ ಅಗರ್ವಾಲ್ ನಿವಾಸದಲ್ಲಿ 40 ಗ್ರಾಂ ಗಾಂಜಾ ಪತ್ತೆಯಾಗಿತ್ತು.
ಪೊಲೀಸ್ ದಾಳಿ ಬಳಿಕ ತಲೆ ಮರೆಸಿಕೊಂಡಿದ್ದ ಈಕೆಯನ್ನು ವಶಕ್ಕೆ ಪಡೆಯಲು ಪೊಲಲೀಸರು ಐಟಿಸಿ ಗಾರ್ಡೇನಿಯಾ ಹೋಟೆಲ್ ಗೆ ತೆರಳಿದ್ದರು. ಈ ವೇಳೆ ಪುರುಷರ ವಾಶ್ ರೂಂ ನಲ್ಲಿ ಅಡಗಿ ಕುಳಿತಿದ್ದ ಸೋನಿಯಾ ಹೈಡ್ರಾಮವೇ ಆಡಿದ್ದಾರೆ. ಮಾಧ್ಯಮದಲ್ಲಿ ಮುಖ ಕಂಡರೆ ಮರೆಯಾದೆ ಹೋಗುವುದಾಗಿ ಹೇಳಿದ ಸೋನಿಯಾ ವಾಶ್ ರೂಂ ನಲ್ಲಿ ಅಡಗಿ ಕುಳಿತಿದ್ದರು. ಮಧ್ಯಾಹ್ನ ಹೋಟೆಲಿಗೆ ಹೋಗಿ ಆಕೆಯನ್ನು ವಶಕ್ಕೆ ಪಡೆದಿದ್ದಾರೆ.
ದಾಳಿಯ ಸಮಯದಲ್ಲಿ ಮನೆಯಲ್ಲಿ ಇಲ್ಲದ ಸೋನಿಯಾ ರಾತ್ರಿ ಪಾರ್ಟಿ ಮಾಡಿ ಮನೆಗೆ ಬಂದಿರಲಿಲ್ಲ. ಪೊಲೀಸರ ಕರೆಯನ್ನೂ ಸ್ವೀಕರಿಸಿರಲಿಲ್ಲ. ಸೋನಿಯಾ ತಂದೆಯಿಂದ ಪೊಲೀಸರು ಕರೆ ಮಾಡಿಸಿದರೆ ಮಧ್ಯಾಹ್ನ ಬರುವುದಾಗಿ ಹೇಳಿಕೊಂಡಿದ್ದಳು. ಈಕೆ ಬಾರದೇ ಇದ್ದಾಗ ತಂದೆಯಿಂದ ಕೀ ತರೆಸಿ ಮನೆಯನ್ನು ಜಾಲಾಡಿಡಿದ್ದಾರೆ. ಈ ವೇಳೆ 40 ಗ್ರಾಂ ಗಾಂಜಾ ಪತ್ತೆಯಾಗಿದೆ.
ಎಲ್ಲಾ ಪಾರ್ಟಿಗಳಲ್ಲಿ ಸೋನಿಯಾ ಮುಖಾಂತರ ಸೆಲೆಬ್ರಿಟಿಗಳು ಎಂಟ್ರಿ ಕೊಡುತ್ತಿದ್ದರು. ಸೋನಿಯಾಗೆ ಹಲವಾರು ಜನರ ಸಂಪರ್ಕವೂ ಇತ್ತು.ಈಗಾಗಲೇ ಡ್ರಗ್ಸ್ ಪೆಡ್ಲರ್ ಥಾಮಸ್ ಜೊತೆಗೆ ಈಕೆ ನಿರಂತರವಾಗಿ ಸಂಪರ್ಕದಲ್ಲಿದ್ದಳು ಎನ್ನಲಾಗುತ್ತಿದೆ.ಥಾಮಸ್ ನಿಂದ ಸೋನಿಯಾ ಸೆಲೆಬ್ರಿಟಿಗಳಿಗೆ ದೊಡ್ಡ ದೊಡ್ಡ ರಾಜಕಾರಣಿಗಳ ಮಕ್ಕಳಿಗೆ ಗಾಂಜಾ ಸೇಲ್ ಮಾಡ್ತಾಯಿದ್ಲು ಎನ್ನುವ ಅನುಮಾನ ವ್ಯಕ್ತವಾಗಿದೆ.