ಬಿಗ್ ಬಾಸ್ ಸೀಸನ್ 13ರ ವಿಜೇತ ಸಿದ್ಧಾರ್ಥ್ ಶುಕ್ಲಾ ಇನ್ನಿಲ್ಲ…!

ಬಿಗ್ ಬಾಸ್ ಸೀಸನ್ 13ರ ವಿಜೇತ ಸಿದ್ಧಾರ್ಥ್ ಶುಕ್ಲಾ ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ಧಾರೆ.

ನಟ ಹಾಗೂ ಮಾಡೆಲ್ ಸಿದ್ಧಾರ್ಥ್ ಶುಕ್ಲಾ(40) ಇಂದು ಬೆಳಿಗ್ಗೆ ಹೃದಯಾಘಾತದಿಂದ ಮುಂಬೈನ ಕೂಪರ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಬಾಲಿಕಾ ವಧು ಕಾರ್ಯಕ್ರಮದ ಪಾತ್ರದಿಂದ ಪ್ರಸಿದ್ಧರಾದ ಸಿದ್ಧಾರ್ಥ್ ಶುಕ್ಲಾ ರಿಯಾಲಿಟಿ ಶೋ ಬಿಗ್ ಬಾಸ್ ನ 13 ನೇ ಸೀಸನ್ ವಿನ್ನರ್ ಆಗಿದ್ದಾರೆ. ಸಿದ್ಧಾರ್ಥ್ 2008 ರಲ್ಲಿ ಬಾಬುಲ್ ಕಾ ಆಂಗನ್ ಚೂಟಿ ನಾ ಕಾರ್ಯಕ್ರಮದ ನಾಯಕನಾಗಿ ಪಾದಾರ್ಪಣೆ ಮಾಡಿದರು. ನಂತರ ಲವ್ ಯು ಜಿಂದಗಿ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ದಿವಂಗತ ನಟಿ ಪ್ರತ್ಯೂಷಾ ಬ್ಯಾನರ್ಜಿ ಎದುರು ನಟಿಸಿದ ಬಾಲಿಕಾ ವಧು, ಸಿದ್ಧಾರ್ಥ್ ಶುಕ್ಲಾರನ್ನು ತಾರೆಯನ್ನಾಗಿಸಿದರು.

ಬಿಗ್ ಬಾಸ್ 13 ಜೊತೆಗೆ ಸಿದ್ಧಾರ್ಥ್ ಶುಕ್ಲಾ ಅವರು ಕಹ್ಟ್ರಾನ್ ಕೆ ಖಿಲಾಡಿ 7 ರಲ್ಲೂ ವಿನ್ನರ್ ಆಗಿದ್ದಾರೆ. ಮಾತ್ರವಲ್ಲದೇ ಸಿದ್ಧಾರ್ಥ್ ಸವಧಾನ್ ಇಂಡಿಯಾ ಮತ್ತು ಇಂಡಿಯಾಸ್ ಗಾಟ್ ಟ್ಯಾಲೆಂಟ್ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದರು.

ಸಿದ್ಧಾರ್ಥ್ ಶುಕ್ಲಾ ಆಲಿಯಾ ಭಟ್-ವರುಣ್ ಧವನ್ ನಟಿಸಿರುವ ಹಂಪ್ಟಿ ಶರ್ಮಾ ಕಿ ದುಲ್ಹಾನಿಯಾ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿದ್ಧಾರ್ಥ್ ತಾಯಿ ಮತ್ತು ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights