ಮೋದಿ ಸರ್ಕಾರ ನಗದೀಕರಣ ಹೆಸರಿನಲ್ಲಿ ಸರ್ಕಾರಿ ಸ್ವತ್ತುಗಳನ್ನು ಮಾರುತ್ತಿದೆ: ಪಿ. ಚಿದಂಬರಂ

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಗದೀಕರಣ ನೀತಿಯ ಹೆಸರಿನಲ್ಲಿ ಸರ್ಕಾರಿ ಆಸ್ತಿಯನ್ನು ಮಾರಾಟ ಮಾಡುತ್ತಿದೆ ಎಂದು ಕಾಂಗ್ರೆಸ್‌ ನಾಯಕ ಪಿ. ಚಿದಂಬರಂ ಕಿಡಿ ಕಾರಿದ್ದಾರೆ.

ಕೇಂದ್ರ ಸರ್ಕಾರವು ಪೈಪ್‌ಲೈನ್ ಯೋಜನೆಯನ್ನು ಜಾರಿಗೊಳಿಸುತ್ತಿದೆ. ಈ ಮೂಲಕ ಕಳೆದ 70 ವರ್ಷಗಳಲ್ಲಿ ನಿರ್ಮಿಸಲಾಗಿರುವ ಎಲ್ಲಾ ಸರ್ಕಾರಿ ಸಂಸ್ಥೆಗಳು, ಆಸ್ತಿಗಳನ್ನು ಕೆಲವರ ಕೈಗೆ ಒತ್ತೆ ಇಡಲು ಮುಂದಾಗಿದೆ. ಈ ಅಪಾಯಗಳ ಬಗ್ಗೆ ಜನರು ತಿಳಿದುಕೊಂಡು ಎಚ್ಚೆತ್ತುಕೊಳ್ಳಬೇಕು. ಅದರ ವಿರುದ್ಧ ಪ್ರತಿಭಟಿಸಬೇಕು” ಎಂದು ಅವರು ಹೇಳಿದ್ದಾರೆ.

“ಅರ್ಥಶಾಸ್ತ್ರದಲ್ಲಿ ಸ್ವತ್ತು ಬೇರ್ಪಡೆ ಎಂಬ ಪರಿಕಲ್ಪನೆ ಇದೆ. ಅದೇ ಇಲ್ಲಿ ನಡೆಯುತ್ತಿದೆ. ಈ ನೀತಿಯ ಬಗ್ಗೆ ಯಾವುದೇ ಸಮಾಲೋಚನೆ ನಡೆಸಲಾಗಿಲ್ಲ. ಸಂಸತ್ತಿನಲ್ಲಿ ಯಾವುದೇ ಚರ್ಚೆಯೂ ನಡೆಯಲಿಲ್ಲ. ಪ್ರಧಾನಿ ನರೇಂದ್ರ ಮೋದಿಯಾಗಲೀ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆಗಲೀ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ತಿಂಗಳು ಕೇಂದ್ರವು ಅಂದಾಜು 6 ಲಕ್ಷ ಕೋಟಿ ರೂ. ಮೌಲ್ಯದ ನಾಲ್ಕು ವರ್ಷಗಳ ರಾಷ್ಟ್ರೀಯ ಹಣಗಳಿಕೆ (ನಗದೀಕರಣ)ಯ ಪೈಪ್‌ಲೈನ್ (ಎನ್ ಎಂಪಿ) ಅನ್ನು ಬಿಡುಗಡೆ ಮಾಡಿದೆ.

ಇದನ್ನೂ ಓದಿ: ದೆಹಲಿ ಗಲಬೆ: ಒಂದೇ ಘಟನೆಗೆ ಐದು ಎಫ್‌ಐಆರ್‌; ನಾಲ್ಕು FIR ರದ್ದುಗೊಳಿಸಿದ ಹೈಕೋರ್ಟ್‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights