ವಿಲಕ್ಷಣ ಪ್ರಕರಣ : ಹುಡುಗಿಯ ಹೊಟ್ಟೆಯಲ್ಲಿ 2 ಕೆಜಿ ಕೂದಲು ಪತ್ತೆ..!

ವೈದ್ಯಲೋಕವನ್ನೇ ಬೆಚ್ಚಿಬೀಳಿಸುವಂತೆ ಹುಡುಗಿಯ ಹೊಟ್ಟೆಯಲ್ಲಿ 2 ಕೆಜಿ ಕೂದಲು ಪತ್ತೆಯಾದ ವಿಲಕ್ಷಣ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಲಕ್ನೋದ ಬಲರಾಂಪುರ್ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ 17 ವರ್ಷದ ಹುಡುಗಿಯ ಹೊಟ್ಟೆಯಿಂದ 2 ಕೆಜಿ ತೂಕದ ಕೂದಲ ಗಡ್ಡೆಯನ್ನು ತೆಗೆದಿದ್ದಾರೆ. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಹುಡುಗಿ ಸುಮಾರು 10 ದಿನಗಳ ಹಿಂದೆ ತೀವ್ರ ಹೊಟ್ಟೆ ನೋವು ಮತ್ತು ವಾಂತಿಯಿಂದ ದುರ್ಬಲವಾಗಿದ್ದಳು. ಜೊತೆಗೆ ಆಕೆ ಕೂದಲು ಉದುರುವುದನ್ನು ಗಮನಿಸಿದ ಕುಟುಂಬಸ್ಥರು ಆಕೆಯನ್ನು ಬಲವಂತವಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಅಲ್ಟ್ರಾಸೌಂಡ್ ಪರೀಕ್ಷೆಯ ಸಮಯದಲ್ಲಿ ಹುಡುಗಿಯ ಹೊಟ್ಟೆಯಲ್ಲಿ ಗಡ್ಡೆ ಕಾಣಿಸಿಕೊಂಡು ಬಲರಾಂಪುರ ಆಸ್ಪತ್ರೆಯ ಶಸ್ತ್ರಚಿಕಿತ್ಸೆ ವಿಭಾಗದ ಡಾ.ಎಸ್.ಆರ್. ಸಮ್ದರ್ ಆಶ್ಚರ್ಯಚಕಿತರಾಗಿದ್ದಾರೆ. ಅನುಮಾನ ಬಂದು ವೈದ್ಯರು CT ಸ್ಕ್ಯಾನ್ ಮಾಡಲು ನಿರ್ಧರಿಸಿದರು. ಮತ್ತೆ ದೊಡ್ಡ ಗಡ್ಡೆ ಇರುವುದು ದೃಢಪಟ್ಟಿದೆ. ಬಳಿಕ ಹುಡುಗಿಗೆ ಎಂಡೊಸ್ಕೋಪ್ ಮಾಡಲಾಗಿದೆ. ಈ ವೇಳೆ ಸುಮಾರು ಎರಡು ಕಿಲೋ ತೂಕದ ಕೂದಲ ಗಡ್ಡೆ ಕಾಣಿಸಿದೆ. ಹೆಣ್ಣು ಮಗು ಹುಟ್ಟಿದಾಗಿನಿಂದ ಮಾನಸಿಕ ಅಸ್ವಸ್ಥತೆಯಾಗಿದ್ದು ಕಳೆದ ಎರಡು ವರ್ಷಗಳಿಂದಲೂ ಕೂದಲು ತಿನ್ನುವುದು ಬೆಳಕಿಗೆ ಬಂದಿದೆ. ಕೂದಲು ತಿನ್ನುವುದರಿಂದ ಜೀರ್ಣಾಂಗವ್ಯವಸ್ಥೆ ಹಾಳಾಗಿ ವಾಂತಿ, ಬೇದಿಗೆ ಕಾರಣವಾಗಿತ್ತು.

ಸುಮಾರು 1.5 ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆ ಮಾಡಿ ಕೂದಲ ಗೆಡ್ಡೆಯನ್ನು ವೈದ್ಯರು ಹೊರತೆಗೆದಿದ್ದಾರೆ. ಹುಡುಗಿ ಈಗ ಹೊಟ್ಟೆ ನೋವಿನ ಯಾವುದೇ ದೂರುಗಳಿಲ್ಲದೆ ಚೇತರಿಸಿಕೊಳ್ಳುತ್ತಿದ್ದಾಳೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights