ಕಾಶ್ಮೀರ ಮುಸ್ಲಿಮರ ಪರ ಧ್ವನಿ ಎತ್ತುವ ಹಕ್ಕು ನಮಗಿದೆ: ತಾಲಿಬಾನ್ ವಕ್ತಾರ

ಆಫ್ಘಾನಿಸ್ಥಾನವನ್ನು ವಶಪಡಿಸಿಕೊಂಡ ನಂತರ ತಾಲಿಬಾನ್‌ಗಳ ಚಟುವಟಿಕೆಗಳು ಹೆಚ್ಚುತ್ತಿವೆ. ಈ ನಡುವೆ, ಕಾಶ್ಮೀರ ಸೇರಿದಂತೆ ಎಲ್ಲಿಯಾದರೂ ಮುಸ್ಲಿಮರಿಗಾಗಿ ಧ್ವನಿ ಎತ್ತುವ ಹಕ್ಕು ತನಗಿದೆ ಎಂದು ತಾಲಿಬಾನ್ ಗುಂಪು ಹೇಳಿದೆಯಲ್ಲದೆ, ಯಾವುದೇ ದೇಶದ ವಿರುದ್ಧ ಶಸ್ತ್ರಾಸ್ತ್ರಗಳನ್ನು ಬಳಸುವ ನೀತಿಯನ್ನು ನಮ್ಮ ಗುಂಪು ಹೊಂದಿಲ್ಲ ಎಂದು ಹೇಳಿಕೊಂಡಿದೆ.

ಬಿಬಿಸಿ ಉರ್ದುಗೆ ನೀಡಿರುವ ಸಂದರ್ಶನದಲ್ಲಿ ತಾಲಿಬಾನ್ ವಕ್ತಾರ ಸುಹೇಲ್ ಶಾಹೀನ್, “ಮುಸ್ಲಿಮರಾಗಿರುವ ನಮಗೆ ಕಾಶ್ಮೀರ, ಭಾರತ ಮತ್ತು ಯಾವುದೇ ಇತರ ದೇಶಗಳಲ್ಲಿ ಮುಸ್ಲಿಮರಿಗಾಗಿ ಧ್ವನಿ ಎತ್ತುವ ಹಕ್ಕು ಇದೆ” ಎಂದಿದ್ದಾರೆ.

“ಮುಸ್ಲಿಮರು ನಿಮ್ಮ ಸ್ವಂತ ಜನರು, ನಿಮ್ಮ ಸ್ವಂತ ಪ್ರಜೆಗಳು ಎಂದು ಹೇಳುತ್ತೇವೆ. ನಿಮ್ಮ ಕಾನೂನುಗಳ ಅಡಿಯಲ್ಲಿ ಅವರಿಗೆ ಸಮಾನ ಹಕ್ಕುಗಳಿವೆ. ಎಂದು ಮುಸ್ಲಿಮರಿಗಾಗಿ ಧ್ವನಿ ಎತ್ತುತ್ತೇವೆ ” ಎಂದು ಹೇಳಿದ್ದಾರೆ.

ಆದರೆ, ಈ ಹಿಂದೆ ಕಾಶ್ಮೀರದ ಬಗ್ಗೆ ಹೇಳಿಕೆ ನೀಡಿದ್ದ ತಾಲಿಬಾನ್, ಕಾಶ್ಮೀರದ ಸಮಸ್ಯೆ ಅವರ ಆಂತರಿಕ ವಿಷಯ ಎಂದಿತ್ತು. ಅಫ್ಘಾನಿಸ್ತಾನದ ಭೂಮಿಯನ್ನು ಯಾವುದೇ ರೀತಿಯ ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸದಂತೆ ನೋಡಿಕೊಳ್ಳುವುದು ಭಾರತದ ಗುರಿಯಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ಅರಿಂದಮ್ ಬಾಗ್ಚಿ ಗುರುವಾರ ಹೇಳಿದ್ದರು.

ಇದನ್ನೂ ಓದಿ: Fact Check: ಆಫ್ಘಾನ್‌ ಮಹಿಳೆಯರನ್ನು ಮಾರಾಟ ಮಾಡುತ್ತಿದೆಯೇ ತಾಲಿಬಾನ್‌?

ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯರ ಸುರಕ್ಷತೆ, ಭದ್ರತೆ ಮತ್ತು ಆರಂಭಿಕ ವಾಪಸಾತಿ ಮತ್ತು ಅಫ್ಘಾನ್ ಪ್ರಜೆಗಳು, ಅದರಲ್ಲೂ ವಿಶೇಷವಾಗಿ ಅಲ್ಪಸಂಖ್ಯಾತ ಸಮುದಾಯಗಳ ಸದಸ್ಯರು ಭಾರತಕ್ಕೆ ಪ್ರಯಾಣಿಸುವ ಬಗ್ಗೆಯೂ ಚರ್ಚೆಗಳು ಕೇಂದ್ರೀಕೃತವಾಗಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿನ ಭದ್ರತಾ ಪರಿಸ್ಥಿತಿಯ ಬಗ್ಗೆ ಆತಂಕ ಹೆಚ್ಚಾಗಿದ್ದು, ಈ ಪ್ರದೇಶದಲ್ಲಿ ಭದ್ರತಾ ನಿಗಾ ಹೆಚ್ಚಿಸುವ ನಿರೀಕ್ಷೆಯಿದೆ.

“ಕಾಶ್ಮೀರದಲ್ಲಿ ಭದ್ರತೆ ಹೆಚ್ಚಿಸಲಾಗುವುದು. ಆದರೆ ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿವೆ ಮತ್ತು ಅಫ್ಘಾನಿಸ್ತಾನದಲ್ಲಿರುವ ಪಾಕಿಸ್ತಾನ ಮೂಲದ ಗುಂಪುಗಳು ಪರಿಸ್ಥಿತಿಯನ್ನು ಬಳಸಿಕೊಳ್ಳುವ ಸಾಮರ್ಥ್ಯ ಕಡಿಮೆ” ಎಂದು ANI ಕಳೆದ ತಿಂಗಳು ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿತ್ತು.

ಇದನ್ನೂ ಓದಿ: ಕಾಬೂಲ್ ನಿಂದ ಪಲಾಯನ ಮಾಡಲು ಅಫ್ಘಾನಿಸ್ತಾನದ ಮಹಿಳೆಯರಿಂದ ಮದುವೆಗೆ ಒತ್ತಾಯ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights