ಕಾಬೂಲ್ ನಿಂದ ಪಲಾಯನ ಮಾಡಲು ಅಫ್ಘಾನಿಸ್ತಾನದ ಮಹಿಳೆಯರಿಂದ ಮದುವೆಗೆ ಒತ್ತಾಯ!

ಕಾಬೂಲ್ ವಿಮಾನ ನಿಲ್ದಾಣದ ಹೊರಗೆ ತಮ್ಮನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿರುವ ಆಫ್ಘಾನಿಸ್ತಾನದ ಮಹಿಳೆಯರು ತಮ್ಮನ್ನು ಸ್ಥಳಾಂತರಿಸಲು ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದಾರೆ.

ದೇಶವನ್ನು ತೊರೆಯಲು ಆಫ್ಘನ್ನರ ಹತಾಶೆಯ ಇನ್ನೊಂದು ಕಥೆ ಇದು. ಆಫ್ಘಾನಿಸ್ತಾನದ ಅನೇಕ ಮಹಿಳೆಯರು ಕಾಬೂಲ್ ವಿಮಾನ ನಿಲ್ದಾಣದ ಹೊರಗೆ ತಮ್ಮನ್ನು ಮದುವೆಯಾಗಲು ಒತ್ತಾಯಿಸುತ್ತಿದ್ದಾರೆನ್ನುವ ಸಿಎನ್‌ಎನ್‌ನ ವರದಿ ಮನುಕುಲವನ್ನೇ ಬೆಚ್ಚಿ ಬೀಳಿಸಿದೆ. ಇದು ತಾಲಿಬಾನಿಗಳ ಕ್ರೂರತೆಯ ಭಯದ ಮತ್ತೊಂದು ಘಟನೆಯಾಗಿದೆ. ಸಿಎನ್‌ಎನ್‌ನ ವರದಿಯು ಮಹಿಳೆಯರ ಆತಂಕಕಾರಿ ನಿರ್ಧಾರದ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಯುಎಇಯ ಸ್ಥಳಾಂತರಿಸುವ ಕೇಂದ್ರವೊಂದರಲ್ಲಿ ಈ ಅಫ್ಘಾನಿಸ್ತಾನ ಮಹಿಳೆಯರ ಕೆಲವು ಕುಟುಂಬಗಳು ತಾಲಿಬಾನ್‌ನಿಂದ ತಪ್ಪಿಸಿಕೊಳ್ಳುವ ಸಲುವಾಗಿ ತಮ್ಮ ಹೆಣ್ಣು ಮಕ್ಕಳನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿವೆ.

ಕುಟುಂಬಗಳು ತಮ್ಮ ಮನೆಯ ಹೆಣ್ಣುಮಕ್ಕಳನ್ನು ಮದುವೆಯಾಗುವಂತೆ ಸ್ಥಳಾಂತರಕ್ಕೆ ಅರ್ಹರಾದ ಪುರಷರನ್ನು ಬೇಡಿಕೊಳ್ಳುತ್ತಿವೆ. ಸ್ಥಳಾಂತರಕ್ಕೆ ಅರ್ಹರಾದ ಪುರುಷರೊಂದಿಗೆ ತಮ್ಮ ಹೆಣ್ಣು ಮಕ್ಕಳ ವಿವಾಹವಾದರೆ ಅಫ್ಘಾನಿಸ್ತಾನದಿಂದ ಪಲಾಯನ ಮಾಡಲು ಸಹಾಯವಾಗುತ್ತದೆ ಎನ್ನುವ ಉದ್ದೇಶದಿಂದ ಕುಟುಂಬಗಳು ಕಾಬೂಲ್ ವಿಮಾನ ನಿಲ್ದಾಣದ ಹೊರಗೆ ವಿವಾಹಕ್ಕಾಗಿ ಒತ್ತಾಹಿಸುತ್ತಿದ್ದಾರೆನ್ನಲಾಗುತ್ತಿದೆ.

ತಾಲಿಬಾನ್‌ಗಳ ಶೋಷಣೆಗೆ ಹೆದರಿ ಅಫ್ಘಾನಿಯರು ತೆಗೆದುಕೊಂಡ ಆಘಾತಕಾರಿ ನಿರ್ಧಾರಗಳಿಂದ ಅಫ್ಘಾನ್ ಮಹಿಳೆಯರು ಮಾನವ ಕಳ್ಳಸಾಗಣೆಗೆ ಬಲಿಯಾಗುವ ಅಪಾಯ ಎದುರಾಗಿದೆ. ಈ ಬಗ್ಗೆ ಯುಎಇಗೆ ಯುಎಸ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಇಂತಹ ಪ್ರಕರಣಗಳನ್ನು ಗುರುತಿಸಲು ಯುಎಸ್ ರಾಜತಾಂತ್ರಿಕರು ಯುಎಇಗೆ ಸಹಾಯ ಮಾಡುವ ನಿರೀಕ್ಷೆಯಿದೆ.

ತಾಲಿಬಾನ್ ಆಫ್ಘಾನ್ ವಶಪಡಿಸಿಕೊಂಡ ನಂತರ ಯುಎಸ್ ಪಡೆಗಳು ಆಗಸ್ಟ್ 30 ರ ರಾತ್ರಿ ಅಫ್ಘಾನಿಸ್ತಾನದಿಂದ ತಮ್ಮ ಅಂತಿಮ ನಿರ್ಗಮನವನ್ನು ಮಾಡಿದವು.

ಯುಎಸ್ ನಿರ್ಗಮನದ ನಂತರ ತಾಲಿಬಾನ್ ವಿಜಯ ಘೋಷಿಸಿದೆ. ಜೊತೆಗೆ ಇದು ಹಿಂದಿನ ತಾಲಿಬಾನ್ ಆಡಳಿತದ ಬಗ್ಗೆ ಮಹಿಳೆಯರಿಗೆ ಮೂಲಭೂತ ಮಾನವ ಹಕ್ಕುಗಳ ಕೊರತೆಯಿರುವ ಘೋರ ನೆನಪನ್ನು ತಂದಿದೆ. ತಾಲಿಬಾನ್ ಪುರುಷ ಕುಟುಂಬ ಸದಸ್ಯರ ಜೊತೆಗಿಲ್ಲದ ಮಹಿಳೆಯರ ಪ್ರಯಾಣವನ್ನು ನಿಷೇಧಿಸಿದೆ. ಮಹಿಳಾ ಹಕ್ಕುಗಳನ್ನು ಕಿತ್ತುಕೊಂಡ ತಾಲಿಬಾನ್ ಆಡಳಿತದಲ್ಲಿ ಇರಲಾಗದೆ ಆಫ್ಘಾನ್ ಮಹಿಳೆಯರು ದೇಶ ತೊರೆಯಲು ಇಂದಿಗೂ ಶತ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights