ಟ್ರಕ್ನಲ್ಲಿ ಹಣವಿಟ್ಟ ವ್ಯಾಪಾರಿ : ತಿಂಗಳಲ್ಲಿ 5 ಲಕ್ಷ ರೂ. ನೋಟುಗಳೆಲ್ಲ ತುಂಡು ತುಂಡು!

ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಬ್ಯಾಂಕಿನ ಬದಲು ಟ್ರಂಕ್ನಲ್ಲಿಟ್ಟ ವ್ಯಾಪಾರಿ ಒಂದು ತಿಂಗಳ ಬಳಿಕ ಆ ನೋಟುಗಳ ಸ್ಥಿತಿ ನೋಡಿ ದಂಗಾಗಿದ್ದಾನೆ. ಯಾಕೆಂದ್ರೆ ಹಣವಿಟ್ಟ ಟ್ರಂಕ್ ಅವನು ಬಯಸಿದಷ್ಟು ಸುರಕ್ಷಿತವಾಗಿರಲಿಲ್ಲ.

ಹೌದು.. ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಮೈಲವರಂ ನಿವಾಸಿ ಬಿಜ್ಲಿ ಜಮಲಯ ಎಂಬ ಉದ್ಯಮಿಯೊಬ್ಬರ 5 ಲಕ್ಷ ರೂ. ಹಣವನ್ನು ಗೆದ್ದಲುಗಳು ತುಂಡಾಗಿಸಿವೆ. ಇದು 500 ಮತ್ತು 200 ನೋಟುಗಳ ಕಟ್ಟುಗಳ ಮೇಲೆ ದೊಡ್ಡ ರಂಧ್ರಗಳನ್ನು ಮಾಡಿದೆ.

ಮನೆ ನಿರ್ಮಿಸಲು ಸಾಕಷ್ಟು ಹಣವನ್ನು ಸಂಗ್ರಹಿಸುವ ಕನಸು ಕಂಡ ಅವರು ಬ್ಯಾಂಕ್ ಅನ್ನು ಬಳಸುವ ಬದಲು ಸುಮಾರು 5 ಲಕ್ಷ ರೂ. ಹಣವನ್ನು ತಮ್ಮ ಟ್ರಂಕ್ ನಲ್ಲಿ ಜೋಡಿಸಿದ್ದರು.

ಬಳಿಕ ಚೂರುಚೂರಾದ ಹಣವನ್ನು ಉದ್ಯಮಿ ರಸ್ತೆಯಲ್ಲಿ ಆಡುತ್ತಿದ್ದ ಸ್ಥಳೀಯ ಮಕ್ಕಳಿಗೆ ವಿತರಿಸಿದರು. ನೆರೆಹೊರೆಯ ಮಕ್ಕಳು ಇಷ್ಟು ದೊಡ್ಡ ಮೊತ್ತದ ನಗದು ಹಣದೊಂದಿಗೆ ತಿರುಗಾಡುತ್ತಿರುವುದನ್ನು ನೋಡಿದಾಗ, ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ತನಿಖೆಯ ನಂತರ ವಿಚಾರ ಬಯಲಾಗಿದೆ.

Spread the love

Leave a Reply

Your email address will not be published. Required fields are marked *