ಪೋಲಿಸ್ ಕಾರ್ ಕಸಿದುಕೊಂಡು ಹಲ್ಲೆ : ಸಿಂಘು ಗಡಿಯಲ್ಲಿ ಪ್ರತಿಭಟನಾಕಾರನ ಬಂಧನ!
ದೆಹಲಿಯ ಸಿಂಘು ಗಡಿ ಪ್ರತಿಭಟನಾ ಸ್ಥಳದಲ್ಲಿ ಪ್ರತಿಭಟನಾಕಾರನೊಬ್ಬ ಪೊಲೀಸ್ ಕಾರನ್ನು ಕಸಿದುಕೊಂಡು ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಮೇಲೆ ಹಲ್ಲೆ ಮಾಡಿದ್ದಕ್ಕಾಗಿ ಬಂಧಿಸಲಾಗಿದೆ. ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ದೆಹಲಿ ಪೊಲೀಸ್ ಮೂಲಗಳು ತಿಳಿಸಿವೆ.
ಸಿಂಧು ಗಡಿ ಪ್ರತಿಭಟನಾ ಸ್ಥಳದಲ್ಲಿ ಪಂಜಾಬ್ ನಿವಾಸಿ ಹರ್ಪ್ರೀತ್ ಸಿಂಗ್ ಆರಂಭದಲ್ಲಿ ಪೊಲೀಸರ ಕಾರನ್ನು ಕಿತ್ತು ಪರಾರಿಯಾಗಿದ್ದಾನೆ. ಸಮೈಪುರ್ ಬದ್ಲಿ ಪೊಲೀಸ್ ಠಾಣೆಯ ಎಸ್‌ಎಚ್‌ಒ ಆಶಿಶ್ ದುಬೆ ಅವರ ತಂಡದೊಂದಿಗೆ ಸಿಂಗ್ ಅವರನ್ನು ಬೆನ್ನಟ್ಟಿ ಮುಕಾರ್ಬಾ ಚೌಕ್‌ನಲ್ಲಿ ಬಂಧಿಸಲಾಗಿದೆ.
ಸಿಂಗ್ ಬೆನ್ನಟ್ಟಿದ್ದ ಆಶಿಶ್ ದುಬೆ ಅವರ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿ ಮತ್ತೆ ಸ್ಕೂಟರ್‌ನಲ್ಲಿ ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸಿದ. ಪೊಲೀಸರು ಅಂತಿಮವಾಗಿ ಸಿಂಗ್ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಸಿಂಗ್‌ನನ್ನು ಬಂಧಿಸಿದ ನಂತರ ಒಂದು ಕಾರ್‌ಜಾಕಿಂಗ್ ಮತ್ತು ಇನ್ನೊಂದು ಕೊಲೆ ಯತ್ನ ಎರಡು ಪ್ರಕರಣಗಳನ್ನು ದಾಖಲಿಸಲಾಗಿದೆ.
ಎಸ್‌ಎಚ್‌ಒ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.