ದಿಶಾ ಬಂಧನ: ನಮ್ಮ ಶಕ್ತಿಯನ್ನು ಮರೆತಿದ್ದೇವೆ; ಈಗಲಾದರೂ ಸದ್ದು ಮಾಡೋಣ: ದಿಶಾ ಬೆಂಬಲಕ್ಕೆ ನಟಿ ರಮ್ಯಾ ಕರೆ!

ಟೂಲ್‌ಕಿಟ್‌ ಪ್ರಕರಣದಲ್ಲಿ ಬಂಧಿತಳಾಗಿರುವ 21 ವರ್ಷದ ಸಾಮಾಜಿಕ ಹೋರಾಟಗಾರ್ತಿ ದಿಶಾ ರವಿ ಅವರ ಬಂಧನವನ್ನು ವಿರೋಧಿಸಿ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ಅವರ ಬಿಡುಗಡೆಗಾಗಿ ಆಗ್ರಹಿಸಿ ಹಲವಾರು ಪ್ರತಿಭಟನೆಗಳು ನಡೆಯುತ್ತಿವೆ. ಈ ನಡುವೆ ದಿಶಾ ಅವರ ಪರವಾಗಿ ದನಿ ಎತ್ತಿರುವ ನಟಿ, ಮಾಜಿ ಸಂಸದೆ ರಮ್ಯಾ ಅವರು ದಿಶಾ ಅವರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಾಕಿದ್ದಾರೆ.

ಬೆಂಗಳೂರಿನ ಯುವತಿ, ಕನ್ನಡತಿ ದಿಶಾ ರವಿ ಅವರು ಯಾವ ತಪ್ಪನ್ನೂ ಮಾಡಿಲ್ಲ, ರೈತರ ಪರ ನಿಲ್ಲುವುದು ಕ್ರೈಂ ಅಲ್ಲ, ನಾವು ಅವಳ ಪರ ನಿಲ್ಲಬೇಕು, ಆಕೆಯನ್ನು ಬಿಡುಗಡೆಗೊಳಿಸಬೇಕು ಎಂದು ರಮ್ಯಾ ಹೇಳಿದ್ದಾರೆ.

ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದಿರುವ ರಮ್ಯಾ, 21 ವರ್ಷದ ಪರಿಸರ ಕಾರ್ಯಕರ್ತೆ ಇಂದು ಜೈಲಿನಲ್ಲಿದ್ದರೆ, ಅದಕ್ಕೆ ನಾವೆಲ್ಲರೂ ಸಾಮೂಹಿಕವಾಗಿ ಜವಾಬ್ದಾರರು. ನಮ್ಮ ದೇಶದಲ್ಲಿ ಇಂತಹ ದಬ್ಬಾಳಿಕೆಗೆ ನಾವು ಬಹಳ ಕಾಲದಿಂದ ಮೂಕ ಪ್ರೇಕ್ಷಕರಾಗಿದ್ದೇವೆ. ನಮ್ಮ ಒಡನಾಡಿಗಳು, ನೆರೆಹೊರೆಯರಿಗಾಗಿ ನಾವು ಕೊನೆಯದಾಗಿ ಮಾತನಾಡಿದ್ದು ಯಾವಾಗ? ನಾವು ಜನರ ಶಕ್ತಿಯನ್ನು ಮರೆತಿದ್ದೇವೆಯೇ? ಈ ದೇಶವು ನಮ್ಮದು ಎಂದು ನಾವು ಮರೆತಿದ್ದೇವೆಯೇ? ನೆನಪಿಡಿ- ಭಾರತವು ಜನರಿಂದ-ಜನರಿಗಾಗಿ-ಜನರಿಗೋಸ್ಕರ ಇದೆ ಎಂದಿದ್ದಾರೆ.

ಆಕೆಗೆ ಭಿನ್ನಾಭಿಪ್ರಾಯ ಇದ್ದ ಕಾರಣಕ್ಕೆ ಅವರನ್ನು ಜೈಲಿಗೆ ಹಾಕಲಾಯಿತು. ಯಾಕೆಂದರೆ ಅವರು ಅನ್ಯಾಯದ ವಿರುದ್ಧ ಧ್ವನಿ ಎತ್ತಿದರು. ನಮಗಾಗಿ ಹೋರಾಡಲು ಆಕೆ ತಮ್ಮ ವಿಲಾಸಿ ಜೀವನದಿಂದ ಹೊರಬಂದರು. ಅವರು ತಮ್ಮ ಕುಟುಂಬ, ಅವರ ವೃತ್ತಿ, ಸ್ನೇಹಿತರು, ಎಲ್ಲವನ್ನೂ ಪಣಕ್ಕಿಟ್ಟಿದ್ದಾರೆ. ಈಗ ನಾವು ಅವರಿಗಾಗಿ ಮಾತನಾಡಬೇಕು. ನಾವು ಅವರ ಪರವಾಗಿದ್ದೇವೆ ಮತ್ತು ನಾವು ಒಗ್ಗಟ್ಟಾಗಿದ್ದೇವೆ ಎಂದು ಅವರಿಗೆ ತೋರಿಸಬೇಕು. ಈಗ ನೀವು ಎಲ್ಲಿದ್ದೀರಿ? ಸ್ವಲ್ಪ ಸದ್ದು ಮಾಡೋಣ. ನಿಮ್ಮ ಧ್ವನಿಯನ್ನು ಹೆಚ್ಚಿಸಿ! ಆಕೆಗಾಗಿ ದನಿಗೂಡಿಸಿ ಎಂದು ರಮ್ಯಾ ಸಾಮಾಜಿಕ ಜಾಲತಾಣಿಗರಲ್ಲಿ ಮನವಿ ಮಾಡಿದ್ದಾರೆ.

ಇದನ್ನೂ ಓದಿದಿಶಾ ರವಿ ಬಿಡುಗಡೆಗೆ ಒತ್ತಾಯ; ಹೆಣ್ಣುಮಕ್ಕಳು ಓದಿ ಅಂತಾರೆ; ಪ್ರಶ್ನಿಸಿದ್ರೆ ಅವರನ್ನೇ ಬಂಧಿಸುತ್ತಾರೆ: ಸಿದ್ದರಾಮಯ್ಯ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights