ಸತತ 9ನೇ ದಿನವೂ ಇಂಧನ‌ ದರ ಏರಿಕೆ; ಶತಕದತ್ತ ಪೆಟ್ರೋಲ್‌ ಬೆಲೆ; ಇಂದಿನ ಬೆಲೆ ಹೀಗಿದೆ!

ಕೇಂದ್ರ ಬಜೆಟ್‌ ಮಂಡನೆಯಾದ ನಂತರ, ಸತತವಾಗಿ 09ನೇ ದಿನವೂ ಪೆಟ್ರೋಲ್‌ ಬೆಲೆ ಏರಿಕೆಯಾಗಿದೆ. ಅಲ್ಲದೆ, ಮಧ್ಯಪ್ರದೇಶದ ರಾಜಧಾನಿ ಭೂಪಾಲ್‌ನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 97.52 ರೂ. ಇದ್ದು ಡೀಸೆಲ್ ಬೆಲೆ 88.15 ರೂ.ಗೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ  ಪೆಟ್ರೋಲ್ ಬೆಲೆ 92.54 ರೂ. ಇದ್ದು, ಡೀಸೆಲ್ ಬೆಲೆ 84.75 ರೂ. ಇದೆ. ಇದೇ ರೀತಿಯಲ್ಲಿ ಬೆಲೆ ಏರಿಕೆ ಮುಂದುವರೆದರೆ ಈ ತಿಂಗಳ ಅಂತ್ಯದ ವೇಳೆಗೆ ಪೆಟ್ರೋಲ್‌ ಬೆಲೆ ಶತಕದ ಗಡಿ ಮುಟ್ಟುವ ಸಾಧ್ಯತೆ ಇದೆ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೂಡ್ ಆಯಿಲ್ ಬೆಲೆ ಭಾರೀ ಕಡಿಮೆ ಇದ್ದರೂ ಸಹ, ಭಾರತದಲ್ಲಿ ಇಂಧನ ಬೆಲೆಯಲ್ಲಿ ಭಾರೀ ಏರಿಕೆಯಾಗುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್‌ ಆಯಿಲ್‌ ಬೆಲೆ 60.60 ರೂಗೆ ದೊರೆಯುತ್ತಿದ್ದರೂ, ವಾಹನದಾರರಿಗೆ ಹೆಚ್ಚಿನ ಬೆಲೆಗೆ ಕೇಂದ್ರ ಸರ್ಕಾರ ಮಾರಾಟ ಮಾಡುತ್ತಿದೆ.

ನಿನ್ನೆ (ಮಂಗಳವಾರ) ಎಲ್‌ಪಿಜಿ ಸಿಲಿಂಡರ್‌ ಬೆಲೆ 50 ರೂ ಏರಿಕೆ ಮಾಡಲಾಗಿದೆ. ಜನವರಿ 1ರಿಂದ ಇಲ್ಲಿಯವರೆಗೆ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯಲ್ಲಿ 6.15 ರೂಪಾಯಿ ಹೆಚ್ಚಾಗಿದೆ. ಅಂತೆಯೇ, ಫೆಬ್ರವರಿ ತಿಂಗಳಲ್ಲಿ 9 ದಿನಗಳಿಂದ ಒಟ್ಟು 3.11 ರೂಪಾಯಿ ಏರಿಕೆಯಾಗಿದೆ. ಇದು ವಾಹನ ಹೊಂದಿರುವವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಹೀಗಿದೆ:

ಭೂಪಾಲ್- ಪೆಟ್ರೋಲ್ 97.52 ರೂ., ಡೀಸೆಲ್ 88.15 ರೂ.

ಮುಂಬೈ- ಪೆಟ್ರೋಲ್ 96.00 ರೂ., ಡೀಸೆಲ್ 86.98 ರೂ.

ಜೈಪುರ – ಪೆಟ್ರೋಲ್ 96.01 ರೂ., ಡೀಸೆಲ್ 88.34 ರೂ.

ಬೆಂಗಳೂರು- ಪೆಟ್ರೋಲ್ 92.54 ರೂ., ಡೀಸೆಲ್ 84.75 ರೂ.

ಪಾಟ್ನಾ- ಪೆಟ್ರೋಲ್ 91.91 ರೂ., ಡೀಸೆಲ್ 85.18 ರೂ.

ಚೆನ್ನೈ- ಪೆಟ್ರೋಲ್ 91.68 ರೂ., ಡೀಸೆಲ್ 85.01 ರೂ.

ಕೋಲ್ಕತ್ತಾ- ಪೆಟ್ರೋಲ್ 90.78 ರೂ., ಡೀಸೆಲ್ 83.54 ರೂ.

ದೆಹಲಿ- ಪೆಟ್ರೋಲ್ 89.54 ರೂ., ಡೀಸೆಲ್ 79.95 ರೂ.

ಲಕ್ನೋ- ಪೆಟ್ರೋಲ್ 88.06 ರೂ., ಡೀಸೆಲ್ 80.33 ರೂ.

ನೋಯ್ಡಾ- ಪೆಟ್ರೋಲ್ 88.13 ರೂ., ಡೀಸೆಲ್ 79.66 ರೂ.

ಗುರುಗಾವ್ – ಪೆಟ್ರೋಲ್ 87.19 ರೂ., ಡೀಸೆಲ್ 78.19 ರೂ.

ರಾಂಚಿ- ಪೆಟ್ರೋಲ್ 87.29 ರೂ., ಡೀಸೆಲ್ 84.54 ರೂ.

ಇದನ್ನೂ ಓದಿ: ಪುದುಚೇರಿಯಲ್ಲೂ ಆಪರೇಷನ್‌ ಕಮಲ; ಕಾಂಗ್ರೆಸ್‌ ಸರ್ಕಾರ ಪತನ ಸಾಧ್ಯತೆ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights