ಪಂಜಾಬ್‌ ಚುನಾವಣೆ: ಕಾಂಗ್ರೆಸ್‌ಗೆ ಭರ್ಜರಿ ಗೆಲುವು: ಭಾರೀ ಮುಖಭಂಗ ಅನುಭವಿಸಿದ BJP!

ಪಂಜಾಬ್‌ನಲ್ಲಿ ಸ್ಥಳೀಯ ಚುನಾವಣೆಗಳ ಫಲಿತಾಂಶ ಇಂದು ಪ್ರಕಟವಾಗುತ್ತಿದೆ. ಕೃಷಿ ಕಾಯ್ದೆಗಳ ವಿರುದ್ಧ ರೈತರು ಹೋರಾಟ ನಡೆಸುತ್ತಿರುವ ಹಿನ್ನೆಲೆಯಲ್ಲಿ ಇಂದಿನ ಪಂಜಾಬ್‌ ಚುನಾವಣಾ ಫಲಿತಾಂಶ ಭಾರೀ ಕುತೂಹಲ ಕೆರಳಿಸಿದೆ. ಈಗಾಗಲೇ ಬಹುಪಾಲು ಫಲಿತಾಂಶ ಹೊರಬಿದಿದ್ದು, ಚುನಾವಣೆಯಲ್ಲಿ ಕಾಂಗ್ರೆಸ್‌ ಭರ್ಜರಿ ಗೆಲುವು ಸಾಧಿಸಿದೆ.

ಚುನಾವಣೆ ನಡೆದ 08 ಮುನ್ಸಿಪಲ್‌ ಕಾರ್ಪೋರೇಷನ್‌ಗಳ ಪೈಕಿ 7 ಮುನ್ಸಿಪಲ್ ಕಾರ್ಪೋರೇಷನ್‌ಗಳ ಮತ ಎಣಿಕೆ ನಡೆದಿದ್ದು, ಅವುಗಳಲ್ಲಿ 6 (ಮೊಗಾ, ಹೋಶಿಯಾರ್‌ಪುರ್, ಕಪುರ್ಥಾಲಾ, ಅಬೋಹರ್, ಪಠಾಣ್‌ಕೋಟ್ ಮತ್ತು ಬಟಿಂಡಾ ಕಾರ್ಪೊರೇಷನ್‌)ಗಳನ್ನು ಕಾಂಗ್ರೆಸ್ ಗೆದ್ದುಕೊಂಡಿದ್ದು ಮತ್ತು ಒಂದು ಮುನ್ಸಿಪಲ್‌ ಕಾರ್ಪೋರೇಷನ್‌ನಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. 53 ವರ್ಷಗಳ ನಂತರ ಬತಿಂಡಾ ಮಹಾನಗರದ ಆಡಳಿತವನ್ನು ಕಾಂಗ್ರೆಸ್ ಗೆದ್ದಿದೆ.

ಇದಲ್ಲದೆ, ರಾಜ್ಯದ 109 ನಗರ ಪಂಚಾಯತ್ ಹಾಗೂ ಮುನ್ಸಿಪಲ್ ಕೌನ್ಸಿಲ್‌ಗಳಿಗೆ ಚುನಾವಣೆ ನಡೆದಿದ್ದು, ಒಟ್ಟು 2252 ವಾರ್ಡ್‌ಗಳ ಮತ ಎಣಿಕೆ ನಡೆಯುತ್ತಿದೆ. ಸಂಜೆಯ ವೇಳಗೆ ಅವುಗಳ ಫಲಿತಾಂಶವೂ ಹೊರ ಬೀಳಲಿದೆ.

ಬತಿಂಡಾ ಲೋಕಸಭಾ ಕ್ಷೇತ್ರವನ್ನು ಶಿರೋಮಣಿ ಅಕಾಲಿ ದಳದ ಹರ್ಸಿಮ್ರತ್ ಬಾದಲ್ ಪ್ರತಿನಿಧಿಸುತ್ತಿದ್ದು ಅವರು ಬಿಜೆಪಿಯ ಜೊತೆ ಮೈತ್ರಿ ಮಾಡಿಕೊಂಡಿದ್ದರು. ಆದರೆ ಕೇಂದ್ರದ ಮೂರು ಹೊಸ ಕೃಷಿ ಕಾನೂನನ್ನು ವಿರೋಧಿಸಿ ಮೈತ್ರಿಯನ್ನು ತೊರೆದಿದ್ದರು.

ಒಟ್ಟು 9,222 ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ರೈತ ಹೋರಾಟದ ಹಿನ್ನೆಲೆಯಲ್ಲಿ ಬಿಜೆಪಿಯ ಹೆಸರಿನಲ್ಲಿ ಸ್ಪರ್ಧಿಸಲು ಹಿಂದೇಟು ಹಾಕಿದ್ದ ಅಭ್ಯರ್ಥಿಗಳು ಸ್ವತಂತ್ರವಾಗಿ ಸ್ಪರ್ಧಿಸಿದ್ದರು. ಅದರೂ, ಕಾಂಗ್ರೆಸ್‌ ಹೆಚ್ಚು ಮುನ್ಸಿಪಲ್‌ ಕಾರ್ಪೋರೇಷನ್‌ಗಳನ್ನು ಗೆದ್ದುಕೊಂಡಿದೆ.

ಇದನ್ನೂ ಓದಿ: ನೇಪಾಳ-ಶ್ರೀಲಂಕಾದಲ್ಲಿಯೂ BJP ಸರ್ಕಾರ ರಚಿಸಲು ಅಮಿತ್‌ ಶಾ ಯೋಜಿಸಿದ್ದಾರೆ: ತ್ರಿಪುರ ಸಿಎಂ

ಇದನ್ನೂ ಓದಿ: ಆಂಧ್ರಪ್ರದೇಶ 1st Phase ಚುನಾವಣೆ: YSR ಕಾಂಗ್ರೆಸ್‌ಗೆ ಭರ್ಜರಿ ಮುನ್ನಡೆ; BJPಗೆ ಮುಖಭಂಗ!

ಇದನ್ನೂ ಓದಿ: ರೈತ ಹೋರಾಟದ ನಡುವೆ ಪಂಜಾಬ್‌ ಚುನಾವಣೆ: BJPಗೆ ಸೋಲೆಂದು ಕೇಸರಿ ಮುಖಂಡರ ಸ್ವತಂತ್ರ ಸ್ಪರ್ಧೆ!

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights