Fact Check: ಆಫ್ಘಾನ್‌ ಮಹಿಳೆಯರನ್ನು ಮಾರಾಟ ಮಾಡುತ್ತಿದೆಯೇ ತಾಲಿಬಾನ್‌?

ಇಪ್ಪತ್ತು ವರ್ಷಗಳ ಬಳಿಕ ಆಫ್ಘಾನ್‌ ಮತ್ತೆ ತಾಲಿಬಾನ್‌ಗಳ ಆಕ್ರಮಣಕ್ಕೆ ತುತ್ತಾಗಿದೆ. ಮಹಿಳೆಯರ ಸ್ಥಿತಿ ಶೋಚನೀಯ ಪರಿಸ್ಥಿತಿಗೆ ತಲುಪಿದೆ ಎಂದು ಹೇಳಲಾಗುತ್ತಿದೆ. ಈ ನಡುವೆಯೇ ಕೆಲವು ಹಳೆಯ ಫೋಟೋಗಳು ವೈರಲ್‌ ಆಗಿದ್ದು, ತಾಲಿಬಾನ್‌ಗಳು ಮಹಿಳೆಯರನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಹೇಳಿಕೆಗಳೂ ಹರಿದಾಟುತ್ತಿವೆ. ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ..

ಇಪ್ಪತ್ತು ವರ್ಷಗಳ ಹಿಂದೆ ತಾಲಿಬಾನ್ ನಡೆಸಿದ್ದ ಅಮಾನವೀಯ ಕೃತ್ಯಗಳ ಬಗ್ಗೆ ಹಲವಾರು ಚಿತ್ರಗಳು, ವರದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಈ ಹಿನ್ನಲೆಯಲ್ಲಿ, ವ್ಯಕ್ತಿಯೊಬ್ಬ ಮಹಿಳೆಯೊಬ್ಬರನ್ನು ಸಂಕೋಲೆಗಳಿಂದ ಕಟ್ಟಿ ಹಾಕಿರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಚಿತ್ರದ ಜೊತೆಗೆ ‘ತಾಲಿಬಾನ್ ಮಹಿಳೆಯರನ್ನು ಲೈಂಗಿಕ ಗುಲಾಮಗಿರಿಗೆ ತಳ್ಳಿ ಮಾರಾಟ ಮಾಡುತ್ತಿದೆ’ ಎಂಬ ಸಂದೇಶ ಕೂಡಾ ಹರಿದಾಡುತ್ತಿದೆ.

ಇದನ್ನೂ ಓದಿ:Fact Check: ರೋಹಿಂಗ್ಯಾಗಳಿಗೆ ಸೌಲಭ್ಯ ನೀಡಿತ್ತೇ ದೆಹಲಿ ಸರ್ಕಾರ; ಸುಳ್ಳು ಹೇಳುತ್ತಿದೆ ಬಿಜೆಪಿ!

ಹಲವಾರು ಫೇಸ್‌ಬುಕ್ ಬಳಕೆದಾರರು ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಮಹಿಳೆಯರನ್ನು ಹರಾಜು ಹಾಕುತ್ತಿದ್ದಾರೆ ಎಂದು ಪ್ರತಿಪಾದಿಸಿ ಚಿತ್ರವನ್ನು ಹಂಚಿಕೊಂಡಿದ್ದಾರೆ. ಪೋಸ್ಟ್‌ನ ಆರ್ಕೈವ್ ಅನ್ನು ಇಲ್ಲಿ ನೋಡಬಹುದು.

ಬಲಪಂಥೀಯ ಬೆಂಬಲಿಗರಾದ ಶೆಫಾಲಿ ವೈದ್ಯ ಅವರು ಕೂಡಾ ಈ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಇವರು ಈ ಹಿಂದೆ ಕೂಡಾ ಹಲವಾರು ಬಾರಿ ತಪ್ಪು ಮಾಹಿತಿಗಳನ್ನು ಮತ್ತು ಸುಳ್ಳು ಸುದ್ದಿಗಳನ್ನು ಹಂಚಿಕೊಂಡಿರುವ ಉದಾಹರಣೆಗಳಿಗೆ. ಅವರ ಟ್ವೀಟ್‌ನ ಆರ್ಕೈವ್‌ ಅನ್ನು ಇಲ್ಲಿ ನೋಡಬಹುದು. ಇನ್ನೂ ಹಲವಾರು ಜನರು ಇದನ್ನು ಹಂಚಿಕೊಂಡಿದ್ದು ಅದನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಫ್ಯಾಕ್ಟ್‌‌ಚೆಕ್‌

ಈ ಚಿತ್ರವು 2014 ರ ಸಮಯದ್ದಾಗಿದ್ದು, ‘ಕಂಪೇಷನ್‌ 4 ಕುರ್ದಿಸ್ತಾನ್’ ಎಂಬ ಗುಂಪು ಲಂಡನ್‌ನಲ್ಲಿ ‘ಇಸ್ಲಾಮಿಕ್ ಸ್ಟೇಟ್ ಸೆಕ್ಸ್ ಸ್ಲೇವ್ ಮಾರ್ಕೆಟ್’ ಎಂಬ ಬೀದಿ ನಾಟಕವನ್ನು ಐಸಿಸ್‌‌ ಭಯೋತ್ಪಾದಕರ ವಿರುದ್ದ ಜಾಗೃತಿಗಾಗಿ ಪ್ರದರ್ಶಿಸಿತು. ಆಗ ಈ ಚಿತ್ರವನ್ನು ಕ್ಲಿಕ್ಕಿಸಲಾಗಿತ್ತು ಎಂದು ದಿ ಕ್ವಿಂಟ್‌ ಫ್ಯಾಕ್ಟ್‌ಚೆಕ್ ಮಾಡಿದೆ.

ಇದನ್ನೂ ಓದಿ:Fact Check: ಜೈಲಿನಲ್ಲಿರುವ ಬರ್ಮಾದ ಮಾಜಿ ಪ್ರಧಾನ ಮಂತ್ರಿ ಆಂಗ್ ಸಾನ್ ಸೂ ಕಿ ಎಂದು ತಿರುಚಿತ ಚಿತ್ರ ವೈರಲ್‌!

ಯಾಂಡೆಕ್ಸ್ ಎಂಬ ಸರ್ಚ್ ಇಂಜಿನ್ ಬಳಸಿ, ರಿವರ್ಸ್ ಇಮೇಜ್ ಹುಡುಕಾಟ ನಡೆಸಿದಾಗ ಈ ಚಿತ್ರವು ‘ಟೆಲಿಗ್ರಾಫ್’ ಎಂಬ ವೆಬ್‌ಸೈಟ್‌ನಲ್ಲಿ ಬಳಸಿರುವುದನ್ನು ದಿ ಕ್ವಿಂಟ್‌‌‌ ಪತ್ತೆ ಹಚ್ಚಿದೆ. ಟರ್ಕಿಶ್‌ ಬಾಷೆಯಲ್ಲಿ ‘ಲಂಡನ್‌ನಲ್ಲಿ ಐಸಿಸ್ ಗ್ಯಾಂಗ್‌ಗಳ ವಿರುದ್ಧ ಅರ್ಥಪೂರ್ಣ ಕ್ರಮ’ ಎಂಬ ಶಿರ್ಷಿಕೆಯ ಅಡಿಯಲ್ಲಿ ಈ ಚಿತ್ರವಿರುವ ಲೇಖನವನ್ನು ಬರೆಯಲಾಗಿದೆ.

ಟೆಲಿಗ್ರಾಫ್‌ ಈ ವರದಿಯನ್ನು 2014 ರ ಅಕ್ಟೋಬರ್ 17 ರಂದು ಪ್ರಕಟಿಸಿದ್ದು, ಫೋಟೊ ಕೃಪೆಯನ್ನು ‘ಅರಿ ಮುರಾದ್’ ಎಂಬವರಿಗೆ ನೀಡಿದೆ.

‘ಅರಿ ಮುರಾದ್’ ಅವರ ಅಧೀಕೃತ ಫೇಸ್‌ಬುಕ್ ಖಾತೆಯಲ್ಲೂ ಇದೇ ದೃಶ್ಯಗಳನ್ನು ತೋರಿಸುವ ವಿಡಿಯೊ 2016 ರ ಮಾರ್ಚ್ 1 ರಂದು ಪ್ರಕಟಿಸಲಾಗಿದೆ. ವೀಡಿಯೊದಲ್ಲಿ, “ಐಸಿಸ್ ಮತ್ತು ಅವರ ಕ್ರೌರ್ಯವನ್ನು ತೋರಿಸುವ ಬೆಚ್ಚಿಬೀಳಿಸುವ ಪ್ರದರ್ಶನ” ಎಂದು ಉಲ್ಲೇಖಿಸಲಾಗಿದೆ.

ಈ ಬೀದಿ ನಾಟಕವನ್ನು ಕುರ್ದಿಶ್ ವಲಸೆಗಾರರ ​​ಗುಂಪಾದ ‘ಕಂಪೇಷನ್‌ 4 ಕುರ್ದಿಸ್ತಾನ್’ ಎಂಬ ಗುಂಪು ಲಂಡನ್‌ನಲ್ಲಿ ನಡೆಸಿತ್ತು. ಇರಾಕ್‌ನಲ್ಲಿ ಐಸಿಸ್‌ನ ಕೃತ್ಯಗಳ ಬಗ್ಗೆ ಜಾಗೃತಿ ಮೂಡಿಸಲು ಈ ಬೀದಿ ನಾಟಕವನ್ನು ಪ್ರದರ್ಶನ ಮಾಡಲಾಯಿತು.

ಈ ಮೊದಲು ಕೂಡಾ ಈ ಬೀದಿ ನಾಟಕದ ದೃಶ್ಯವನ್ನು ಅಫ್ಘಾನಿಸ್ತಾನದ ಬೀದಿಯಲ್ಲಿ ಮಹಿಳೆಯರನ್ನು ಹರಾಜು ಹಾಕಲಾಗುತ್ತಿದೆ ಎಂಬ ಪ್ರತಿಪಾದನೆಯೊಂದಿಗೆ ವೈರಲ್‌ ಮಾಡಲಾಗಿತ್ತು.

ಆದಾಗ್ಯೂ, ಅಫ್ಘಾನಿಸ್ತಾನ ಮತ್ತೆ ತಾಲಿಬಾನ್ ವಶಕ್ಕೆ ಹೋಗಿರುವುದರಿಂದ ಮಹಿಳೆಯರು ತಮ್ಮ ಹಕ್ಕುಗಳು, ಸುರಕ್ಷತೆ, ಜೀವನ ಮತ್ತು ಭವಿಷ್ಯದ ಬಗ್ಗೆ ಭಯಪಡುತ್ತಿದ್ದಾರೆ ಎಂಬುವುದು ವರದಿಯಾಗಿದೆ. ಈ ಹಿಂದೆ ಕೂಡಾ ತಾಲಿಬಾನ್‌ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ದಮನಕಾರಿ ನೀತಿಗಳನ್ನು ಪ್ರತಿಪಾದಿಸುತ್ತಲೆ ಬಂದಿದೆ. ಹಾಗಾಗಿ ಇಡಿ ವಿಶ್ವ ಅದೇ ಭಯದಿಂದ ಅಫ್ಘಾನಿಸ್ತಾನವನ್ನು ನೋಡುತ್ತಿದೆ.

ಆದರೆ ಪ್ರಸ್ತುತ ಸಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ ಈ ಚಿತ್ರವು ಅಫ್ಘಾನಿಸ್ತಾದ ದೃಶ್ಯವಲ್ಲ.

ಕೃಪೆ: ದಿ ಕ್ವಿಂಟ್‌

ಇದನ್ನೂ ಓದಿ: Fact Check: ವಿಡಿಯೋದಲ್ಲಿ ಹಂಚಿಕೊಳ್ಳಲಾದ ಶಿಲ್ಪಕಲೆಗಳು ಅಯೋಧ್ಯೆ ರಾಮ ಮಂದಿರದ್ದವೇ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights