ಫ್ಯಾಕ್ಟ್‌ಚೆಕ್: ರಾತ್ರಿ ಇಡೀ ಮೊಬೈಲ್ ಚಾರ್ಜ್ ಹಾಕಿದರೆ ಬ್ಯಾಟರಿ ಸ್ಫೋಟಗೊಳ್ಳುವುದೇ?

ಸಾಮಾನ್ಯವಾಗಿ ದಿನ ಪೂರ್ತಿ ಮೊಬೈಲ್ ಬಳಕೆ ಮಾಡುವವರು ರಾತ್ರಿ ಮಲಗುವ ಮುನ್ನ ತಮ್ಮ ಮೊಬೈಲ್‌ಗಳನ್ನ ಚಾರ್ಜ್‌ಗೆ ಹಾಕಿ ಮಲಗುವುದು ವಾಡಿಕೆ. ಆ ರೀತಿ ಮಾಡುವವರು ಈ ವಿಡಿಯೋವನ್ನ ಒಮ್ಮೆ ನೋಡಿ ಎಂಬ ವಿವರಣೆಯೊಂದಿಗೆ ಮೊಬೈಲ್ ಒಂದು ಸ್ಫೋಟಗೊಳ್ಳುವ ವಿಡಿಯೊವನ್ನು ಪ್ರಸಾರ ಮಾಡಲಾಗಿದೆ.  ‘ಯಾವುದೇ ಕಾರಣಕ್ಕೂ ನಿಮ್ಮ ಮೊಬೈಲ್ ಫೋನ್ ಅನ್ನು ರಾತ್ರಿಯಿಡೀ ಚಾರ್ಜ್ ಹಾಕಬೇಡಿ,  ಹಾಕಿದರೆ ಸ್ಫೋಟಗೊಳ್ಳುತ್ತದೆ ಎಂಬ ಪೋಸ್ಟ್ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ವೈರಲ್ ವಿಡಿಯೊ ಪೋಸ್ಟ್‌ಅನ್ನು ಪರಿಶೀಲಿಸುವಂತೆ ಏನ್‌ಸುದ್ದಿ.ಕಾಂ ಗೆ ಹಲವು ವಿನಂತಿ ಸಂದೇಶಗಳು ಬಂದಿದ್ದು ವೈರಲ್ ಪೋಸ್ಟ್‌ನ ಸತ್ಯಾಸತ್ಯೆ ಏನೆಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ವೈರಲ್‌ ವಿಡಿಯೋವನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜ್‌ ಸರ್ಚ್ ಮಾಡಿದಾಗ, Dantri.com ನಲ್ಲಿ ಪ್ರಕಟವಾದ ಸುದ್ದಿ ವರದಿಯು ಲಭ್ಯವಾಗಿದೆ. ಈ ಸುದ್ದಿ ವರದಿಯು ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದ ಸುದೀರ್ಘ ಆವೃತ್ತಿಯನ್ನು ಒಳಗೊಂಡಿದೆ. ಪೋಸ್ಟ್‌ನ ವೀಡಿಯೊವು ಮೂಲ ವೀಡಿಯೊದಿಂದ ಕ್ರಾಪ್ ಮಾಡಿದ ಆವೃತ್ತಿಯಾಗಿದೆ ಎಂದು ಸ್ಪಷ್ಟವಾಗಿದೆ.

ವರದಿಯ ಪ್ರಕಾರ, ಚೀನಾದ ಶಾಂಘೈ ನಗರದ ಅಪಾರ್ಟ್‌ಮೆಂಟ್‌ನಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ನ ಬ್ಯಾಟರಿಯನ್ನು ಚಾರ್ಜ್ ಮಾಡುವಾಗ ಬ್ಯಾಟರಿ ಸ್ಫೋಟಗೊಂಡಿದೆ. ಘಟನೆಯು 2019 ರಲ್ಲಿ ಸಂಭವಿಸಿದ್ದು,  ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು ಹೆಚ್ಚಿನ ಮಾಹಿತಿಗಾಗಿ  ಗೂಗಲ್ ಸರ್ಚ್ ಮಾಡಿದಾಗ,  ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ ಪ್ರಕಟಿಸಿದ ವೀಡಿಯೊ ಸ್ಟೋರಿ ಮತ್ತು ಆನ್‌ಲೈನ್ ಸುದ್ದಿ ಪೋರ್ಟಲ್ Newsflare.com ನಲ್ಲಿ ಪ್ರಕಟವಾದ ಪೋಸ್ಟ್ ಅನ್ನು ನಾವು ಕಂಡುಕೊಂಡಿದ್ದೇವೆ, ಶಾಂಘೈನಲ್ಲಿ ಈ ಘಟನೆ ಸಂಭವಿಸಿದೆ ಮತ್ತು ಎಲೆಕ್ಟ್ರಿಕ್ ಸ್ಕೂಟರ್‌ನ ಬ್ಯಾಟರಿ ಸ್ಫೋಟಗೊಂಡಿದೆ ಎಂದು ವರದಿ ದೃಢಪಡಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೊ, 2019 ರಲ್ಲಿ ಚೀನಾದ ಶಾಂಘೈ ನಗರದ ಅಪಾರ್ಟ್ಮೆಂಟ್‌ನಲ್ಲಿ ನಡೆದ ಘಟನೆಯಾಗಿದೆ. ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿ ಸ್ಫೋಟದ ವೀಡಿಯೊವನ್ನು ರಾತ್ರಿಯಿಡೀ ಚಾರ್ಜ್ ಮಾಡುವ ವೇಳೆ ಸ್ಪೋಟಗೊಂಡ ಘಟನೆಯನ್ನು, ಮೊಬೈಲ್ ಫೋನ್ ಬ್ಯಾಟರಿ ಸ್ಫೋಟಗೊಂಡಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಅಲ್ಲದೆ ರಾತ್ರಿಯಿಡೀ ಮೊಬೈಲ್ ಚಾರ್ಜ್ ಮಾಡಿದರೆ ಸ್ಫೋಟಗೊಳ್ಳುತ್ತದೆ ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ. ಹಾಗಿದ್ದರೂ ಬ್ಯಾಟರ್ ಫುಲ್ ಆದ ಕೂಡಲೇ ಆಫ್ ಮಾಡುವುದು ಉತ್ತಮ. ಒಟ್ಟಿನಲ್ಲಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ಪ್ರಿಯಾಂಕ ಗಾಂಧಿ, ನೆಹರು ಕುರಿತು ಮಾಡಿದ ಟ್ವೀಟ್‌ ಅನ್ನು ತಿರುಚಿ ಹಂಚಿಕೊಂಡ ಕಿಡಿಗೇಡಿಗಳು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights