ಫ್ಯಾಕ್ಟ್‌ಚೆಕ್: ರಾಷ್ಟ್ರ ಧ್ವಜ ತೆಗೆಯುವಂತೆ ಹಿಂದೂ ಯುವಕನಿಗೆ, ಮುಸ್ಲಿಂ ವ್ಯಕ್ತಿ ಬೆದರಿಸಿದ್ದು ನಿಜವಲ್ಲ

ಭಾರತದ ತ್ರಿವರ್ಣ ಧ್ವಜವನ್ನ ಪ್ರದರ್ಶಿಸುವ ವೇಳೆ ಮುಸ್ಲಿಂ ವ್ಯಕ್ತಿಯೊಬ್ಬರು ವಾಹನಕ್ಕೆ ಧ್ವಜ ಕಟ್ಟಿರುವುದನ್ನು  ವಿರೋಧಿಸುತ್ತಿರುವಂತೆ ತೋರಿಸುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ವೀಡಿಯೊದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರು ಹಿಂದೂ ಯುವಕರೊಂದಿಗೆ “ನೀವು ವಾಹನಗಳ ಮೇಲೆ ರಾಷ್ಟ್ರಧ್ವಜವನ್ನು ಹಾಕಬಾರದು” ಎಂದು ಪದೇ ಪದೇ ಕೂಗುತ್ತಿರುವುದನ್ನು ಕಾಣಬಹುದು. ವಿಡಿಯೋದಲ್ಲಿ ನಡೆದಿರುವ ಘಟನೆ ನಿಜವೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ವೈರಲ್ ವೀಡಿಯೊವನ್ನು ಎಚ್ಚರಿಕೆಯಿಂದ ಪರಿಶೀಲಿಸಿದಾಗ, “ಈ ವೀಡಿಯೊ ಸ್ಕ್ರಿಪ್ಟ್‌ ಮಾಡಲಾದ (ನಟಿಸಿದ) ಕಾಲ್ಪನಿಕ ವಿಡಿಯೊ ಆಗಿದೆ. ವೀಡಿಯೊದಲ್ಲಿನ ಎಲ್ಲಾ ಘಟನೆಗಳನ್ನು ಸ್ಕ್ರಿಪ್ಟ್ ಮಾಡಲಾಗಿದೆ ಮತ್ತು ಜಾಗೃತಿ ಉದ್ದೇಶಕ್ಕಾಗಿ ಮಾತ್ರ ಮಾಡಲಾಗಿದೆ. ಇದು ಯಾವುದೇ ರೀತಿಯ ಚಟುವಟಿಕೆಯನ್ನು ಪ್ರೇರೇಪಿಸುವುದಾಗಲಿ ಅಥವಾ ಯಾವುದೇ ರೀತಿಯ ಆಚರಣೆಗಳನ್ನು ದೂಷಿಸುವುದಾಗಲಿ ಮಾಡುವುದಿಲ್ಲ ಎಂದು ವಿಡಿಯೊದ ಕೊನೆಯಲ್ಲಿ ಡಿಸ್‌ಕ್ಲೈಮ್ ಮಾಡಲಾಗಿದೆ.


ಮತ್ತಷ್ಟು ಸರ್ಚ್ ಮಾಡಿದಾಗ, 14 ಆಗಸ್ಟ್ 2022 ರಂದು YouTube ನಲ್ಲಿ ಅಪ್‌ಲೋಡ್ ಮಾಡಿದ ಈ ಸ್ಕ್ರಿಪ್ಟ್ ವೀಡಿಯೊದ ವಿಸ್ತೃತ ಆವೃತ್ತಿಯು ಲಭ್ಯವಾದ್ದು. ನಾವು ವಾಹನಗಳ ಮೇಲೆ ಏಕೆ ಧ್ವಜವನ್ನು ಪ್ರದರ್ಶಿಸಬಾರದು ಎಂದು ಕೇಳಿದಾಗ, “ಧ್ವಜಗಳು ವಾಹನಗಳಿಂದ ಕೆಳಗೆ ಬೀಳಬಹುದು, ಧ್ವಜವನ್ನು ಗಮನಿಸದೆ ಜನರು ಅವುಗಳ ಮೇಲೆ ನಡೆದಾಡುವ ಸಾಧ್ಯತೆ ಇರುತ್ತದೆ, ಆದು ಧ್ವಜಕ್ಕೆ ಅಗೌರವ ನೀಡಿದಂತಾಗತ್ತದೆ. ಅದಕ್ಕಾಗಿಯೇ ವಾಹನಗಳ ಮೇಲೆ ರಾಷ್ಟ್ರಧ್ವಜವನ್ನು ಇರಿಸಬಾರದು ಎಂದು ಮುಸ್ಲಿಂ ವ್ಯಕ್ತಿ ವಿವರಿಸುತ್ತಾನೆ. ಇದು ಜನ ಜಾಗೃತಿಗಾಗಿ ಮಾಡಲಾದ ಸ್ಕ್ರಿಪ್ಟೆಡ್ ವಿಡಿಯೊ ಎಂದು ಸ್ಪಷ್ಟವಾಗಿ ಹೇಳಲಾಗಿದೆ.


ಒಟ್ಟಾರೆಯಾಗಿ ಹೇಳುವುದಾದರೆ, ವಾಹನಗಳಿಂದ ರಾಷ್ಟ್ರಧ್ವಜವನ್ನು ತೆಗೆಯುವಂತೆ ಮುಸ್ಲಿಂ ವ್ಯಕ್ತಿಯೊಬ್ಬ ಹಿಂದೂ ಯುವಕರಿಗೆ ಕೇಳುವ ಈ ವೀಡಿಯೊ ಸ್ಕ್ರಿಪ್ಟ್ ಮಾಡಲಾಗಿದ್ದು, ಜನರನ್ನು ಜಾಗೃತರನ್ನಗಿ ಮಾಡುವ ಉದ್ದೇಶದಿಂದ ವಿಡಿಯೊವನ್ನು ರಚಿಸಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ಬಾಂಗ್ಲಾದೇಶದಲ್ಲಿ ಹಿಂದೂಗಳ ಅಂಗಡಿಗಳನ್ನು ಗುರಿಯಾಗಿಸಿಕೊಂಡು ಬೆಂಕಿ ಹಚ್ಚಲಾಗಿದೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights