ಫ್ಯಾಕ್ಟ್‌ಚೆಕ್: ಪ್ರಿಯಾಂಕ ಗಾಂಧಿ, ನೆಹರು ಕುರಿತು ಮಾಡಿದ ಟ್ವೀಟ್‌ ಅನ್ನು ತಿರುಚಿ ಹಂಚಿಕೊಂಡ ಕಿಡಿಗೇಡಿಗಳು

ದೇಶದ ಪ್ರಥಮ ಪ್ರಧಾನಿ, ಆಧುನಿಕ ಭಾರತದ ನಿರ್ಮಾತೃ ಎಂದು ಕರೆಸಿಕೊಳ್ಳುವ ಜವಾಹಾರ್ ಲಾಲ್ ನೆಹರೂ ಅವರು ಕುರಿತು ಚರ್ಚೆಗಳು ಆರಂಭವಾಗಿವೆ. ಸ್ವಾತಂತ್ರ್ಯ ದಿನದಂದು ಕರ್ನಾಟಕ ಬಿಜೆಪಿ ಸರ್ಕಾರ ನೀಡಿದ ಜಾಹೀರಾತಿನಲ್ಲಿ ಅವರನ್ನು ಕೈಬಿಟ್ಟಿದ್ದಕ್ಕೆ ದೇಶಾದ್ಯಂತ ವ್ಯಾಪಕ ಆಕ್ರೋಶ ಎದುರಿಸಿದೆ. ಈ ನಡುವೆ ನೆಹರೂ ಕುರಿತು ಮೊಮ್ಮಗಳು ಪ್ರಿಯಾಂಕಾ ಮಾಡಿದ್ದ ಟ್ವೀಟ್ ಅನ್ನು ತಿರುಚಿ ಪ್ರಸಾರ ಮಾಡಲಾಗಿದೆ. “ನನ್ನ ಅಚ್ಚು ಮೆಚ್ಚಿನ ತಾತನ ಬಗ್ಗೆ ಒಂದು ಸಂಗತಿಯಿದೆ. ಪ್ರಧಾನಿಯಾಗಿದ್ದಾಗ ಒಮ್ಮೆ ಅವರು ಕೆಲಸ ಮುಗಿಸಿ ಮಧ್ಯರಾತ್ರಿ 3 ಗಂಟೆಗೆ ಮನೆಗೆ ಬಂದರು. ಆಗ ಅವರ ಕಾವಲುಗಾರ ಸುಸ್ತಾಗಿ ನಿದ್ರೆಗೆ ಜಾರಿದ್ದ. ಅವನ ಮೇಲೆ ಹೊದಿಕೆ ಹೊದಿಸಿದರು ಮತ್ತು ಅವನ ಹೆಂಡತಿ ಇದ್ದ ಕೋಣೆಗೆ ಹೋದರು” ಎಂದು ಬರೆದು ಸ್ಕ್ರೀನ್‌ ಶಾಟ್‌ ಅನ್ನು ಹಂಚಿಕೊಳ್ಳಲಾಗಿದೆ. Image

ಪಂಡಿತ್ ಜವಾಹರಲಾಲ್‌ ನೆಹರೂ ಅವರ ಕುರಿತಾಗಿ ಮೊಮ್ಮಗಳು ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಹೆಸರಿನಲ್ಲಿ ಮಾಡಲಾಗಿರುವ ಟ್ವೀಟ್‌ನ ಸ್ಕ್ರೀನ್‌ಶಾಟ್‌ನ ಸತ್ಯಾಸತ್ಯತೆ ಏನೆಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮದಲ್ಲಿ ಪ್ರಿಯಾಂಕ ಗಾಂಧಿ ತನ್ನ ತಾತ ನೆಹರೂ ಅವರ ಬಗ್ಗೆ ಮಾಡಿದ್ದಾರೆ ಎನ್ನಲಾದ ವೈರಲ್ ಟ್ವೀಟ್‌ನ ಸ್ಕ್ರೀನ್‌ಶಾಟ್‌ ಅನ್ನು ಗೂಗಲ್ ರಿವರ್ಸ್ ಇಮೇಜ್‌ ಸರ್ಚ್ ಮಾಡಿದಾಗ, 14 ನವೆಂಬರ್ 2021ರಂದು ನ್ಯೂಸ್‌18 ಪ್ರಕಟಿಸಿದ್ದ ಲೇಖನವೊಂದು ಲಭ್ಯವಾಗಿದೆ. ಇದರಲ್ಲಿ ಪ್ರಿಯಾಂಕ ಗಾಂಧಿ ಮಾಡಿರುವ ಮೂಲ ಟ್ವೀಟ್ ಲಭ್ಯವಾಗಿದ್ದು,  ” ನನ್ನ ತಾತನ ಬಗ್ಗೆ ಒಂದು ಮೆಚ್ಚಿನ ಸಂಗತಿಯಿದೆ. ಪ್ರಧಾನಿಯಾಗಿದ್ದಾಗ ಒಮ್ಮೆ ಅವರು ಕೆಲಸ ಮುಗಿಸಿ ಮಧ್ಯರಾತ್ರಿ 3 ಗಂಟೆಗೆ ಮನೆಗೆ ಬಂದರು. ಆಗ ಅವರ ಕಾವಲುಗಾರ ಸುಸ್ತಾಗಿ ನಿದ್ರೆಗೆ ಜಾರಿದ್ದ. ಅವನ ಮೇಲೆ ಹೊದಿಕೆ ಹೊದಿಸಿದರು ಮತ್ತು ಅಲ್ಲಯೇ ಅಂಗರಕ್ಷಕನ ಪಕ್ಕದಲ್ಲಿದ್ದ ಕುರ್ಚಿಯಲ್ಲಿ ಕುಳಿತರು” ಎಂದು 2019 ರಲ್ಲಿ ಪ್ರಿಯಾಂಕ ಗಾಂಧಿ ತಮ್ಮ ತಾತನ ಕುರಿತು ಟ್ವೀಟ್ ಮಾಡಿದ್ದಾರೆ. ಅದನ್ನು ಈ ಕೆಳಗೆ ನೋಡಬಹುದು.

ಆದರೆ ದುಷ್ಕರ್ಮಿಗಳು ಪ್ರಿಯಾಂಕಾ ಗಾಂಧಿಯವರ ಟ್ವೀಟ್‌ನ ಕೊನೆಯ ಸಾಲನ್ನು ಅಳಿಸಿ ಕಾವಲುಗಾರನ ಹೆಂಡತಿಯ ಕೊಠಡಿಗೆ ಹೋದರು ಎಂದು ಕೆಟ್ಟದಾಗಿ ತಿರುಚಿ ಬರೆದು ಹಂಚಿಕೊಂಡಿದ್ದಾರೆ.

ಇದು ಟ್ವೀಟ್‌ನ ತಿರುಚಲಾದ ಸ್ಕ್ರೀನ್‌ಶಾಟ್ ಎಂದು ಇಂಡಿಯಾ ಟುಡೇ ಮತ್ತು ದಿ ಕ್ವಿಂಟ್ ವೆಬ್‌ಸೈಟ್‌ಗಳು ವರದಿ ಮಾಡಿವೆ. 2019 ರ ನವೆಂಬರ್‌ 14ರಂದು ಪ್ರಿಯಾಂಕಾ ಅವರು ನೆಹರೂ ಕುರಿತು ಟ್ವೀಟ್ ಮಾಡಿದ್ದರು. ಮೂಲ ಟ್ವೀಟ್‌ನಲ್ಲಿ, ‘ಪ್ರಧಾನಿಯಾಗಿದ್ದಾಗ ಒಮ್ಮೆ ಅವರು ಕೆಲಸ ಮುಗಿಸಿ ಮಧ್ಯರಾತ್ರಿ 3 ಗಂಟೆಗೆ ಮನೆಗೆ ಬಂದರು. ಆಗ ಅವರ ಕಾವಲುಗಾರ ಸುಸ್ತಾಗಿ ನಿದ್ರೆಗೆ ಜಾರಿದ್ದ. ಅವನ ಮೇಲೆ ಹೊದಿಕೆ ಹೊದಿಸಿದರು. ಅವನ ಪಕ್ಕದಲ್ಲಿದ್ದ ಕುರ್ಚಿಯ ಮೇಲೆ ಒರಗಿಕೊಂಡರು’ ಎಂದಷ್ಟೇ ಇದೆ. ಕೊನೆಯ ಸಾಲನ್ನು ‘ಅವನ ಹೆಂಡತಿ ಇದ್ದ ಕೋಣೆಗೆ ಹೋದರು’ ಎಂಬುದಾಗಿ ತಿರುಚಿ, ಟ್ವೀಟ್‌ನ ಸ್ಕ್ರೀನ್‌ಶಾಟ್ ಸೃಷ್ಟಿಸಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಪ್ರಿಯಾಂಕ ಗಾಂಧಿ 2019ರಲ್ಲಿ ತಮ್ಮ ಅಜ್ಜನ ಕುರಿತು ಮೆಚ್ಚಿನ ಸಂಗತಿಯನ್ನು ಹಂಚಿಕೊಂಡ ಮೂಲ ಟ್ವೀಟ್‌ ಅನ್ನು ತಿರುಚಿ ಅಸಂಬದ್ದ ಹೇಳಿಕೆಗಳನ್ನು ಕೆಟ್ಟದಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಟ್ವೀಟ್‌ ನ ಸ್ಕ್ರೀನ್‌ಶಾಟ್‌ ತಿರುಚಲಾಗಿದೆ ಎಂದು ಸ್ಪಷ್ಟವಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಬುರ್ಖಾ ಧರಿಸಿದ್ದ ವ್ಯಕ್ತಿಯಿಂದ ಮಗು ಅಪಹರಣ ವಿಡಿಯೊ ! ನಡೆದಿದ್ದೇನು ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights