ಲಖಿಂಪುರ ಖೇರಿ ಹಿಂಸಾಚಾರ : ಮಂತ್ರಿಯ ಮಗನನ್ನು ಬಂಧಿಸಲು ಕಾರಣವೇನು? ಇನ್ಸೈಡ್ ಸ್ಟೋರಿ..

ಕಳೆದ ವಾರ ಲಖಿಂಪುರ್ ಖೇರಿಯಲ್ಲಿ ನಡೆದ ಹಿಂಸಾಚಾರದಲ್ಲಿ ಪ್ರಮುಖ ಆರೋಪಿಯಾದ ಕೇಂದ್ರ ಗೃಹ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಶನಿವಾರ ಬಂಧಿಸಲಾಗಿದೆ. ಮಂತ್ರಿಯ ಮಗನನ್ನು ಬಂಧಿಸಲು ಕಾರಣವೇನು? ಯಾವ ಆಧಾರದ ಮೇಲೆ ಆತನನ್ನು ಬಂಧಿಸಲಾಗಿದೆ ಎನ್ನುವ ಬಗ್ಗೆ ನೋಡೋಣ.

ಕಳೆದ ವಾರ ಉತ್ತರಪ್ರದೇಶದ ಲಖಿಂಪುರ್ ಖೇರಿಯಲ್ಲಿ ಮೂರು ಕೃಷಿ ವಿರೋಧಿ ಕಾನೂನುಗಳನ್ನು ವಿರುದ್ಧ ರೈತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಶಾಂತಿಯುತ ಪ್ರತಿಭಟನಾನಿರತ ರೈತರ ಮೇಲೆವಾಹನ ಹರಿದು ನಾಲ್ವರು ರೈತರು ಸಾವನ್ನಪ್ಪಿದ್ದಾರೆ. ಜೊತೆಗೆ ಇಬ್ಬರು ಬಿಜೆಪಿ ಕಾರ್ಯಕರ್ತರು, ಓರ್ವ ವರದಿಗಾರ, ಇನ್ನೊಬ್ಬ ಮಿಶ್ರಾ ಚಾಲಕ ಎನ್ನಲಾಗುತ್ತಿದೆ. ರೈತರ ಮೇಲೆ ಹರಿದ ವಾಹನದಲ್ಲಿ ಗೃಹ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಇದ್ದರು ಎಂದು ರೈತರು ಘಟನೆ ನಡೆದಾಗಿನಿಂದಲೂ ಒತ್ತಾಯಿಸುತ್ತಿದ್ದಾರೆ. ರಾಜಕೀಯ ನಾಯಕರೂ ಪೊಲೀಸರ ಮೇಲೆ ಒತ್ತಡ ಹೇರಿದ್ದರು. ಈ ವಿಚಾರವಾಗಿ ಕೋರ್ಟ್ ಸರ್ಕಾರವನ್ನು ಮತ್ತು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿತ್ತು. ಹೀಗಾಗಿ ನಿನ್ನೆ ಆಶಿಶ್ ಮಿಶ್ರಾರನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಜೊತೆಗೆ ಕೋರ್ಟ್ ಗೆ ಹಜರು ಪಡಿಸಿದ್ದಾರೆ. 14 ದಿನಗಳ ಕಾಲ ಆಶಿಶ್ ಮಿಶ್ರಾ ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಆದೇಶಿಸಿದೆ.

ಆಶಿಶ್ ಮಿಶ್ರಾ ಅವರು ಭಾನುವಾರ ಹಿಂಸಾಚಾರ ನಡೆದ ಸ್ಥಳದಿಂದ 4-5 ಕಿಮೀ ಸುತ್ತ ಕುಸ್ತಿ ಪಂದ್ಯದಲ್ಲಿದ್ದರು ಎಂದು ಹೇಳಲಾಗಿದೆ. ಘಟನೆ ನಡೆದ ಮಧ್ಯಾಹ್ನ 2 ಮತ್ತು 4 ರ ನಡುವೆ ಅಲ್ಲಿನ ಜನರು ಸಚಿವರ ಮಗ ಕಾಣೆಯಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಆ ಸಮಯದಲ್ಲಿ ಆಶಿಶ್ ಮಿಶ್ರಾ ಅವರ ಮೊಬೈಲ್ ಟವರ್ ಲೊಕೇಶನ್ ಕೂಡ ಅಪರಾಧದ ಸ್ಥಳದಲ್ಲಿ ತೋರಿಸಿದೆ ಎಂದು ಮೂಲಗಳು ತಿಳಿಸಿವೆ. ಈ ಸಮಯದಲ್ಲಿ ಮಿಶ್ರಾ ಅವರು ತಮ್ಮ ರೈಸ್ ಮಿಲ್‌ನಲ್ಲಿದ್ದರು. ಇದು ಅಪರಾಧದ ಸ್ಥಳಕ್ಕೆ ಹತ್ತಿರದಲ್ಲಿದೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ.

ಚಾಲಕ ಹರಿ ಓಂ ರೈತರ ಮೇಲೆ ಓಡಿದ ಮಹೀಂದ್ರ ವಾಹನವನ್ನು ಓಡಿಸುತ್ತಿದೆ ಎಂದು ಹೇಳಿದ್ದರೂ, ಆದರೆ ಪೋಲಿಸರು ವಿಶ್ಲೇಷಿಸಿದ ವಿಡಿಯೋದಲ್ಲಿ ಬಿಳಿ ಶರ್ಟ್ ಅಥವಾ ಕುರ್ತಾ ಧರಿಸಿದ ವ್ಯಕ್ತಿ ವಾಹನ ಚಲಾಯಿಸುತ್ತಿರುವುದು ತೋರಿಸುತ್ತದೆ. ಘಟನೆ ಬಳಿಕ ಹರಿ ಓಂ ಅವರನ್ನು ಆಸ್ಪತ್ರೆಗೆ ತಂದಾಗ ಹಳದಿ ಕುರ್ತಾ ಧರಿಸಿರುವುದು ಕಂಡುಬಂದಿದೆ.

ಕೆಲ ವಿವಾದದ ಅಂಶಗಳ ಆಧಾರದ ಮೇಲೆ ಅವರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಆತನ ಪ್ರತಿಕ್ರಿಯೆಗಳಲ್ಲಿ ಆತ ತಪ್ಪಿಸಿಕೊಳ್ಳುತ್ತಿದ್ದಾನೆ ಮತ್ತು ಸಹಕರಿಸಲಿಲ್ಲ ಎಂದು ಪೊಲೀಸರು ಹೇಳಿದರು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights