ಮೋದಿಯನ್ನು ದೂಷಿಸುವ ಮೂಲಕ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ರಾ ಒಬಾಮಾ..!

ಪ್ರಧಾನಿ ನರೇಂದ್ರ ಮೋದಿಯವರನ್ನು ದೂಷಿಸುವ ಮೂಲಕ ಅಮೇರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರು ರೈತರ ಪ್ರತಿಭಟನೆಗೆ ಬೆಂಬಲವನ್ನು ನೀಡಿದ್ದಾರೆ ಎನ್ನುವ ಹೇಳಿಕೆಯೊಂದು ವೈರಲ್ ಆಗುತ್ತಿದೆ.

ದೆಹಲಿ ಬಳಿ ರೈತರ ಆಂದೋಲನದ ಕಿಚ್ಚು ಹೆಚ್ಚಾಗಿದ್ದು ಇತ್ತ ಒಬಾಮ ಅವರು ಮಾಡಿದ ಟ್ವೀಟ್‌ನ ಚಿತ್ರವೊಂದು ವೈರಲ್ ಆಗಿದೆ. ಟ್ವೀಟ್ ಜೊತೆಗೆ ಚಿತ್ರದಲ್ಲಿ ಒಬಾಮಾ ಪ್ರಧಾನಿ ಮೋದಿಯೊಂದಿಗೆ ಕೈಕುಲುಕಿದ್ದಾರೆ. ಡಿಸೆಂಬರ್ 5 ರ ಈ ಟ್ವೀಟ್ ನಲ್ಲಿ, “ಇಂದು ನಾನು ಈ ಮನುಷ್ಯ # ನರೇಂದ್ರ ಮೋದಿ ಅವರೊಂದಿಗೆ ಕೈಕುಲುಕಲು ನಾಚಿಕೆಪಡುತ್ತೇನೆ” ಎಂದು ಹೇಳಲಾಗಿದೆ. ವೈರಲ್ ಚಿತ್ರವನ್ನು ಅನೇಕ ಫೇಸ್‌ಬುಕ್ ಬಳಕೆದಾರರು # FarmerProtest2020 ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಹಂಚಿಕೊಂಡಿದ್ದಾರೆ.

ಆದರೆ ಒಬಾಮಾ ಅವರ ಟ್ವೀಟ್‌ನ ‘ಸ್ಕ್ರೀನ್‌ಶಾಟ್’ ಮಾರ್ಫಿಂಗ್ ಆಗಿದೆ. ಹೌದು.. ಡಿಸೆಂಬರ್ 7 ರ ಸಂಜೆವರೆಗೂ ಅವರು ರೈತರ ಪ್ರತಿಭಟನೆಗೆ ಸಂಬಂಧಿಸಿದ ಯಾವುದೇ ಟ್ವೀಟ್ ಮಾಡಿಲ್ಲ. ಒಬಾಮಾ ಮತ್ತು ಮೋದಿಯವರು ಹಸ್ತಲಾಘವ ಮಾಡುವ ವೈರಲ್ ಚಿತ್ರ 2014 ರಂದು ತೆಗೆಯಲಾಗಿದ್ದು.

ವೈರಲ್ ‘ಟ್ವೀಟ್’ ಹಿಂದಿನ ಸತ್ಯ
ಒಬಾಮಾ ಅವರ ಟ್ವಿಟ್ಟರ್ ಟೈಮ್‌ಲೈನ್ ಅನ್ನು ಪರಿಶೀಲಿಸಿದಾಗ ಚಿತ್ರದಲ್ಲಿನ ಟ್ವೀಟ್‌ನ ಅವ್ಯವಸ್ಥೆಯ ಇಂಗ್ಲಿಷ್ ಅನುಮಾನ ಮೂಡಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಒಬಾಮಾ ರೈತರಿಗೆ ಸಂಬಂಧಿಸಿದ ಅಂತಹ ಯಾವುದೇ ಟ್ವೀಟ್ ಮಾಡಿದ್ದು ಕಂಡುಬಂದಿಲ್ಲ. ಡಿಸೆಂಬರ್ 5 ರಂದು ಅವರು ತಮ್ಮ “ಎ ಪ್ರಾಮಿಸ್ಡ್ ಲ್ಯಾಂಡ್” ಪುಸ್ತಕದ ಬಗ್ಗೆ ಎರಡು ಟ್ವೀಟ್‌ಗಳನ್ನು ಪೋಸ್ಟ್ ಮಾಡಿದ್ದಾರೆ.

ವೈರಲ್ ಚಿತ್ರವನ್ನು ಒಬಾಮರ ಮೂಲ ಟ್ವೀಟ್‌ನೊಂದಿಗೆ ಹೋಲಿಸಿದಾಗ, ಎರಡೂ ಚಿತ್ರಗಳ ಜೋಡಣೆಯನ್ನು ಕಾಣಬಹುದು.

ವೈರಲ್ ಚಿತ್ರ

ಮೂಲ ಟ್ವೀಟ್

ನಡೆಯುತ್ತಿರುವ ರೈತರ ಪ್ರತಿಭಟನೆಗೆ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಮತ್ತು ವಿಶ್ವಸಂಸ್ಥೆಯ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್ ಸೇರಿದಂತೆ ಅಂತರರಾಷ್ಟ್ರೀಯ ಬೆಂಬಲವೂ ಸಿಕ್ಕಿದೆ.

ಆದರೆ ಈ ಲೇಖನ ಬರೆಯುವ ಸಮಯದವರೆಗೆ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು ಆಂದೋಲನಕ್ಕೆ ಸಂಬಂಧಿಸಿದ ಯಾವುದನ್ನೂ ಟ್ವೀಟ್ ಮಾಡಿಲ್ಲ. ಆದ್ದರಿಂದ, ಒಬಾಮಾ ಪ್ರಧಾನಿ ಮೋದಿಯವರನ್ನು ದೂಷಿಸುವ ಟ್ವೀಟ್‌ನ ವೈರಲ್ ಚಿತ್ರಣ ಮಾರ್ಫಡ್ ಆಗಿದೆ ಎಂದು ಹೇಳಬಹುದು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights