ದೇಶದಲ್ಲಿ ಕೊರೊನಾ ಏರಿಳಿಕೆ – 42,618 ಹೊಸ ಕೇಸ್ ಪತ್ತೆ : 330 ಜನ ಬಲಿ..!

ದೇಶದಲ್ಲಿ ಕೊರೊನಾ ಏರಿಳಿಕೆಯಾಗುತ್ತಿದ್ದು ಕಳೆದ 24 ಗಂಟೆಯಲ್ಲಿ 42,618 ಹೊಸ ಪ್ರಕರಣಗಳು ದಾಖಲಾಗಿವೆ. ಜೊತೆಗೆ 330 ಜನ ಮಹಾಮಾರಿಗೆ ಬಲಿಯಾಗಿದ್ದಾರೆ.

24 ಗಂಟೆಗಳಲ್ಲಿ ಭಾರತದಲ್ಲಿ 42,618 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿದ್ದು, ದೇಶದ ಒಟ್ಟು ಸೋಂಕಿತರ ಸಂಖ್ಯೆ 3,29,45,907 ಕ್ಕೆ ತಲುಪಿದೆ. 24 ಗಂಟೆಗಳಲ್ಲಿ 36,385 ಜನ ಚೇತರಿಸಿಕೊಂಡಿದ್ದು ಈವರೆಗೆ ದೇಶಾದ್ಯಂತ ಒಟ್ಟು 3,21,00,001 ರಷ್ಟು ಜನ ಗುಣಮುಖರಾಗಿದ್ದಾರೆ. ಪ್ರಸ್ತುತ ದೇಶದಲ್ಲಿ 4,05,681 ಸಕ್ರಿಯ ಪ್ರಕರಣಗಳಿವೆ.

42,618 ಹೊಸ ಪ್ರಕರಣಗಳಲ್ಲಿ ಕೇರಳದಲ್ಲಿ 29,322 ಪ್ರಕರಣಗಳು, ಮಹಾರಾಷ್ಟ್ರದಲ್ಲಿ 4,313, ತಮಿಳುನಾಡು 1,568, ಆಂಧ್ರ ಪ್ರದೇಶ 1,520 ಪ್ರಕರಣಗಳು ಮತ್ತು ಕರ್ನಾಟಕದಲ್ಲಿ 1,220 ಪ್ರಕರಣಗಳು ದಾಖಲಾಗಿವೆ. ಕೇರಳದಲ್ಲಿ 24 ಗಂಟೆಗಳಲ್ಲಿ 131 ಸಾವುಗಳು ಸಂಭವಿಸಿವೆ. ಇದೇ ಅವಧಿಯಲ್ಲಿ ಮಹಾರಾಷ್ಟ್ರ 92 ಸಾವುಗಳಿಗೆ ಸಾಕ್ಷಿಯಾಗಿದೆ.

ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ಒಟ್ಟು 58,85,687 ಡೋಸ್‌ಗಳನ್ನು ನೀಡಲಾಗಿದೆ.ಈವರೆಗೆ ಒಟ್ಟು 67,72,11,205 ಡೋಸ್‌ ನೀಡಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.