ಗಣೇಶೋತ್ಸವಕ್ಕೂ ಮುನ್ನ ಬಿಎಂಸಿ ಕೋವಿಡ್ -19 ಮಾರ್ಗಸೂಚಿ ಬಿಡುಗಡೆ..!

ಮುಂಬೈನಲ್ಲಿ ಅದ್ದೂರಿಯಾಗಿ ಆಚರಿಸಲ್ಪಡುವ ಗಣೇಶೋತ್ಸವಕ್ಕೂ ಮುನ್ನ ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ)  ಹೊಸ ಕೋವಿಡ್ -19 ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಮುಂಬೈನಲ್ಲಿ ದೈನಂದಿನ ಕೊರೊನಾನವೈರಸ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮಹಾರಾಷ್ಟ್ರದಲ್ಲಿ ನಿರ್ಬಂಧಗಳನ್ನು ಸಡಿಲಗೊಳಿಸಲಾಗಿರುವುದರಿಂದ ಜನರು ಕೋವಿಡ್ ನಿಯಮಗಳನ್ನು ಅನುಸರಿಸುತ್ತಾರೆಯೇ ಎಂದು ಪರಿಶೀಲಿಸುವುದು ಅಧಿಕಾರಿಗಳಿಗೆ ದೊಡ್ಡ ಸವಾಲಾಗಿದೆ. ಮುಂಬೈ ಮೇಯರ್ ಕಿಶೋರಿ ಪೆಡ್ನೇಕರ್ ಅವರು ಗಣಪತಿ ಮಂಡಳಿಯ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಉತ್ಸವದ ಬಗ್ಗೆ ಚರ್ಚಿಸಿದರು ನಂತರ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ.

ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆ ವೇಳೆ ಚಾನೆಲ್‌ಗಳ ಮೂಲಕ ಆನ್‌ಲೈನ್ ದರ್ಶನ ಸೌಲಭ್ಯಗಳನ್ನು ಒದಗಿಸಬಹುದು. ಆದರೆ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ 10 ಕ್ಕಿಂತ ಹೆಚ್ಚು ಜನರಿಗೆ ಗಣೇಶ ಮೂರ್ತಿಯನ್ನು ತರಲು ಅವಕಾಶವಿರುವುದಿಲ್ಲ, ಜೊತೆಗೆ ಗಣೇಶನ ಮೂರ್ತಿ 4 ಅಡಿಗಿಂತ ಹೆಚ್ಚಿರುವಂತಿಲ್ಲ.

ಅನುಮತಿಸಲಾದ ಸಂಖ್ಯೆಯ ಜನರು ಸಂಪೂರ್ಣವಾಗಿ ಲಸಿಕೆ ಹಾಕಬೇಕು ಮತ್ತು ಅವರು ಲಸಿಕೆ ಪಡೆದು 15 ದಿನಗಳನ್ನು ಕಳೆದಿರಬೇಕು. ಇಲ್ಲಿ ಯಾವುದೇ ರೀತಿಯ ಮೆರವಣಿಗೆಗೆ ಅವಕಾಶವಿಲ್ಲ.

ಸಾರ್ವಜನಿಕ ವಿಗ್ರಹಗಳನ್ನು ಕೃತಕ ಕೊಳದಲ್ಲಿ ಮುಳುಗಿಸಬೇಕು. ಈ ನಿಟ್ಟಿನಲ್ಲಿ, ನೈಸರ್ಗಿಕ ಇಮ್ಮರ್ಶನ್ ಸ್ಥಳಗಳಲ್ಲಿನ ದಟ್ಟಣೆಯನ್ನು ಕಡಿಮೆ ಮಾಡಲು 24 ವಿಭಾಗಗಳಲ್ಲಿ 173 ಸ್ಥಳಗಳಲ್ಲಿ ಕೃತಕ ಕೊಳಗಳನ್ನು ನಿರ್ಮಿಸಲಾಗಿದೆ.

ಸಾರ್ವಜನಿಕ ಗಣಪತಿ ವಿಸರ್ಜನೆಯ ಸಮಯದಲ್ಲಿ 10 ಕ್ಕಿಂತ ಹೆಚ್ಚು ಜನರಿಗೆ ಅವಕಾಶವಿರುವುದಿಲ್ಲ. ಅವರು ಮಾಸ್ಕ್ ಧರಿಸಬೇಕು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.

ಮನೆಯ ಮೂರ್ತಿಗಳನ್ನು ಸಾಧ್ಯವಾದರೆ ಮನೆಯಲ್ಲಿ ಬಕೆಟ್ ಅಥವಾ ಡ್ರಮ್‌ನಲ್ಲಿ ಮುಳುಗಿಸಬೇಕು. ಮನೆಯಲ್ಲಿ ಮುಳುಗಿಸುವುದು ಸಾಧ್ಯವಾಗದಿದ್ದರೆ ವಿಗ್ರಹಗಳನ್ನು ಕೃತಕ ಇಮ್ಮರ್ಶನ್ ಸ್ಥಳದಲ್ಲಿ ಮುಳುಗಿಸಬಹುದು. ಮುಂಬೈನಲ್ಲಿ ಒಟ್ಟು 73 ನೈಸರ್ಗಿಕ ಇಮ್ಮರ್ಶನ್ ತಾಣಗಳಿವೆ.

ಮುಳುಗುವ ಸ್ಥಳಗಳಲ್ಲಿ ಮಾಡುವ ಸಾಂಪ್ರದಾಯಿಕ ಆರತಿಗಳನ್ನು ಈ ವರ್ಷ ಪೆಂಡಾಲ್ ಮತ್ತು ಮನೆಗಳಲ್ಲಿ ಮಾಡಬೇಕು. ಸುರಕ್ಷತೆ ದೃಷ್ಟಿಯಿಂದ ಮಕ್ಕಳು ಮತ್ತು ಹಿರಿಯ ನಾಗರಿಕರನ್ನು ವಿಸರ್ಜನ್ ನಲ್ಲಿ ಬಾಗವಹಿಸಲು ಅನುಮತಿಸಲಾಗುವುದಿಲ್ಲ. ಕಂಟೈನ್‌ಮೆಂಟ್ ವಲಯದಲ್ಲಿ ಸಾರ್ವಜನಿಕ ಆಚರಣೆಗ ಅವಕಾಶವಿಲ್ಲ.

ನಾಗರಿಕರು ಅಥವಾ ಸ್ವಯಂಸೇವಕರು ನೇರವಾಗಿ ನೀರಿಗೆ ಗಣೇಶ ವಿಸರ್ಜನೆ ಮಾಡುವುದನ್ನ ನಿಷೇಧಿಸಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights