ಕಾಬೂಲ್ ಪ್ರತಿಭಟನೆಯ ಬಗ್ಗೆ ವರದಿ : ಪತ್ರಕರ್ತರಿಗೆ ಮನಬಂದಂತೆ ಥಳಿಸಿದ ತಾಲಿಬಾನಿಗಳು!

ಕಾಬೂಲ್ ಪ್ರತಿಭಟನೆಯ ವರದಿ ಮಾಡಿದ್ದಕ್ಕಾಗಿ ಅಫ್ಘಾನ್ ಪತ್ರಕರ್ತರನ್ನು ತಾಲಿಬಾನ್ ಉಗ್ರರು ಮನಬಂದಂತೆ ಥಳಿಸಿದ್ದಾರೆ. ಪತ್ರಕರ್ತರ ಮೈಮೇಲಿನ ಗಾಯಗಳನ್ನು ತೋರಿಸುವ ಫೋಟೋಗಳು ಸಾಮಾಜಿ ಜಾಲತಾಣದಲ್ಲಿ ಹರಿದಾಡುತ್ತಿದೆ.

ಕಾಬೂಲ್‌ನ ಬೀದಿಗಳಲ್ಲಿ ಮಂಗಳವಾರ ಮಹಿಳೆಯರ ದೊಡ್ಡ ಗುಂಪು ಪಾಕಿಸ್ತಾನದ ವಿರುದ್ಧ ಘೋಷಣೆಗಳನ್ನು ಕೂಗಿದೆ. ಈ ಪ್ರತಿಭಟನಾಕಾರರನ್ನು ಚದುರಿಸಲು ತಾಲಿಬಾನ್ ಗಾಳಿಯಲ್ಲಿ ಗುಂಡು ಹಾರಿಸಿ ಪ್ರತಿಭಟನೆಯನ್ನು ವರದಿ ಮಾಡುತ್ತಿದ್ದ ಹಲವಾರು ಪತ್ರಕರ್ತರನ್ನು ಬಂಧಿಸಿದೆ.

ಕಾಬೂಲ್ ಪ್ರತಿಭಟನೆಯ ಬಗ್ಗೆ ವರದಿ ಮಾಡುತ್ತಿದ್ದ ಇಬ್ಬರು ಅಫ್ಘಾನ್ ಪತ್ರಕರ್ತರಿಗೆ ತಾಲಿಬಾನ್ ಉಗ್ರರು ಮನಬಂದಂತೆ ಥಳಿಸಿ ಗಂಭೀರ ಗಾಯಗಳಾದ ಫೋಟೋಗಳು ವೈರಲ್ ಆಗಿವೆ.

ಟ್ವೀಟ್ ನಲ್ಲಿ ಅಮೆರಿಕಾದ ಪತ್ರಕರ್ತ ಮಾರ್ಕಸ್ ಯಾಮ್, ಆಫ್ಘಾನ್ ನ ಇಬ್ಬರು ಪತ್ರಕರ್ತರು ತಮ್ಮ ದೇಹದಾದ್ಯಂತ ರಕ್ತ ಹೆಪ್ಪುಗಟ್ಟುವುದನ್ನು ತೋರಿಸುವ ಫೋಟೋವನ್ನು ಹಂಚಿಕೊಂಡಿದ್ದಾರೆ. “ಅಫಘಾನ್ ಪತ್ರಕರ್ತರು ನೇಮತ್ ನಖಡಿ ಮತ್ತು ತಖಿ ದರ್ಯಾಬಿಯವರು ಕಾಬೂಲ್‌ನಲ್ಲಿ ಮಹಿಳಾ ರ್ಯಾಲಿಯನ್ನು ವರದಿ ಮಾಡಿದ್ದಕ್ಕಾಗಿ ಬಂಧನಕ್ಕೊಳಗಾದ ನಂತರ ಬಂಧನದಲ್ಲಿದ್ದಾಗ ತಾಲಿಬಾನ್ ಚಿತ್ರಹಿಂಸೆ ನೀಡಿದೆ. ಇದು ನಿಜಕ್ಕೂ ನೋವಿನ ಸಂಗತಿ” ಎಂದು ಯಾಮ್ ಬರೆದಿದ್ದಾರೆ.

ಅಫ್ಘಾನಿಸ್ತಾನದ TOLO ಸುದ್ದಿಯು ತಾಲಿಬಾನ್ ತನ್ನ ಕ್ಯಾಮರಾಪರ್ ವಾಹಿದ್ ಅಹ್ಮದಿಯನ್ನು ಬಂಧಿಸಿ ಆತನ ಕ್ಯಾಮೆರಾವನ್ನು ವಶಪಡಿಸಿಕೊಂಡಿದೆ ಎಂದು ವರದಿ ಮಾಡಿದೆ. ಪ್ರತಿಭಟನೆಯನ್ನು ಚಿತ್ರೀಕರಿಸದಂತೆ ಕೆಲವು ಪತ್ರಕರ್ತರನ್ನು ತಾಲಿಬಾನ್ ಪಡೆಗಳು ತಡೆದಿವೆ. ಜೊತೆಗೆ ಕಾಬೂಲ್ ಪ್ರತಿಭಟನೆಯನ್ನು ವರದಿ ಮಾಡುತ್ತಿದ್ದ ಹಲವಾರು ಅಫ್ಘಾನ್ ಪತ್ರಕರ್ತರನ್ನು ಮಂಗಳವಾರ ಬಂಧಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights