ಜನ್ಮದಿನಕ್ಕೆ ತಾಯಿಯನ್ನು ನೆನೆದು ಭಾವನಾತ್ಮಕ ಪೋಸ್ಟ್ ಶೇರ್ ಮಾಡಿದ ಅಕ್ಷಯ್ ಕುಮಾರ್!
ನಿನ್ನೆಯಷ್ಟೇ ತಾಯಿಯನ್ನು ಕಳೆದುಕೊಂಡು ಶೋಕದಲ್ಲಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್ ತಮ್ಮ ಜನ್ಮದಿನದ ಪ್ರಯುಕ್ತ ಭಾವನಾತ್ಮಕ ಪೋಸ್ಟ್ ಒಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ತಾಯಿ ಅರುಣಾ ಭಾಟಿಯಾ ಮಗ ಅಕ್ಷಯ್ ಕುಮಾರ್ ಅವರನ್ನು ಚುಂಬಿಸುವ ಭಾವನಾತ್ಮಕ ಫೋಟ ಶೇರ್ ಮಾಡಿ ಮನಮಿಡಿಯುವ ಹಾಗೆ ಬರೆದಿದ್ದಾರೆ.
ನಿನ್ನೆ (ಸೆ.8)ರಂದು ತಾಯಿ ಅರುಣಾ ಭಾಟಿಯಾ ಬಾರದ ಊರಿಗೆ ತೆರಳಿದ್ದಾರೆಂದು ಅಕ್ಷಯ್ ಕುಮಾರ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮೂಲಕ ಬಾಲಿವುಡ್ ಜನತೆಗೆ ಮಾಹಿತಿ ನೀಡಿದ್ದರು.
https://twitter.com/akshaykumar/status/1435451650408259592?ref_src=twsrc%5Etfw%7Ctwcamp%5Etweetembed%7Ctwterm%5E1435451650408259592%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Fmovies%2Fcelebrities%2Fstory%2Fakshay-kumar-remembers-mom-as-he-turns-54-says-he-is-sure-she-is-singing-happy-birthday-1850856-2021-09-09
ಈ ರೀತಿ ಆಗುವುದನ್ನು ನಾನೆಂದೂ ಬಯಸುವುದಿಲ್ಲ. ಆದರೆ ನನ್ನ ತಾಯಿ ಎಲ್ಲಿದ್ದಾರೋ ಅಲ್ಲಿಂದಲೇ ನನಗೆ ಜನ್ಮದಿನದ ಶುಭಾಶಯ ಕೋರುತ್ತಿದ್ದಾರೆ ಎಂಬುದು ನನಗೆ ಖಾತ್ರಿಯಿದೆ. ನನ್ನ ತಾಯಿಗೆ ಸಂತಾಪ ಸೂಚಿಸಿ ನನಗೆ ಶುಭಾಶಯ ಕೋರಿದ ಎಲ್ಲರಿಗೂ ಧನ್ಯವಾದಗಳು. ಜೀವನ ನಡೆಯುತ್ತಿರುತ್ತದೆ ಎಂದು ಬರೆದುಕೊಂಡಿದ್ದಾರೆ.