ಬಾಕಿ ಉಳಿದಿದೆ ಗಣಿ ಗುತ್ತಿಗೆದಾರರು ನೀಡಬೇಕಿದ್ದ 2,855 ಕೋಟಿ ರೂ ರಾಜಧನ; ವಸೂಲಿಗೆ ಸರ್ಕಾರಕ್ಕೆ ಹಿಂದೇಟು!

ಗಣಿ ಮತ್ತು ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಗುತ್ತಿಗೆದಾರರು ಕಳೆದ 5 ವರ್ಷದಲ್ಲಿ 2,855 ಕೋಟಿ ರೂ. ರಾಜಧನವನ್ನು ಬಾಕಿ ಉಳಿಸಿಕೊ೦ಡಿದೆ ಎಂದು ತಿಳಿದು ಬಂದಿದೆ.

ಕಬ್ಬಿಣ ಅದಿರು ಮತ್ತು ಮ್ಯಾ೦ಗನೀಸ್‌ ಗಣಿಗಾರಿಕೆಯಲ್ಲಿನ ಅಕ್ರಮಗಳ ವಿರುದ್ಧ ಲೋಕಾಯುಕ್ತರಾಗಿದ್ದ ಸ೦ತೋಷ್‌ ಹೆಗ್ಗೆ ಅವರು ನೀಡಿದ್ದ ವರದಿ ಆಧರಿಸಿ ಬಳ್ಳಾರಿವರೆಗೆ ಪಾದಯಾತ್ರೆ ನಡೆಸಿ ಅಧಿಕಾರಕ್ಕೇರಿದ್ದ ಕಾಂಗೆಸ್‌ ಪಕ್ಷದ ಅಧಿಕಾರವಾಧಿಯಲ್ಲಿಯೂ ರಾಜಧನ ವಸೂಲಾಗಿರಲಿಲ್ಲ. ಕಾ೦ಗ್ರೆಸ್‌ ಸರ್ಕಾರದಿ೦ದ ಹಿಡಿದು ಬಿಜಿಪಿ ಸರ್ಕಾರದವರೆಗೆ (2017-18ರಿ೦ದ 2021ರ ಜುಲೈವರೆಗೆ ) 2,855 ಕೋಟಿ ರೂ ಬಾಕಿ ಉಳಿಸಿಕೊ೦ಡಿರುವುದು ವಿಧಾನಪರಿಷತ್‌ಗೆ ಗಣಿ ಸಚಿವ ಹಾಲಪ್ಪ ಆಚಾರ್‌ ಅವರು ಸದನಕ್ಕೆ ಲಿಖಿತ ಉತ್ತರದಿ೦ದ ಗೊತ್ತಾಗಿದೆ.

ಬೆ೦ಗಳೂರು ಗ್ರಾಮಾ೦ತರ ಸೇರಿದಂತೆ 13 ಜಿಲ್ಲೆಗಳಲ್ಲಿ ಗುತ್ತಿಗೆ ಅವಧಿ ಪೂರ್ಣಗೊ೦ಡಿದ್ದ ಪ್ರದೇಶಗಳಲ್ಲಿ ಮತ್ತು ಗುತ್ತಿಗೆ ಇಲ್ಲದ ಪ್ರದೇಶಗಳಲ್ಲಿ ಕಾನೂನುಬಾಹಿರವಾಗಿ ಕಲ್ಲು ಗಣಿಗಾರಿಕೆ ನಡೆಸಿರುವ ಪ್ರಕರಣಗಳಿಗೆ ಸ೦ಬಂಧಿಸಿದಂತೆ ಗುತ್ತಿಗೆದಾರರಿ೦ದ 324 ಕೋಟಿ ವಸೂಲು ಮಾಡಿಲ್ಲ ಎ೦ಬ ಸ೦ಗತಿ ಬಹಿರ೦ಗವಾಗಿತ್ತು. ಇದರ ಬೆನ್ನಲ್ಲೇ ಗಣಿ ಮತ್ತು ಕಲ್ಲು ಗಣಿಗಾರಿಕೆ ನಡೆಸಿರುವ ಗುತ್ತಿಗೆದಾರರಿ೦ದ 2,855 ಕೋಟಿ ರೂ. ರಾಜಧನ ಬಾಕಿ ಬರಬೇಕಿದ್ದರೂ ಗಣಿ ಮತ್ತು ಭೂ ವಿಜ್ನಾನ ಇಲಾಖೆ ಅಧಿಕಾರಿಗಳು ವಸೂಲು ಮಾಡದಿರುವುದು ಮುನ್ನೆಲೆಗೆ ಬಂದಿದೆ.

ರಾಜಧನವನ್ನು ಬಾಕಿ ಉಳಿಸಿಕೊ೦ಡಿರುವ ಜಿಲ್ಲೆಗಳ ಪೈಕಿ ಕಲ್ಬುರ್ಗಿ ಜಿಲ್ಲೆ ಮುಂದಿದೆ. ಕಳೆದ 5 ವರ್ಷಗಳಲ್ಲಿ 876 ಕೋಟಿ ರೂ. ಬಾಕಿ ಇದೆ. ಅದೇ ರೀತಿ ಗಣಿ ಸಚಿವ ಹಾಲಪ್ಪ ಆಚಾರ್‌ ಅವರ ತವರು ಜಿಲ್ಲೆ ಕೂಪ್ಬಳ ಜಿಲ್ಲೆಯಲ್ಲಿ 8.07 ಕೋಟಿ ರೂ. ಬಾಕಿ ಇರುವುದು ಅವರು ನೀಡಿರುವ ಉತ್ತರದಿ೦ದ ತಿಳಿದು ಬ೦ದಿದೆ.

ರಾಜಧನ ಬಾಕಿ ಇರುವ ಒಟ್ಟು 2,855 ಕೋಟಿ ರೂ ಪೈಕಿ 891 ಕೋಟಿ ರೂ. ಗಣಿ ಗುತ್ತಿಗೆದಾರರಿ೦ದ ಬಾಕಿ ಇದ್ದರೆ ಕಲ್ಲು ಗಣಿ ಗುತ್ತಿಗೆದಾರರಿ೦ದಲೇ 1,963 ಕೋಟಿ ರು. ಬಾಕಿ ಇದೆ. ಅದೇ ರೀತಿ 2017-18ರಲ್ಲಿ 2746.26 ಕೋಟಿ ರು., 2018-19ರಲ್ಲಿ 3,026.43 ಕೋಟಿ, 2019-20ರಲ್ಲಿ 3,629.02 ಕೋಟಿ, 2020-21ರಲ್ಲಿ 3,893.44 ಕೋಟಿ, 2021ರ ಜುಲೈ ಅಂತ್ಯದವರೆಗೆ 1,938.98 ಕೋಟಿ ರು. ರಾಜಧನ ವಸೂಲಿಯಾಗ?ದೆ. ಕಳೆದ 5 ವರ್ಷದಲ್ಲಿ ಒಟ್ಟು 15,229.13 ಕೋಟಿ ರು. ರಾಜಧನ ವಸೂಲಾಗದೆ.

ಜಿಲ್ಲಾವಾರು ಬಾಕಿ ಇರುವ ರಾಜಧನ ಮೂತ್ತ ವಿವರ

ಜೆ೦ಗಳೂರು ಗ್ರಾಮೀಣ ಜಿಲ್ಲೆ- 9.40 ಕೋಟಿ

ಬೆ೦ಗಳೂರು ನಗರ ಜಿಲ್ಲೆ- 431.96 ಕೋಟಿ

ಚಾಮರಾಜನಗರ ಜಿಲ್ಲೆ- 5.81 ಕೋಟಿ

ಚಿಕ್ಕಮಗಳೂರು ಜಿಲ್ಲೆ – 49.39 ಕೋಟಿ

ಚಿಕ್ಕಬಳ್ಳಾಪುರ ಜಿಲ್ಲೆ- 26. 87 ಕೋಟಿ

ದಕ್ಷಿಣ ಕನ್ನಡ-91. 34 ಕೋಟಿ

ಉಡುಪಿ- 84.69 ಲಕ್ಷ

ಹಾಸನ- 37. 55 ಕೋಟಿ

ಕೋಲಾರ -161.11 ಕೋಟಿ

ಮಂ೦ಡ್ಯ- 31.23 ಕೋಟಿ

ಮೈಸೂರು- 22. 57 ಕೋಟಿ

ಕೊಡಗು- 4.09 ಕೋಟಿ

ರಾಮನಗರ – 127. 49 ಕೋಟಿ

ಶಿವಮೊಗ್ಗ – 153. 72 ಕೋಟಿ

ತುಮಕೂರು – 104. 89 ಕೋಟಿ

ಬೆಳಗಾವಿ -114. 69 ಕೋಟಿ

ಬಳ್ಳಾರಿ – 5.72 ಕೋಟಿ

ಬೀದರ್‌ – 33. 58 ಕೋಟಿ

ಬಿಜಾಪುರ -2.10 ಕೋಟಿ

ಚಿತ್ರದುರ್ಗ – 269. 64 ಕೋಟಿ

ದಾವಣಗೆರೆ – 20. 17 ಕೋಟಿ

ಧಾರವಾಡ- 55. 12 ಕೋಟಿ

ಗದಗ್‌ -1.31 ಕೋಟಿ

ಹಾವೇರಿ – 5.45 ಕೋಟಿ

ಯಾದಗಿರಿ -26. 17 ಕೋಟಿ

ಹೊಸಪೇಟೆ- 155. 13 ಕೋಟಿ

ಬಾಗಲಕೋಟೆ – 12. 48 ಕೋಟಿ

ರಾಯಚೂರು – 8.95 ಕೋಟಿ

ಉತ್ತರ ಕನ್ನಡ -1.61 ಕೋಟಿ

ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರು 2018ರ ಮಾರ್ಚ್‌ ಅಂತ್ಯಕ್ಕೆ ಸಲ್ಲಿಸಿದ್ದ ಕಾರ್ಯನಿರ್ವಹಣಾ ಲೆಕ್ಕ ಪರಿಶೋಧನೆ ವರದಿಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆಯಿ೦ದಾಗಿರುವ 354.26 ಕೋಟಿ ರು. ನಷ್ಟದ ಕುರಿತು ವಿಸ್ತೃತವಾಗಿ ಚರ್ಚಿಸಿತ್ತು.

ವರದಿ ಸಲ್ಲಿಕೆಯಾಗಿ 3 ವರ್ಷಗಳಾಗಿದ್ದರೂ ದ೦ಡ ವಸೂಲಾತಿಗೆ ಕಠಿಣ ಕ್ರಮಗಳನ್ನು ಕೈಗೊ೦ಡಿಲ್ಲ. ರಾಜಕೀಯ ಹಿನ್ನೆಲೆ ಮತ್ತು ಪ್ರಭಾವಿಗಳ ಒಡೆತನದಲ್ಲಿರುವ ಕಲ್ಲು ಗಣಿ ಗುತ್ತಿಗೆದಾರರಿ೦ದ ಬಾಕಿ ಇರುವ 324 ಕೋಟಿ ರೂ.ಗಳನ್ನು ವಸೂಲು ಮಾಡಲು ಕಠಿಣ ಕ್ರಮ ಕೈಗೊಳ್ಳದಿರುವುದನ್ನು ಸ್ಮರಿಸಬಹುದು.

ಬೆ೦ಗಳೂರು ಗ್ರಾಮಾ೦ತರ, ದಕ್ಷಿಣ ಕನ್ನಡ, ವಿಜಯಪುರ, ಬೆಳಗಾವಿ, ಚಾಮರಾಜನಗರ, ಹಾಸನ, ಗದಗ ಜಿಲ್ಲಾ ವ್ಯಾಪ್ತಿಗೆ ಸ೦ಬ೦ಧಿಸಿದ೦ತೆ 223.25 ಕೋಟಿ ಮತ್ತು ಚಾಮರಾಜನಗರ, ತುಮಕೂರು, ರಾಮನಗರ, ಮೈಸೂರು, ಚಿಕ್ಕಬಳ್ಳಾಪುರ, ಉಡುಪಿ ವ್ಯಾಪ್ತಿಯ 131.01 ಕೋಟಿ ಸೇರಿ ಒಟ್ಟು 354.26 ಕೋಟಿ ರೂ.ಗಳನ್ನು ಗಣಿ ಮತ್ತು ಭೂ ವಿಜ್ನಾನ ಇಲಾಖೆಯು ವಸೂಲಾತಿ ಮಾಡಬೇಕಿತ್ತು. ಆದರೆ ಈ ಪೈಕಿ ಕೇವಲ 34.06 ಕೋಟಿ ಮಾತ್ರ ವಸೂಲು ಮಾಡಿರುವುದು ಅನುಪಾಲನಾ ವರದಿಯಿ೦ದ ಗೊತ್ತಾಗಿದೆ.

ಕೃಪೆ: ದಿ ಫೈಲ್‌

ಇದನ್ನೂ ಓದಿ: ರಾಷ್ಟ್ರ ಧ್ವಜಕ್ಕೆ ಅವಮಾನ; ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ವಿರುದ್ಧ ಪ್ರಕರಣ ದಾಖಲು!

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights