ಉತ್ತರ ಪ್ರದೇಶ ಚುನಾವಣೆ: ಟಿಕೆಟ್ ಆಕಾಂಕ್ಷಿಗಳು 11,000 ರೂ ಠೇವಣಿ ಇಡುವಂತೆ ಕೇಳಿದ ಕಾಂಗ್ರೆಸ್‌!

ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಪಕ್ಷದ ಟಿಕೆಟ್ ಆಕಾಂಕ್ಷಿಗಳು ತಮ್ಮ ಅರ್ಜಿಗಳೊಂದಿಗೆ 11,000 ರೂ.ಗಳನ್ನು ಠೇವಣಿ ಇಡಬೇಕು ಎಂದು ಉತ್ತರ ಪ್ರದೇಶ ಕಾಂಗ್ರೆಸ್ ಹೇಳಿದೆ. ಈ ಕ್ರಮವು ಗಂಭೀರವಾಗಿಲ್ಲದ ಅಭ್ಯರ್ಥಿಗಳನ್ನು ದೂರವಿರಿಸಲು ಉದ್ದೇಶಿಸಿದೆ ಎಂದು ಯುಪಿ ಕಾಂಗ್ರೆಸ್‌ ಅಧ್ಯಕ್ಷ ಅಜಯ್ ಕುಮಾರ್ ಲಲ್ಲು ಹೇಳಿದ್ದಾರೆ.

“ಎಲ್ಲಾ ಅರ್ಜಿದಾರರು ತಮ್ಮ ಅರ್ಜಿಗಳನ್ನು ಕೊಡುಗೆ ಮೊತ್ತ 11,000 ರೂ. ಜೊತೆಗೆ ಜಿಲ್ಲಾ/ರಾಜ್ಯ ಮಟ್ಟದ ನಾಯಕರಿಗೆ ಸೆಪ್ಟೆಂಬರ್ 25, 2021 ರೊಳಗೆ ಸಲ್ಲಿಸಬೇಕು” ಎಂದು ಅವರು ಹೇಳಿದ್ದಾರೆ.

ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ನೇತೃತ್ವದಲ್ಲಿ ನಡೆದ ಎರಡು ದಿನಗಳ ಚಿಂತನಾ ಸಭೆಯಲ್ಲಿ ನಿರೀಕ್ಷಿತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬೇಕು ಎಂದು ನಿರ್ಧರಿಸಿ, ಸೂಚನೆ ನೀಡಿದೆ.

“ಮುಂಬರುವ ಚುನಾವಣೆಗಳಲ್ಲಿ ಸ್ಪರ್ಧಿಸಲು ಆಸಕ್ತಿ ಹೊಂದಿರುವ ಆಕಾಂಕ್ಷಿಗಳು ರಾಜ್ಯ ಅಥವಾ ಜಿಲ್ಲಾ ಕೇಂದ್ರದಲ್ಲಿ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು” ಎಂದು ಕಾಂಗ್ರೆಸ್ ವಕ್ತಾರರಾದ ಡಾ ಉಮಾ ಶಂಕರ್ ಪಾಂಡೆ ಹೇಳಿದ್ದಾರೆ.

ಇದನ್ನೂ ಓದಿ: ರಾಷ್ಟ್ರ ಧ್ವಜಕ್ಕೆ ಅವಮಾನ; ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ವಿರುದ್ಧ ಪ್ರಕರಣ ದಾಖಲು!

ನಾಮನಿರ್ದೇಶನ ಪ್ರಕ್ರಿಯೆ ಆರಂಭವಾಗುವುದರೊಂದಿಗೆ, ಗಂಭೀರವಾಗಿಲ್ಲದ ಜನರೂ ಕೂಡ ಅರ್ಜಿಯನ್ನು ಸಲ್ಲಿಸುತ್ತಾರೆ. ಇದು ಅನಗತ್ಯ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಹೀಗಾಗಿ, ಕೊಡುಗೆ ಮೊತ್ತವನ್ನು ಕೇಳುವ ನಿರ್ಧಾರದೊಂದಿಗೆ ಗಂಭೀರವಾಗಿಲ್ಲದ ಅಭ್ಯರ್ಥಿಗಳನ್ನು ಹೊರಗಿಡಾಗುತ್ತದೆ ಎಂದು ಪಕ್ಷದ ಹಿರಿಯ ಪದಾಧಿಕಾರಿ ಹೇಳಿದ್ದಾರೆ.

ಕೊಡುಗೆ ಹಣ ಪಡೆದುಕೊಳ್ಳುವುದು ಹೊಸತೇನೂ ಅಲ್ಲ. ಎಲ್ಲಾ ವಿರೋಧ ಪಕ್ಷಗಳು ಅದನ್ನು ತಮ್ಮ ಪಕ್ಷದ ಖಾತೆಗಳಲ್ಲಿ ಠೇವಣಿಯಾಗಿ ತೆಗೆದುಕೊಳ್ಳುತ್ತವೆ  ಎಂದು ಅವರು ಪ್ರತಿಪಾದಿಸಿದ್ದಾರೆ.

“ಎಲ್ಲವೂ ಪಾರದರ್ಶಕವಾಗಿದೆ. ಮೊತ್ತವನ್ನು ಯುಪಿಸಿಸಿ ನಿಧಿಯಲ್ಲಿ ಜಮಾ ಮಾಡಲಾಗುತ್ತದೆ” ಎಂದು ಅವರು ಹೇಳಿದ್ದಾರೆ.

ಆರ್‌ಟಿಜಿಎಸ್, ಡಿಮ್ಯಾಂಡ್ ಡ್ರಾಫ್ಟ್ ಅಥವಾ ಪೇ ಆರ್ಡರ್ ಮೂಲಕ ಠೇವಣಿ ಇಡಬಹುದು ಮತ್ತು ರಸೀದಿಯನ್ನು ನೀಡಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

2017 ರಲ್ಲಿ ನಡೆದ ಉತ್ತರ ಪ್ರದೇಶ ಚುನಾವಣೆಯಲ್ಲಿ ಪಕ್ಷವು 403 ಕ್ಷೇತ್ರಗಳಲ್ಲಿ ಕೇವಲ 7 ಸ್ಥಾನಗಳಲ್ಲಿ ಗೆದ್ದಿತ್ತು.

ಇದನ್ನೂ ಓದಿ: ಬಾಕಿ ಉಳಿದಿದೆ ಗಣಿ ಗುತ್ತಿಗೆದಾರರು ನೀಡಬೇಕಿದ್ದ 2,855 ಕೋಟಿ ರೂ ರಾಜಧನ; ವಸೂಲಿಗೆ ಸರ್ಕಾರಕ್ಕೆ ಹಿಂದೇಟು!

Spread the love

Leave a Reply

Your email address will not be published. Required fields are marked *