ಓಡಿಹೋಗಲು ಯತ್ನ : ಕುತ್ತಿಗೆಗೆ ಟೈರ್‌ ಹಾಕಿ ನೃತ್ಯ ಮಾಡಲು ಯುವಕ-ಯುವತಿಗೆ ಒತ್ತಾಯ!

ಓಡಿಹೋಗಲು ಯತ್ನಿಸಿದ ದಂಪತಿಗಳಿಗೆ ಸ್ಥಳೀಯರು ಕುತ್ತಿಗೆಗೆ ಟೈರ್‌ ಹಾಕಿ ನೃತ್ಯ ಮಾಡಲು ಒತ್ತಾಯಿಸಿದ ಅಮಾನವೀಯ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಮಧ್ಯಪ್ರದೇಶದ ಧರ್ ಮೂಲದ 21 ವರ್ಷದ ಯುವಕ ಮತ್ತು 19 ವರ್ಷದ ಯುವತಿಗೆ ಕುತ್ತಿಗೆಗೆ ಬೈಕ್ ಟೈರ್ ಹಾಕಿಕೊಂಡು ನೃತ್ಯ ಮಾಡುವಂತೆ ಒತ್ತಾಯಿಸಿದ ವಿಡಿಯೋ ವೈರಲ್ ಆಗಿದೆ.

ಸೆಪ್ಟೆಂಬರ್ 12 ರಂದು ಕುಂಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಧಾರ ಪೊಲೀಸರು ಐದು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಮತ್ತು ಮೂವರನ್ನು ಮಂಗಳವಾರ ಬಂಧಿಸಿದ್ದಾರೆ.

ವಿಡಿಯೋ ಕ್ಲಿಪ್‌ನಲ್ಲಿ ಮೂವರಿದ್ದು ಮತ್ತೋರ್ವ 13 ವರ್ಷದ ಬಾಲಕಿಯೂ ಸಹ ಪರಾರಿಯಾಗಲು ಸಹಾಯ ಮಾಡಿದ್ದಾಳೆಂದು ಆರೋಪಿಸಿ ಅವಳಿಗೂ ಬಲವಂತವಾಗಿ ನೃತ್ಯ ಮಾಡಲು ಒತ್ತಾಯಿಸಲಾಗಿದೆ. ಜೊತೆಗೆ ವಿಡಿಯೋದಲ್ಲಿ ಲಾಠಿಗಳಿಂದ ಹೊಡೆದಿರುವುದು ಸೆರೆಯಾಗಿದೆ. ಕ್ಲಿಪ್‌ನಲ್ಲಿ ಇತರರು ನಗುವುದನ್ನು ಕೇಳಬಹುದು.

ಜಿಲ್ಲಾ ಕೇಂದ್ರದಿಂದ 70 ಕಿಮೀ ದೂರದಲ್ಲಿರುವ ಗಾಂಧವಾನಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪುರುಷ ಮತ್ತು ಮಹಿಳೆ ತಮ್ಮ ಗ್ರಾಮಕ್ಕೆ ಮರಳಿದ ನಂತರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದೇವೇಂದ್ರ ಪಾಟಿದಾರ್ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.

ಈ ವರ್ಷದ ಜುಲೈನಲ್ಲಿ ಯುವತಿ ತನ್ನ ಮನೆಯಿಂದ ನಾಪತ್ತೆಯಾಗಿದ್ದಳು. ನಂತರ ಇವರಿಬ್ಬರು ಗುಜರಾತ್‌ಗೆ ಹೋಗಿದ್ದಾರೆ. ಸೆಪ್ಟೆಂಬರ್ ಎರಡನೇ ವಾರದಲ್ಲಿ ತನ್ನ ಪ್ರಿಯತಮನೊಂದಿಗೆ ಯುವತಿ ಗ್ರಾಮಕ್ಕೆ ಮರಳಿದ್ದಳು.

“ಆಕೆಯು ಒಬ್ಬ ವ್ಯಕ್ತಿಯೊಂದಿಗೆ ಪರಾರಿಯಾಗಿದ್ದರಿಂದ ಆಕೆಯ ಕುಟುಂಬದ ಸದಸ್ಯರು ಕೋಪಗೊಂಡಿದ್ದರು. ಮತ್ತೊಬ್ಬ ಬಾಲಕಿ (ವಿಡಿಯೋದಲ್ಲಿ ನೋಡಲಾಗಿದೆ) ಯುವತಿಯನ್ನು ತನ್ನ ಮನೆಯಿಂದ ಪಲಾಯನ ಮಾಡಲು ಸಹಾಯ ಮಾಡಿದ್ದಾಳೆ ಎಂದು ಶಂಕಿಸಿ ಈ ಮೂವರ ಕುತ್ತಿಗೆಗೆ ಟೈರ್ ಹಾಕಿ ನೃತ್ಯ ಮಾಡಿಸುವ ಮೂಲಕ ಅವರ ಕೃತ್ಯಕ್ಕೆ ಶಿಕ್ಷೆ ವಿಧಿಸಲಾಯಿತು” ಎಂದು ಪೊಲೀಸ್ ವರಿಷ್ಠಾಧಿಕಾರಿ ದೇವೇಂದ್ರ ಪಾಟಿದಾರ್ ಸುದ್ದಿಗಾರರಿಗೆ ತಿಳಿಸಿದರು.

ಈ ಘಟನೆಯ ವಿಡಿಯೋ ಮಂಗಳವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ, ಪೊಲೀಸರು ಐದು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಮತ್ತು ಅವರಲ್ಲಿ ಮೂವರನ್ನು ಬಂಧಿಸಿದ್ದಾರೆ. ಇತರ ಇಬ್ಬರು ಆರೋಪಿಗಳನ್ನು ಹಿಡಿಯಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಹೇಳಿದರು.

ಆರೋಪಿಗಳನ್ನು ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 354 , 147 (ಗಲಭೆ) ಮತ್ತು 294 (ಅಶ್ಲೀಲ ಕಾಯ್ದೆ) ಮತ್ತು ರಕ್ಷಣೆಯ ನಿಬಂಧನೆಗಳ ಅಡಿಯಲ್ಲಿ ಬಂಧಿಸಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights