ವಾಕಿಂಗ್ ಸ್ಟಿಕ್‌ನೊಂದಿಗೆ ಚಿರತೆಯ ವಿರುದ್ಧ ಹೋರಾಡಿದ ಮಹಿಳೆ : ವಿಡಿಯೋ ವೈರಲ್!

ಕೆಲವೊಂದು ಬಾರಿ ನಮ್ಮೊಂದಿಗಿರುವ ಸಣ್ಣ ಪುಟ್ಟ ವಸ್ತುಗಳು ಪ್ರಾಣ ಉಳಿಸಿಕೊಳ್ಳಲು ಸಹಾಯ ಮಾಡುತ್ತವೆ. ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಕಳ್ಳರು ಕಳ್ಳತನಕ್ಕೆ ಮುಂದಾದಾಗ ಅಥವಾ ಯಾವುದೇ ಪ್ರಾಣಿಗಳು ದಾಳಿ ಮುಂದಾದಾಗ ಪ್ರತಿ ದಾಳಿ ಮಾಡಲು ಕೈಯಲ್ಲಿರುವ ಬ್ಯಾಗ್, ಮೊಬೈಲ್ ಮತ್ತು ವಾಕಿಂಗ್ ಸ್ಟಿಕ್ ಇವೆಲ್ಲವೂ ಒಂದಲಾ ಒಂದು ರೀತಿ ಅನುಕೂಲಕರವಾಗಿದೆ. ಹೀಗೊಂದು ವಿಡಿಯೋದಲ್ಲಿ ಮಹಿಳೆಯ ಕೈಯಲ್ಲಿದ್ದ ವಾಕಿಂಗ್ ಸ್ಟಿಕ್ ಚಿರತೆಯನ್ನು ಓಡಿಸಲು ಸಹಕಾರಿಯಾಗಿದೆ ಅಂದರೆ ನಂಬಲು ಅಸಾಧ್ಯತೆ.

ಹೌದು.. ವೈರಲ್ ವೀಡಿಯೋದಲ್ಲಿ ಮುಂಬೈನ ಅರೆಯಲ್ಲಿ ನಿರ್ಮಲಾ ದೇವಿ ಸಿಂಗ್ (55) ಎಂಬುವವರ ಮೇಲೆ ಚಿರತೆಯೊಂದು ದಾಳಿ ಮಾಡಿದೆ. ಬುಧವಾರ ಸಂಜೆ ದೇವಿ ಸಿಂಗ್ ತನ್ನ ವಾಕಿಂಗ್ ಸ್ಟಿಕ್‌ನಿಂದ ಮೆಲ್ಲನೆ ನಡೆದುಕೊಂಡು ಮನೆಹೊರಗೆ ಬಂದಿದ್ದಾರೆ. ಮನೆ ಬಳಿ ಇದ್ದ ಕಟ್ಟೆಯ ಮೇಲೆ ಕುಳಿತುಕೊಂಡಿದ್ದ ಮಹಿಳೆಯ ಮೇಲೆ ಅದಾಗಲೆ ಬಂದು ಹೊಂಚು ಹಾಕಿ ಕಾಯುತ್ತಿದ್ದ ಚಿರತೆ ಏಕಾಏಕಿ ದಾಳಿ ಮಾಡಿದೆ. ಕೂಡಲೇ ದೇವಿ ಸಿಂಗ್ ಕೈಯಲ್ಲಿದಕ್ಕ ಕೋಲಿನಿಂದ ಚಿರತೆ ಮಾಲೆ ದಾಳಿ ಮಾಡಿ ಕಿರುಚಾಡಿದ್ದಾಳೆ. ಮಹಿಳೆಯ ಪ್ರತಿದಾಳಿಗೆ ಹೆದರಿ ಚಿರತೆ ಸ್ಥಳದಿಂದ ಕಾಲ್ಕಿತ್ತಿದೆ. ಅಷ್ಟರಲ್ಲಿ ಮನೆಯ ಸದಸ್ಯರು ಹೊರಓಡಿ ಬಂದಿದ್ದಾರೆ. ಇಡೀ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಘಟನೆಯಲ್ಲಿ ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಎರಡು ದಿನಗಳ ಹಿಂದೆ 4 ವರ್ಷದ ಬಾಲಕನ ಮೇಲೆ ಚಿರತೆ ದಾಳಿ ನಡೆಸಿತ್ತು. ಬಾಲಕ ತನ್ನ ನಿವಾಸದ ಹೊರಗೆ ಆಟವಾಡುತ್ತಿದ್ದಾಗ ಚಿರತೆ ಆತನನ್ನು ಎಳೆದುಕೊಂಡು ಹೋಗಲು ಯತ್ನಿಸಿತು. ಸ್ಥಳೀಯರು ರಕ್ಷಿಸಲು ಮುಂದಾದ ನಂತರ ಬಾಲಕನನ್ನು ರಕ್ಷಿಸಲಾಗಿದೆ.

ಆರೆ, ವಿಶಾಲವಾದ ಹಸಿರಿನಿಂದ ಆವೃತವಾಗಿದೆ ಮತ್ತು ವಿವಿಧ ರೀತಿಯ ಪ್ರಾಣಿಗಳು ಮತ್ತು ಪಕ್ಷಿಗಳಿಗೆ ನೆಲೆಯಾಗಿದೆ. ಚಿರತೆಗಳು ವಸತಿ ಪ್ರದೇಶಗಳಿಗೆ ನುಗ್ಗುವ ಹಲವಾರು ಘಟನೆಗಳಿಗೆ ಸಾಕ್ಷಿಯಾಗಿದೆ. ಈ ಪ್ರದೇಶವು ಮುಂಬಯಿಯಲ್ಲಿ ಉಳಿದಿರುವ ಕೊನೆಯ ಹಸಿರು ತಾಣವಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights